ಈಶ್ವರಮಂಗಲ: ಈಶ್ವರಮಂಗಲ ಗಜಾನನ ವಿದ್ಯಾಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟವು ನ.22ರಂದು ನಡೆಯಿತು.

ಕ್ರೀಡಾಕೂಟ ಉದ್ಘಾಟನೆ ಮಾಡಿದ ಅರಣ್ಯಾಧಿಕಾರಿ ಕಿರಣ್ ಬಿ ಎಂ ಬಳಿಕ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು. ರಾಮಾಯಣದ ಹನುಮಂತನ ಕಥೆಯನ್ನು ವಿವರಿಸುವ ಮೂಲಕ ನಮ್ಮ ಸಾಮರ್ಥ್ಯದ ಅರಿವು ನಾವು ಅವಕಾಶವನ್ನು ಬಳಸಿಕೊಂಡಾಗ ಮಾತ್ರ ಅರಿಯಲು ಸಾಧ್ಯ. ಇಂದಿನ ಈ ಕ್ರೀಡಾಕೂಟ ನನ್ನ ಬಾಲ್ಯದ ದಿನಗಳನ್ನು ಮತ್ತೆ ನೆನಪಿಸುತ್ತದೆ ಎಂದ ಅವರು ಕ್ರೀಡಾಕೂಟಕ್ಕೆ ಶುಭಹಾರೈಸಿದರು.
ಅತಿಥಿಯಾಗಿ ಆಗಮಿಸಿದ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ರಾಜೇಂದ್ರ ಪ್ರಸಾದ್ ರೈರವರು ಮಾತನಾಡಿ, ಕ್ರೀಡಾಂಗಣದಲ್ಲಿ ಮಾತ್ರ ನಾವು ಸ್ಪರ್ಧಿಗಳು ಕ್ರೀಡಾಂಗಣದಿಂದ ಹೊರಹೋದಾಗ, ಎಂದಿನಂತೆ ಗೆಳೆಯರು ಸೋತಾಗ ಕುಗ್ಗದೆ ಗೆದ್ದವರನ್ನು ಇನ್ನಷ್ಟು ಹುರಿದುಂಬಿಸಬೇಕೆಂದರು.
ಶಾಲಾ ಪ್ರಾಂಶುಪಾಲ ಕೆ ಶಾಮಣ್ಣರವರು ಮಾತನಾಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಶಾಲಾಡಳಿತ ಮಂಡಳಿಯ ಸಂಚಾಲಕ ಶಿವರಾಮ್ ಪಿ ಮಾತನಾಡಿ, ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಕ್ರೀಡೆಗೆ ಉತ್ತಮ ತರಬೇತಿಯನ್ನು ನೀಡಿದಾಗ ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆಯನ್ನು ಮಾಡಲು ಸಾಧ್ಯ. ಕ್ರೀಡಾ ಕ್ಷೇತ್ರದಲ್ಲಿ ನಮ್ಮ ಶಾಲೆಯ ಕೀರ್ತಿ ಉನ್ನತ ಮಟ್ಟಕ್ಕೇರಲಿ ಎಂದು ಶುಭಹಾರೈಸಿದರು.
ಕ್ರೀಡಾಕೂಟದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ ಮಾತನಾಡಿ ರಾಷ್ಟ್ರ ಮಟ್ಟದಲ್ಲಿ ಮಿಂಚಿದ ಕ್ರೀಡಾಪಟುಗಳಿಗೆ ಈ ಕ್ರೀಡಾಂಗಣ ಸಾಕ್ಷಿಯಾಗಿದೆ. ಈ ಕ್ರೀಡಾಂಗಣದಲ್ಲಿ ಇನ್ನಷ್ಟು ಕ್ರೀಡಾಪಟುಗಳು ಉದಯಿಸಲಿ, ಹಾಗೂ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಗಜಾನನ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ನರೇಂದ್ರ ಭಟ್, ಶಾಲಾ ಆಡಳಿತ ಮಂಡಳಿಯ ನಿರ್ದೇಶಕರುಗಳಾದ ನಾಗಪ್ಪ ಗೌಡ ಬೊಮ್ಮಟ್ಟಿ, ಸೂರ್ಯನಾರಾಯಣ ಬೀರಮೂಲೆ, ಜೈರಾಜ್ ರೈ,ನಹುಷ ಪಿ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ರಾಜೇಂದ್ರ ಪ್ರಸಾದ್ ರೈ ಹಾಗೂ ಸದಸ್ಯರು, ನಿವೃತ್ತ ದೈಹಿಕ ಶಿಕ್ಷಕರಾದ ಆನಂದ ರೈ, ನಿವೃತ್ತ ಮಾಜಿ ಸೈನಿಕರಾದ ಸುಬ್ಬಪ್ಪ ಪಟ್ಟೆ, ಶಾಲಾ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯನಿ ಸೌಮ್ಯ ಎ ಸ್ವಾಗತಿಸಿ, ದೈಹಿಕ ಶಿಕ್ಷಕರಾದ ಪ್ರಶಾಂತ್ ಧನ್ಯವಾದ ಸಮರ್ಪಿಸಿದರು. ಕ್ರೀಡಾಮಂತ್ರಿ ಪ್ರಥಮ್ ಕ್ರೀಡಾ ಪ್ರತಿಜ್ಞೆ ಬೋಧಿಸಿದರು. ಹನುಮಗಿರಿ ಆಂಜನೇಯ ಕ್ಷೇತ್ರದಿಂದ ಕ್ರೀಡಾ ಜ್ಯೋತಿಯನ್ನು ಉನ್ನತ ಸಾಧನೆಗೆ ಗೈದ ಕ್ರೀಡಾಪಟುಗಳ ಮೂಲಕ ತರಲಾಯಿತು. ಶಿಕ್ಷಕಿ ಮಾಲಿನಿ ಕಾರ್ಯಕ್ರಮ ನಿರೂಪಿಸಿದರು.