ಅಂಬಿಕಾ ಪ.ಪೂ. ವಿದ್ಯಾಲಯದ ವರ್ಧಿನ್ ದೀಪಕ್ ರೈ ಎಸ್ಜಿಎಫ್ಐಗೆ ಆಯ್ಕೆ
ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪ್ರಥಮ ಪಿಯುಸಿಯ ವಿದ್ಯಾರ್ಥಿ ವರ್ಧಿನ್ ದೀಪಕ್ ರೈ ಅವರು ವಿದ್ಯಾಭಾರತಿ ರಾಷ್ಟ್ರಮಟ್ಟದ ಈಜುಸ್ಪರ್ಧೆಯಲ್ಲಿ ಬಹುಮಾನಗಳನ್ನು ಗಳಿಸಿ, ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್.ಜಿ.ಎಫ್.ಐ) ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
ವರ್ಧಿನ್ ದೀಪಕ್ ರೈ ಅವರು ಬೆಂಗಳೂರಿನ ತನಿಸಂದ್ರದ ಆರ್.ವಿ .ಕೆ. ಸ್ಕೂಲ್ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಈಜುಸ್ಪರ್ಧೆಯ 100 ಮೀಟರ್ ಬ್ರೆಸ್ಟ್ ಸ್ಟ್ರೋಕ್, 50 ಮೀಟರ್ ಬ್ರೆಸ್ಟ್ ಸ್ಟ್ರೋಕ್, 50 ಮೀಟರ್ ಬಟರ್ ಫ್ಲೈ, 4×100 ಮೀಟರ್ ಫ್ರೀ ಸ್ಟೈಲ್ ರಿಲೇಗಳಲ್ಲಿ ಪ್ರಥಮ ಸ್ಥಾನದೊಂದಿಗೆ 4 ಚಿನ್ನದ ಪದಕಗಳನ್ನು ಪಡೆದು ವೈಯಕ್ತಿಕ ಚಾಂಪಿಯನ್ಶಿಪ್ ಗಳಿಸಿ ಎಸ್.ಜಿ.ಎಫ್.ಐ ಗೆ ಅರ್ಹತೆ ಪಡೆದುಕೊಂಡಿದ್ದಾರೆ.
ಪುತ್ತೂರಿನ ಡಾ. ದೀಪಕ್ ರೈ ಮತ್ತು ವಜ್ರಾಕ್ಷಿ ಡಿ ರೈ ದಂಪತಿಯ ಪುತ್ರನಾಗಿರುವ ಇವರು ನವೆಂಬರ್ 30 ರಿಂದ ಡಿಸೆಂಬರ್ 5 ರವರೆಗೆ ದೆಹಲಿಯಲ್ಲಿ ನಡೆಯಲಿರುವ ಎಸ್.ಜಿ.ಎಫ್.ಐ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
