ಪುತ್ತೂರು: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯ ಮೂಲಕ ಅವರ ಬದುಕನ್ನು ಹಸನುಗೊಳಿಸಲು ವಿನೂತನ ವೃತ್ತಿಪರ ಶಿಕ್ಷಣವನ್ನು ಪರಿಚಯಿಸಿ ಜನಮಾನಸದಲ್ಲಿ ಬೆರೆತಿರುವ ಪುತ್ತೂರಿನ ಅಕ್ಷಯ ಶಿಕ್ಷಣ ಸಂಸ್ಥೆಯಲ್ಲಿ 2025ರಿಂದ ಪದವಿ ಪೂರ್ವ ಶಿಕ್ಷಣವೂ ಪ್ರಾರಂಭವಾಗಿ ಹೊಸ ಮೆರುಗನ್ನು ಮೂಡಿಸಿದೆ.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೂ ಅತ್ಯುತ್ತಮ ಗುಣಮಟ್ಟದ ಮೌಲ್ಯಾಧಾರಿತ ಶಿಕ್ಷಣವನ್ನು ನೀಡಿ ಸಾಮಾಜಿಕ, ಸಾಂಸ್ಕೃತಿಕ, ವ್ಯಾವಹಾರಿಕ, ತಾಂತ್ರಿಕ ಹಾಗೂ ವೃತ್ತಿಪರ ಪರಿಣತರನ್ನಾಗಿಸುವ ಮೂಲಕ ಅವರ ಭವಿಷ್ಯಕ್ಕೆ ಭದ್ರ ಬುನಾದಿಯನ್ನೊದಗಿಸುವ ನಿಟ್ಟಿನಲ್ಲಿ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಜಯಂತ್ ನಡುಬೈಲು ಅವರು 2019ರಲ್ಲಿ ಅಕ್ಷಯ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿ, ನಮ್ಮ ನಾಡಿಗೆ ನೀಡಿದ್ದಾರೆ.
ಅಕ್ಷಯ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ (ರಿ.) ಮೂಲಕ ಆರಂಭಗೊಂಡು, ಕೇವಲ 6 ವರ್ಷಗಳಲ್ಲಿ ತನ್ನ ಅಭೂತಪೂರ್ವ ಶೈಕ್ಷಣಿಕ ಸಾಧನೆಯಲ್ಲಿ ಅಪಾರ ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲಗೊಳಿಸಿರುವ ಅಕ್ಷಯ ಪದವಿ ಕಾಲೇಜು ಇದೀಗ ನುರಿತ ಬೋಧಕ ವೃಂದ, ವಿಶಾಲವಾದ ಸುವ್ಯವಸ್ಥಿತ ತರಗತಿಗಳು, ಸುಸಜ್ಜಿತ ಪ್ರಯೋಗಾಲಯಗಳು ಮತ್ತು ಗ್ರಂಥಾಲಯ, ಅತ್ಯಾಧುನಿಕ ತಂತ್ರಜ್ಞಾನದ ಬಳಕೆ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಕ್ರೀಡಾ ಮತ್ತು ಸಾಂಸ್ಕೃತಿಕ ತರಬೇತಿ, ವಿಶೇಷವಾದ ವ್ಯಾಯಾಮ ಕೊಠಡಿ, ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆಗಳು, ಆಕರ್ಷಕ ಕ್ಯಾಂಪಸ್ ಮತ್ತು ಸಮಗ್ರ ಮಾರ್ಗದರ್ಶನದ ಮೂಲಕ ಅಕ್ಷಯ ಪದವಿ ಪೂರ್ವ ಕಾಲೇಜನ್ನು ಕಾಮರ್ಸ್ ಹಾಗೂ ಸೈನ್ಸ ವಿಭಾಗಗಳೊಂದಿಗೆ ಹತ್ತನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಅವಕಾಶವನ್ನೊದಗಿಸಿದೆ.
ಇವುಗಳೊಂದಿಗೆ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣವನ್ನು ವೃದ್ಧಿಸುವ ತರಬೇತಿ ಕಾರ್ಯಾಗಾರಗಳು, ವ್ಯಕ್ತಿತ್ವ ವಿಕಸನ ಮತ್ತು ಉಪನ್ಯಾಸ ಕಾರ್ಯಕ್ರಮಗಳು, ಪ್ರತಿಭಾನ್ವೇಷಣೆ ಮತ್ತು ಸಾಂಸ್ಕೃತಿಕ ಹಬ್ಬಗಳು, ಚಟುವಟಿಕೆಗಳು ವಿದ್ಯಾರ್ಥಿಗಳನ್ನು ಕ್ರಿಯಾಶೀಲರನ್ನಾಗಿಸುತ್ತಿವೆ.
ಮುಂದಿನ ದಿನಗಳಲ್ಲಿ *ಅಕ್ಷಯ ಪದವಿ ಪೂರ್ವ ಕಾಲೇಜು* ಸಮಗ್ರ ವ್ಯವಸ್ಥೆಯೊಂದಿಗೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯ ಕಡೆಗೆ ಗಮನವನ್ನು ಕೇಂದ್ರೀಕರಿಸುತ್ತಾ ತನ್ನದೇ ಆದ ಯಶಸ್ಸಿನ ಗುರಿಯನ್ನಿರಿಸಿಕೊಂಡು ರಾಷ್ಟ್ರದ ಯುವವಾಹಿನಿಗೆ ಸಮರ್ಥ ಯುವ ಶಕ್ತಿಯ ಅಮೂಲ್ಯ ಕೊಡುಗೆಯನ್ನು ನೀಡಲು ಕಂಕಣಬದ್ಧವಾಗಿ ಸಾಧನೆಯ ಹಾದಿಯಲ್ಲಿ ಮುಂದಡಿಯಿಟ್ಟಿದೆ.ಬಾಕ್ಸ್IIT – JEE/NEET ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಲ್ಗೊಳ್ಳುವ ಅಪೂರ್ವ ಅವಕಾಶ…ಈ ಎಲ್ಲ ವಿಶೇಷತೆಗಳಿಗೆ ಪೂರಕವಾಗಿ *ಪುತ್ತೂರಿನಲ್ಲಿ ಇದೇ ಮೊದಲ ಬಾರಿಗೆ ಅಕ್ಷಯ ಪದವಿ ಪೂರ್ವ ಕಾಲೇಜು ರಾಷ್ಟ್ರಮಟ್ಟದಲ್ಲಿ ಖ್ಯಾತಿಪಡೆದಿರುವ ಶ್ರೀ ಚೈತನ್ಯ ಸಂಸ್ಥೆಯ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳಿಗೆ* IIT – JEE/NEET ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಲ್ಗೊಳ್ಳುವ ಅಪೂರ್ವ ಅವಕಾಶವನ್ನು ಒದಗಿಸಿಕೊಡುತ್ತಿದೆ. ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ವಿದ್ಯಾಭ್ಯಾಸದ ಕನಸನ್ನು ಹೊತ್ತು ಬಂದಿರುವ ವಿದ್ಯಾರ್ಥಿಗಳ ಭವಿಷ್ಯದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಈ ಸಂಯೋಜಿತ ತರಬೇತಿಗಳು ಆಧುನಿಕ ತಂತ್ರಜ್ಞಾನದ ಮೂಲಕ ಅತ್ಯಾಧುನಿಕ ವಿಧಾನಗಳನ್ನು ಬಳಸಿಕೊಂಡು ಅವರ ಕೌಶಲ್ಯವನ್ನು ವೃದ್ಧಿಸಿ, ಸ್ಪರ್ಧಾತ್ಮಕ ಮನೋಭಾವವನ್ನು ತೀಕ್ಷ್ಣಗೊಳಿಸಿ, ಸುಧಾರಿತ ಸಾಮರ್ಥ್ಯಗಳೊಂದಿಗೆ ಸಜ್ಜುಗೊಳಿಸುವ ವಿಶೇಷ ಪ್ರಕ್ರಿಯೆಯಾಗಿ ಮುಂದುವರಿಯಲಿದೆ.
ಸಾಂಸ್ಕೃತಿಕ, ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ರಿಯಾಯಿತಿ..2019-20ನೇ ಸಾಲಿನಲ್ಲಿ ಪುತ್ತೂರಿನ ಸಂಪ್ಯದಲ್ಲಿ ಮಂಗಳೂರು ವಿ.ವಿಯ ಸಂಯೋಜನೆಯೊಂದಿಗೆ ವೃತಿಪರ ಶಿಕ್ಷಣದೊಂದಿಗೆ ಪ್ರಾರಂಭವಾದ “ಅಕ್ಷಯ ಕಾಲೇಜು” ನಾಲ್ಕು ವರ್ಷಗಳಲ್ಲಿ ಶೈಕ್ಷಣಿಕವಾಗಿ ಹಲವು ರಾಂಕ್ ಗಳಿಸಿದಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲೂ ರಾಷ್ಟೀಯ – ಅಂತಾರಾಷ್ಟ್ರೀಯ ಸಾಧನೆ ಮೆರೆದಿದೆ. ವಿವಿಧ ಪದವಿ ಅಭ್ಯಾಸದ ಬಳಿಕ ವಿದ್ಯಾರ್ಥಿಗಳು ವಿವಿಧ ಕಂಪೆನಿಗಳಲ್ಲಿ ಉದ್ಯೋಗವಕಾಶವನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಅಕ್ಷಯ ಸಂಸ್ಥೆಯು ಪದವಿ ಪೂರ್ವ ಶಿಕ್ಷಣವನ್ನು ಆರಂಭಿಸಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ. ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಶುಲ್ಕದಲ್ಲಿ ರಿಯಾಯಿತಿ ನೀಡುತ್ತಿದ್ದೇವೆ.
-ಜಯಂತ್ ನಡುಬೈಲು,
ಅಧ್ಯಕ್ಷರು, ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳು
