ಪುತ್ತೂರು: ಕೆದಂಬಾಡಿ ಗ್ರಾಮ ದೈವ ಶ್ರೀರಾಡಿ ದೈವಕ್ಕೆ ಸಮರ್ಪಣೆಯಾಗಲಿರುವ ಬಂಡಿ,ಬಂಡಿಕೊಟ್ಯ,ಬಂಡಿ ನಡೆಯ, ಕಾರ್ಯಕ್ಕೆ ಧನ ಸಹಾಯ ಸಂಗ್ರಹಿಸುವ ಮನವಿ ಪತ್ರವನ್ನು ನ. 16 ರಂದು ದೈವಸ್ಥಾನದಲ್ಲಿ ವಠಾರದಲ್ಲಿ ಬಿಡುಗಡೆಗೊಳಿಸಲಾತು.
ಗಣಪತಿ ಭಟ್ ಸನ್ಯಾಸಿ ಗುಡ್ಡೆ ದೀಪ ಬೆಳಗಿಸಿ ಶುಭಹಾರೈಸಿದರು.ಡೆಕ್ಕಳ ರಾಮಯ್ಯ ರೈ, ಕರುಣಾಕರ ರೈ ಅತ್ರೆಜಾಲು, ರಾಜೀವ ರೈ ಕೊರಂಗ, ಬೆದ್ರುಮಾರು ಜೈಶಂಕರ್ ರೈ, ಕುಯ್ಯಾರು ರವೀಂದ್ರನಾಥ ರೈ,ಬೈಂಕಿ ರೈ ಅಡ್ಡೆತ್ತಿಮಾರು, ಮುಂಡಾಳಗುತ್ತು ರಾಮಕೃಷ್ಣ ಆಳ್ವ,ಮುಂಡಾಳಗುತ್ತು ಸುಧಾಕರ ರೈ, ವಿಜಯ್ ಕುಮಾರ್ ರೈ ಕೊರಂಗ,ಮುಂಡಾಳಗುತ್ತು ಇಂದಿರಾ ರೈ, ವೀಣಾ ರೈ ಬೆದ್ರುಮಾರು, ಪರಮೇಶ್ವರ ಪೂಜಾರಿ,ಚಂದ್ರ ನಲಿಕೆ ಇದ್ಪಾಡಿ,ಸುಲೋಚನ ಎಡಮುಗೇರು, ರಾಧಕೃಷ್ಣ ಪೂಜಾರಿ ಇದ್ಪಾಡಿ, ಕರುಣಾಕರ ರೈ ಕೊರಂಗ,ಮುಂಡಾಳಗುತ್ತು ಮೋಹನ್ ಆಳ್ವ,ರಾಘವ ಗೌಡ ಕೆರೆಮೂಲೆ, ಇದ್ಯಾಪೆ ರಕ್ಷಿತ್ ಗೌಡ, ಸತೀಶ್ ಪಟ್ಟೆತ್ತಡ್ಕರವರುಗಳು ಉಪಸ್ಥಿತರಿದ್ದರು.
ಹೇಮಳ ವಸಂತಿ ಗಂಗಾಧರ ಗೌಡ ಇದ್ಯಾಪೆ ಮತ್ತು ಮನೆಯವರ ಸೇವಾರ್ಥವಾಗಿ ಸಂಕ್ರಮಣ ತಂಬಿಲ ಸೇವೆಯ ಹಾಗೂ ಅನ್ನಸಂತರ್ಪಣೆ ನಡೆಯಿತು
