ರಾಜ್ಯಮಟ್ಟದ ರೀಲ್ಸ್ ಸ್ಪರ್ಧೆ : ಡಾ| ನಂದೀಶ್ ತಂಡಕ್ಕೆ ತೃತೀಯ ಬಹುಮಾನ

0

ಉಪ್ಪಿನಂಗಡಿ: ಕರ್ನಾಟಕ ಸರಕಾರದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವದ ಅಂಗವಾಗಿ ರಾಜ್ಯ ಮಟ್ಟದಲ್ಲಿ ಆಯೋಜಿಸಲಾದರೀಲ್ಸ್ ಮಾಡಿ ಬಹುಮಾನ ಗೆಲ್ಲಿ’ ಸ್ಪರ್ಧೆಯಲ್ಲಿ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ| ನಂದೀಶ್ ವೈ ಡಿ.ಯವರ ರವರ ನೇತೃತ್ವದ ತಂಡ ತೃತಿಯ ಬಹುಮಾನವನ್ನು ನಗದು ಪುರಸ್ಕಾರದೊಂದಿಗೆ ಪಡೆದಿದೆ.


ಬುಧವಾರ ಬೆಂಗಳೂರಿನಲ್ಲಿ ನಡೆದ ಪರಿಸರ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಸ್ಪರ್ಧಾ ವಿಜೇತರಿಗೆ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತಿತರ ಗಣ್ಯಾತಿಗಣ್ಯರ ಸಮ್ಮುಖ ಸನ್ಮಾನ ಸಹಿತ ಬಹುಮಾನ ವಿತರಿಸಲಾಯಿತು.


ರೀಲ್ಸ್ ಸ್ಪರ್ಧೆಯ ಪ್ರಥಮ ಸ್ಥಾನ ಧರ್ಮಸ್ಥಳದ ದೀಕ್ಷಿತ್ (50 ಸಾವಿರ ರೂ ನಗರು ಪುರಸ್ಕಾರ ಸಹಿತ ಸನ್ಮಾನ ಪತ್ರ) , ದ್ವಿತೀಯ ಸ್ಥಾನ ಮೈಸೂರಿನ ಆರ್ ನಾಗೇಂದ್ರ (25 ಸಾವಿರ ರೂ ನಗದು ಪುರಸ್ಕಾರ ಸಹಿತ ಸನ್ಮಾನ ಪತ್ರ) , ತೃತೀಯ ಸ್ಥಾನ ಉಪ್ಪಿನಂಗಡಿಯ ಡಾ| ನಂದೀಶ್ ವೈ.ಡಿ. (10 ಸಾವಿರ ರೂ ಸಹಿತ ಸನ್ಮಾನ ಪತ್ರ ) ರವರಿಗೆ ಲಭಿಸಿತ್ತು. ಡಾ. ನಂದೀಶ್ ವೈ. ಡಿ. ತಮ್ಮ ಕಾಲೇಜಿನ ವಿದ್ಯಾರ್ಥಿಗಳ ಜೊತೆಗೂಡಿ ಹತ್ತು ಸಾವಿರ ವರ್ಷಗಳ ಹಿಂದಿದ್ದ ಕಾಡಿನಿಂದಾವೃತ ಪರಿಸರ ಕ್ರಮೇಣ ಕಾಡಿನೊಳಗೊಂದು ಮನೆಯಾಗಿ ಕ್ರಮೇಣ ಕಾಂಕ್ರೀಟ್‌ಮಯಗೊಳ್ಳುವ ಪರಿಸರದಿಂದ ಸಂಭವಿಸಬಹುದಾದ ಅಪಾಯಗಳನ್ನು ಕೆಲವೇ ನಿಮಿಷಗಳಲ್ಲಿ ವಿವರಿಸುವ ರೀಲ್ಸ್ ತಯಾರಿಸಿ ಆಯ್ಕೆ ಸಮಿತಿಯ ಮನ್ನಣೆಗೆ ಪಾತ್ರರಾಗಿದ್ದರು.

LEAVE A REPLY

Please enter your comment!
Please enter your name here