ಪುತ್ತೂರು: ಪುತ್ತೂರು ಪಾಂಗಳಾಯಿ ಶ್ರೀ ಅರಸು ಮುಂಡ್ಯತ್ತಾಯ ದೈವಸ್ಥಾನದ ವರ್ಷಾವಧಿ ನೇಮೋತ್ಸವವು 2026ರ ಜ.3 ರಂದು ನಡೆಯಲಿದ್ದು, ಅದರ ಆಮಂತ್ರಣ ಪತ್ರ ಬಿಡುಗಡೆಗೊಳಿಸಲಾಯಿತು.
ಗೋಪಾಲಕೃಷ್ಣ ನಾಯ್ಕರ ಅಧ್ಯಕ್ಷತೆಯಲ್ಲಿ ಸರಕಾರಿ ಅಭಿಯೋಜಕ ಮೋಹನ್ ಕುಮಾರ್ ಬಿ, ಬಾಟಾ ಮಳಿಗೆಯ ಪ್ರಸನ್ನ ಕುಮಾರ್ ಡಿ ಆರ್ ಕಲ್ಲಿಮಾರ್ ಅವರು ಆಮಂತ್ರಣ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಭಕ್ತಾದಿಗಳು ಊರಿನ ಹಿರಿಯರು ,ಪ್ರಮುಖರು ಹಾಗೂ ಗಣ್ಯರು ಉಪಸ್ಥಿತರಿದ್ದರು.
