ಪುತ್ತೂರು: ಕೌಡಿಚ್ಚಾರ್ನಲ್ಲಿದ್ದ ತನ್ನ ಕ್ಯಾಂಟೀನ್ನಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುವ ವೇಳೆ ರಸ್ತೆ ದಾಟುವಾಗ ಆಟೋ ರಿಕ್ಷಾವೊಂದು ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟ ಅರಿಯಡ್ಕ ಗ್ರಾಮದ ಪಾಪೆಮಜಲು ನಿವಾಸಿ ಸುಭಾಷ್ ಕುಲಾಲ್ ಅವರ ಕುಟುಂಬಕ್ಕೆ ಕುಲಾಲ ಸಮಾಜ ಸೇವಾ ಸಂಘದಿಂದ ರೂ.15,೦೦೦ ಧನ ಸಹಾಯ ವನ್ನು ಅವರ ಮನೆಗೆ ತೆರಳಿ ಹಸ್ತಾಂತರಿಸಲಾಯಿತು.

ಕುಲಾಲ ಸಮಾಜ ಸೇವಾ ಸಂಘದ ಅಧ್ಯಕ್ಷ ಎಮ್ ಶೇಷಪ್ಪ ಕುಲಾಲ್, ಜತೆ ಕಾರ್ಯದರ್ಶಿ ತೇಜಕುಮಾರ್ ಕುಲಾಲ್ ಎನ್, ಸಾಂಸ್ಕೃತಿಕ ಕಾರ್ಯದರ್ಶಿ ಸುಧಾಕರ್ ಕುಲಾಲ್ ನಡುವಾಲ್, ಕ್ರೀಡಾ ಕಾರ್ಯದರ್ಶಿ ಹರೀಶ್ ಕುಲಾಲ್ ಶೇವಿರೆ, ಕಾರ್ಯಕಾರಿ ಸಮಿತಿ ಸದಸ್ಯ ಯತೀಶ್ ಕುಲಾಲ್ ಕೊರ್ಮಂಡ ಹಾಗೂ ವೆಂಕಪ್ಪ ಕುಲಾಲ್ ಕಾವು, ಬಾಲಕೃಷ್ಣ ಕುಲಾಲ್ ಸದ್ಗುರು ಚಿಕನ್ ಸೆಂಟರ್ ಕೌಡಿಚ್ಚಾರ್, ಸುಜಿತ್ ಕುಲಾಲ್ ಕೌಡಿಚ್ಚಾರ್, ನವೀನ್ ನನ್ಯ ಪಟ್ಟಾಜೆ ಉಪಸ್ಥಿತರಿದ್ದರು.