ಪುತ್ತೂರು: ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ದಕ್ಷಿಣ ಕನ್ನಡ ಉಪನಿರ್ದೇಶಕರ ಕಛೇರಿ, ಶಾಲಾ ಶಿಕ್ಷಣ ಇಲಾಖೆ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಸುಳ್ಯ ಇವರ ವತಿಯಿಂದ ಸರಕಾರಿ ಪದವಿ ಪೂರ್ವ ಕಾಲೇಜು ಪಂಜ ಇಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು 17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಜಿ.ಎಂ ಕೀರ್ತಿ ಎತ್ತರ ಜಿಗಿತದಲ್ಲಿ 01.60 ಮೀಟರ್ ಮತ್ತು ತ್ರಿವಿಧ ಜಿಗಿತದಲ್ಲಿ 11.34ಮೀ ಹಾಗೂ 100ಮೀ ಅಡೆತಡೆ ಓಟದಲ್ಲಿ 15.02 ಸೆಕೆಂಡ್ನಲ್ಲಿ ಓಡಿ 3 ವಿಭಾಗಗಳಲ್ಲೂ ನೂತನ ಕೂಟ ದಾಖಲೆಯೊಂದಿಗೆ ವೈಯಕ್ತಿಕ ಚಾಂಪಿಯನ್ ಶಿಫ್ ಗಳಿಸಿದ್ದಾಳೆ.
ರುತಿಕ್ – ಉದ್ದ ಜಿಗಿತ – ದ್ವಿತೀಯ ಸ್ಥಾನ, 4×100, ರಿಲೇ ಪ್ರಥಮ ಸ್ಥಾನ (ಜಿ.ಎಂ.ಕೀರ್ತಿ, ಪ್ರತೀಕ್ಷ, ಗುಣಶ್ರೀ, ತ್ರಿಷಾ) ಮತ್ತು 14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಸ್ವಾತಿ 80ಮೀ ಅಡೆತಡೆ ಓಟದಲ್ಲಿ ಪ್ರಥಮ ಸ್ಥಾನ ಮತ್ತು ಎತ್ತರ ಜಿಗಿತದಲ್ಲಿ ತೃತೀಯ ಸ್ಥಾನ, ಪ್ರಗತಿ – 400ಮೀ ಓಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಗೊಂಡಿದ್ದಾರೆ.