ಆಲಂಕಾರು: ಗೋಳಿತ್ತಡಿ–ಏಣಿತಡ್ಕ–ಕುದ್ಲೂರು ಸಂಪರ್ಕ ರಸ್ತೆಯ ಸುಮಾರು 4ಕಿ.ಮೀ. ವ್ಯಾಪ್ತಿಯಲ್ಲಿ ಉಂಟಾಗಿದ್ದ ಹೊಂಡಗಳಿಗೆ ಪ್ರತಿಫಲಾಪೇಕ್ಷೆಯಿಲ್ಲದೆ, ಸ್ವಯಂಪ್ರೇರಿತವಾಗಿ ಹಾಗೂ ಏಕಾಂಗಿಯಾಗಿ ಮಣ್ಣು ಹಾಕಿ ರಸ್ತೆಯ ಹೊಂಡ ಮುಚ್ಚುವ ಮೂಲಕ ಜನಸೇವೆಗೆ ಮಾದರಿಯಾದ ಇಸಾಕ್ ಬಿ. ಕುದ್ಲೂರು ಅವರನ್ನು ಕುಂಡಾಜೆ ಫ್ಯಾಮಿಲಿ ವತಿಯಿಂದ ಸನ್ಮಾನಿಸಲಾಯಿತು.
ಎಂ.ಆರ್.ಜೆ.ಎಂ ಕುಂಡಾಜೆಯ ಅಧ್ಯಕ್ಷ ಎಸ್.ಕೆ.ಹಮೀದ್, ರಫೀಕ್ ಟೋಟ್ ಕುಂಡಾಜೆ, ಉಸ್ಮಾನ್ ಕುಂಡಾಜೆ, ಇರ್ಷಾದ್ ಕುಂಡಾಜೆಯವರು ಅವರ ಮನೆಗೆ ತೆರಳಿ ಸನ್ಮಾನಿಸಿದರು.