ಪುತ್ತೂರು:ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುರುಷರಕಟ್ಟೆ ಇಂದಿರಾನಗರದಲ್ಲಿ ನ.21 ರಂದು ನಡೆದಿದೆ.
ಪುರುಷರಕಟ್ಟೆ ಇಂದಿರಾನಗರ ದಿ.ಪ್ರವೀಣ್ ಜೋಗಿ ಅವರ ಪುತ್ರ ಪ್ರತೀಕ್ (23ವ)ರವರು ಆತ್ಮಹತ್ಯೆ ಮಾಡಿಕೊಂಡವರು.
ಬೆಂಗಳೂರಿನಲ್ಲಿ ಶೋರೂಮ್ ವರ್ಕ್ ಶಾಪ್ ವೊಂದರಲ್ಲಿ ಉದ್ಯೋಗದಲ್ಲಿದ್ದ ಪ್ರತೀಕ್ ಇತ್ತೀಚೆಗೆ ಮನೆಗೆ ಬಂದಿದ್ದರು. ಮಧ್ಯಾಹ್ನ ಮೊಬೈಲ್ ನೋಡಿಕೊಂಡಿದ್ದ ಪ್ರತೀಕ್ ಏಕಾಏಕಿ ನಾಪತ್ತೆಯಾಗಿದ್ದರು. ಮನೆಮಂದಿ ನೋಡಿದಾಗ ಮನೆಯ ಕೊಠಡಿಯಲ್ಲಿ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮೃತರು ಸಹೋದರಿ ಮತ್ತು ಚಿಕ್ಕಪ್ಪನನ್ನು ಅಗಲಿದ್ದಾರೆ.ಮೃತರ ಚಿಕ್ಕಪ್ಪ ನೀಡಿದ ದೂರಿನಂತೆ ಪೊಲೀಸರ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಪ್ರತೀಕ್ ಅವರ ತಂದೆ ಪ್ರವೀಣ್ ಜೋಗಿ ಮತ್ತು ತಾಯಿ ಕಾವ್ಯ ಅವರು ಕೂಡಾ ಹಿಂದೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿದೆ.
