ಪುತ್ತೂರು; ನಾಳೆ(ನ.21) ಸೌದಿ ಅರೇಬಿಯಾದ ಅಲ್ ಜುಬೈಲ್ ನಲ್ಲಿ ನಡೆಯಲಿರುವ ಕೆಐಸಿ ಎಲೆವೇಶನ್ ಸಮ್ಮಿಟ್ ಕಾರ್ಯಕ್ರಮದಲ್ಲಿ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ,ಪುತ್ತೂರು ಶಾಸಕ ಅಶೋಕ್ ರೈ,ಕೆಪಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ,ಅನಿವಾಸಿ ಭಾರತೀಯ ಉದ್ಯಮಿಗಳಾದ ಝಕರಿಯ್ಯಾ ಜೋಕಟ್ಟೆ. ಯು ಟಿ ಇಫ್ತಿಕಾರ್ ಮೊಹಮ್ಮದ್ ಆಸಿಫ್ ,ಮುಸ್ತಫಾ ಭಾರತ್ ಸಹಿತ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.
ಕುಂಬ್ರ ಕರ್ನಾಟಕ ಇಸ್ಲಾಮಿಕ್ ಸೆಂಟರ್ ಇದರ ಅಂತರಾಷ್ಟ್ರಿಯ ಸಮಿತಿ ಅಧೀನದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು ನೂರಾರು ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ಇಸ್ಲಾಮಿಜ್ ಸೆಂಟರ್ ಜುಬೈಲ್ ಘಟಕದ ಅಧ್ಯಕ್ಷರಾದ ತ್ವಾಹಿರ್ ಹುಸೇನ್ ಸಾಲ್ಮರ ರವರು ತಿಳಿಸಿದ್ದಾರೆ.
