ರಾಮಕುಂಜ: ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು, ಸಮೂಹ ಸಂಪನ್ಮೂಲ ಕೇಂದ್ರ ರಾಮಕುಂಜ ಹಾಗೂ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಹಳೆನೇರಂಕಿ ಇವರ ಸಂಯುಕ್ತ ಆಶ್ರಯದಲ್ಲಿ ನ.19ರಂದು ನಡೆದ ರಾಮಕುಂಜ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯು ಕಿರಿಯ ಹಾಗೂ ಹಿರಿಯ ವಿಭಾಗದಲ್ಲಿ ಪ್ರಥಮ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.
ಹಿರಿಯ ವಿಭಾಗದಲ್ಲಿ ಕೆ.ವಿ ಪೃಥ್ವಿ 7ನೇ ತರಗತಿ (ಇಂಗ್ಲೀಷ್ ಕಂಠಪಾಠ ಪ್ರಥಮ), ಆರಾಧ್ಯ ಆರ್.ಕೆ 6ನೇ ತರಗತಿ (ಸಂಸ್ಕೃತ ಧಾರ್ಮಿಕ ಪಠಣ ಪ್ರಥಮ), ಅನ್ವಿತ 7ನೇ ತರಗತಿ (ಪ್ರಬಂಧ ರಚನೆ ಪ್ರಥಮ, ಕವನ ವಾಚನ ತೃತೀಯ), ಸಾನ್ವಿ 7ನೇ ತರಗತಿ (ಕಥೆ ಹೇಳುವುದು ಪ್ರಥಮ), ಧೃತಿ ಕೆ.ಎ. 7ನೇ ತರಗತಿ (ಅಭಿನಯ ಗೀತೆ ಪ್ರಥಮ), ಆರಾಧ್ಯ ಒ.ಆರ್.7ನೇ ತರಗತಿ (ದೇಶಭಕ್ತಿ ಗೀತೆ ದ್ವಿತೀಯ), ಆರ್ವಿ ಪ್ರಸಾದ್ 5ನೇ ತರಗತಿ (ಚಿತ್ರಕಲೆ ದ್ವಿತೀಯ), ಖುಷಿ ಜೆ ಹೆಚ್ 5ನೇ ತರಗತಿ (ಆಶುಭಾಷಣ ದ್ವಿತೀಯ), ಕುಷಿ ಪಿ 7ನೇ ತರಗತಿ (ಕನ್ನಡ ಕಂಠಪಾಠ ತೃತೀಯ), ಜಶೂನ್ ಎ.ಎಲ್. 5ನೇ ತರಗತಿ (ಮಿಮಿಕ್ರಿ ತೃತೀಯ) ಬಹುಮಾನ ಪಡೆದುಕೊಂಡಿದ್ದಾರೆ.
ಕಿರಿಯ ವಿಭಾಗದಲ್ಲಿ ರಿತ್ವಿ ಗೌಡ 4ನೇ ತರಗತಿ (ಇಂಗ್ಲೀಷ್ ಕಂಠಪಾಠ ಪ್ರಥಮ), ವೀಕ್ಷಾ ಆರ್ 4ನೇ ತರಗತಿ (ದೇಶಭಕ್ತಿ ಗೀತೆ ಪ್ರಥಮ, ಕಥೆ ಹೇಳುವುದು ತೃತೀಯ), ಉತ್ಸವಿ ಎಸ್ ಪ್ರತಿಕ್ಷಾ 4ನೇ ತರಗತಿ (ಭಕ್ತಿಗೀತೆ ಪ್ರಥಮ), ಪ್ರೀತಿ 4ನೇ ತರಗತಿ (ಕನ್ನಡ ಕಂಠಪಾಠ ದ್ವಿತೀಯ), ಮಹಿಮಾ ವಿ.ಪಿ. 4ನೇ ತರಗತಿ (ಸಂಸ್ಕೃತ ಧಾರ್ಮಿಕ ಪಠಣ ದ್ವಿತೀಯ), ಧನ್ವಿ ಜಿ.ವಿ 4ನೇ ತರಗತಿ (ಛದ್ಮವೇಷ ದ್ವಿತೀಯ), ಆದ್ವಿ ಪ್ರಸಾದ್ ಡಿ 4ನೇ ತರಗತಿ (ಅಭಿನಯ ಗೀತೆ ತೃತೀಯ) ಸ್ಥಾನ ಪಡೆದಿದ್ದಾರೆ. ಇವರಿಗೆ ಸಂಸ್ಥೆಯ ಕಾರ್ಯದರ್ಶಿ ಕೆ. ಸೇಸಪ್ಪ ರೈ, ಆಡಳಿತಾಧಿಕಾರಿಗಳು, ವ್ಯವಸ್ಥಾಪಕರು, ಪ್ರೌಢಶಾಲಾ ಹಾಗೂ ಪ್ರಾಥಮಿಕ ಶಾಲಾ ಮುಖ್ಯೋಪಾದ್ಯಾಯಿನಿಯರು, ಶಿಕ್ಷಕ ಶಿಕ್ಷಕೇತರ ವೃಂದದವರು ಶುಭ ಹಾರೈಸಿದ್ದಾರೆ.