ಕುಂಜಾರು ಮದಗ ಶ್ರೀ ಜನಾರ್ದನ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ವಸಂತ ಸಪಲ್ಯ ಕುಂಜಾರು ಆಯ್ಕೆ

0

ಪುತ್ತೂರು: ಕುಂಜಾರು ಮದಗ ಶ್ರೀ ಜನಾರ್ದನ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ವಸಂತ ಸಪಲ್ಯ ಕುಂಜಾರು ಆಯ್ಕೆಯಾಗಿದ್ದಾರೆ.

ಸಮಾಜ ಸೇವಕರು ಕಲಾ ಪೋಷಕರು, ಕಲಾ ಆರಾಧಕರಾಗಿರುವ ವಸಂತ ಅವರು ಅನಾಥ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ ಆ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಿದ್ದಾರೆ.ಮುಂಬೈನಲ್ಲಿ ನೆಲೆಸಿರುವ ವಸಂತ ಅವರು ತನ್ನ ತಾಯಿ ಹೆಸರಿನಲ್ಲಿ ಮುಂಬೈಯಲ್ಲಿ ಗಿರಿಜಾ ವೆಲ್ಫೇರ್ ಎಂಬ ಸಂಸ್ಥೆಯನ್ನು ಕಟ್ಟಿ, ಅದರ ಮೂಲಕ ಸಾವಿರಾರು ಮಕ್ಕಳಿಗೆ ವಿದ್ಯಾಭ್ಯಾಸ, ಅನಾಥ ವೃದ್ಧೆಯರಿಗೆ ದಾರಿ ದೀಪವಾಗಿ ನಿಸ್ವಾರ್ಥ ಸೇವೆ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.


ಕೊಡುಗೈ ದಾನಿ ಎಂದೇ ಗುರುತಿಸಿಕೊಂಡಿರುವ ವಸಂತ ಸಪಲ್ಯ ಅವರು, ವಿವಿಧ ಸಂಘ ಸಂಸ್ಥೆಗಳಿಗೆ, ಬಡ ಕಲಾವಿದರಿಗೆ, ಸಂಘಟಕರಿಗೆ ತನ್ನ ಕೈಲಾದ ನೆರವನ್ನು ನೀಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರಾಗಿದ್ದಾರೆ. ಇದೀಗ, ಕುಂಜಾರು ಮದಗ ಶ್ರೀ ಜನಾರ್ದನ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here