ರಾಮಕುಂಜ: ಹಳೆನೇರೆಂಕಿ ಸರಕಾರಿ ಉ.ಹಿ.ಪ್ರಾ.ಶಾಲೆಯಲ್ಲಿ ನಡೆದ ರಾಮಕುಂಜ ಕ್ಲಸ್ಟರ್ ಮಟ್ಟದ 2025ರ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ವಳಕಡಮ ಸರಕಾರಿ ಕಿ.ಪ್ರಾ.ಶಾಲೆಯ ಶಾಲೆಯ ವಿದ್ಯಾರ್ಥಿಗಳು ಹಲವು ಬಹುಮಾನ ಪಡೆದುಕೊಂಡಿದ್ದಾರೆ.
ಕಿರಿಯ ವಿಭಾಗದಲ್ಲಿ ಚಿತ್ರ ಕಲೆ-ಜೆರೋನ್ ಪ್ರಥಮ, ಛದ್ಮವೇಷ -ಯಶ್ವಿನ್ ಪ್ರಥಮ, ಧಾರ್ಮಿಕ ಪಠಣ(ಸಂಸ್ಕೃತ)-ಸ್ಪಂದನ ದ್ವಿತೀಯ, ಕಥೆ ಹೇಳುವುದು-ಸ್ಪಂದನ ದ್ವಿತೀಯ, ಭಕ್ತಿ ಗೀತೆ-ಪೃಥ್ವಿ ತೃತೀಯ, ಆಶುಭಾಷಣ-ತೃಷಾ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಶಾಲಾ ಮುಖ್ಯಗುರು ಮತ್ತು ಶಿಕ್ಷಕಿಯರು ತರಬೇತಿ ನೀಡಿದ್ದರು.
