ಬೆಳೆಯುತ್ತಿರುವ ಬಾಲ ಪ್ರತಿಭೆ 

0

ಶಿಕ್ಷಕ ಗೋಪಾಲಕೃಷ್ಣ ನೇರಳೆಕಟ್ಟೆ ಮತ್ತು ಸ್ವಪ್ನ ದಂಪತಿಗಳ ಸುಪುತ್ರನಾದ ತರುಣಕೃಷ್ಣ

ಬಡಗನ್ನೂರು: ನೇರಳಕಟ್ಟೆ ಶಿಕ್ಷಕ  ಗೋಪಾಲಕೃಷ್ಣ ನೇರಳೆಕಟ್ಟೆ ಮತ್ತು ಸ್ವಪ್ನ ದಂಪತಿಗಳ ಸುಪುತ್ರನಾದ ತರುಣಕೃಷ್ಣ ಎಳೆಯ ವಯಸ್ಸಿನಲ್ಲಿಯೆ ಸಾಂಸ್ಕೃತಿಕ ,ಕ್ರೀಡಾ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಒಬ್ಬ ಉತ್ತಮ ಕ್ರೀಡಾಪಟುವಾಗಿ ಹಾಗೂ ಕಲಾವಿದನಾಗಿ ಬೆಳೆಯುತ್ತಿದ್ದಾನೆ.

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಈತ ಈಗಾಗಲೇ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಡೆಸಲ್ಪಡುವ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಗೊಂಡಿರುತ್ತಾನೆ. ಅಲ್ಲದೆ 14ರ ವಯೋಮಾನದ ಒಲಿಂಪಿಕ್ಸ್ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನವನ್ನು ನೀಡಿರುತ್ತಾನೆ .ಈತ ಕ್ರೀಡಾ ಕ್ಷೇತ್ರ ಮಾತ್ರವಲ್ಲದೆ ಯಕ್ಷಗಾನದಲ್ಲೂ ಪುಂಡು ವೇಷಧಾರಿಯಾಗಿ ಬೆಳೆಯುತ್ತಿದ್ದಾನೆ. ಕ್ರೀಡಾ ಚಟುವಟಿಕೆಗಳನ್ನು ದೖೆಹಿಕ ಶಿಕ್ಷಣ ಶಿಕ್ಷಕರಾದ ದಾಮೋದರ ಕಜೆ ಹಾಗೂ ಕಬಡ್ಡಿ ತರಬೇತಿಯನ್ನು ಮನೋಹರ್ ರವರು ನೀಡುತ್ತಿದ್ದಾರೆ.ಯಕ್ಷಗಾನವನ್ನು ಯಕ್ಷ ಗುರು ಚಂದ್ರಶೇಖರ ಸುಳ್ಯಪದವು ನೀಡುತ್ತಿದ್ದಾರೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಈ ಬಾಲ ಪ್ರತಿಭೆಯ ಕ್ರೀಡಾ ಚಟುವಟಿಕೆ ಹಾಗೂ ಕಲಾ ಚಟುವಟಿಕೆಗೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಮುಖ್ಯ ಗುರುಗಳಾದ ಆಶಾ ಬೆಳ್ಳಾರೆ  ನಳಿನಿ ವಾಗ್ಲೇ ಹಾಗೂ ಶಿಕ್ಷಕ ವೃಂದದವರು ಪ್ರೋತ್ಸಾಹ ನೀಡುತ್ತ ಬರುತ್ತಿದ್ದಾರೆ. 

LEAVE A REPLY

Please enter your comment!
Please enter your name here