ಕಾಣಿಯೂರು: ಕ್ರೀಡೆಯಲ್ಲಿ ಸಕ್ರೀಯವಾಗಿ ಭಾಗವಹಿಸುವದರಿಂದ ಮಾನಸಿಕ ಮತ್ತು ದೈಹಿಕವಾಗಿ ಸದೃಢವಾಗಿರಲು ಸಾಧ್ಯವಾಗುತ್ತದೆ.
ಕ್ರೀಡೆಯಲ್ಲಿ ಸೋಲು ಗೆಲುವು ಇದ್ದೇ ಇರುತ್ತದೆ. ಇದನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಬೊಬ್ಬೆಕೇರಿ ಸ. ಹಿ. ಪ್ರಾ. ಶಾಲೆಯ ಹಿರಿಯ ವಿದ್ಯಾರ್ಥಿ ಶಿವಕುಮಾರ್ ಕಡೀರ ಹೇಳಿದರು. ಅವರು ಬೊಬ್ಬೆಕೇರಿ ಸ.ಹಿ. ಪ್ರಾ. ಶಾಲೆಯಲ್ಲಿ ಶಾಲಾ ಪ್ರತಿಭಾ ದಿನೋತ್ಸವದ ಪ್ರಯುಕ್ತ ನ.23ರಂದು ನಡೆದ ಪೋಷಕರ ಮತ್ತು ಹಿರಿಯ ವಿದ್ಯಾರ್ಥಿಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್ ಡಿಎಂಸಿ ಅಧ್ಯಕ್ಷೆ ಸುನೀತಾ ಗಣೇಶ್ ವಹಿಸಿ ಶುಭಹಾರೈಸಿದರು. ಕಾಣಿಯೂರು ಗ್ರಾಮ ಪಂಚಾಯತ್ ಸದಸ್ಯೆ ಸುನಂದಾ ಅಬ್ಬಡ, ಬೊಬ್ಬೆಕೇರಿ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ಪೈಕ, ಸುದ್ದಿ ಬಿಡುಗಡೆ ವರದಿಗಾರ ಸುಧಾಕರ್ ಕಾಣಿಯೂರು ಉಪಸ್ಥಿತರಿದ್ದರು, ಸುಕುಮಾರ್ ಕಲ್ಪಡ, ಅಶ್ವಿನ್ ಕರಿಮಜಲು, ರಮೇಶ್ ಉಪ್ಪಡ್ಕ, ತೀರ್ಥಕುಮಾರ್ ಪೈಕ, ಗೀತಾ ಕುಮಾರಿ, ಶೃತಿ, ದಿವ್ಯಾ ಅತಿಥಿಗಳನ್ನು ಗೌರವಿಸಿದರು. ಶಾಲಾ ಮುಖ್ಯಗುರು ಶಶಿಕಲಾರವರು ಸ್ವಾಗತಿಸಿ, ಶಿಕ್ಷಕಿ ಶೋಭಿತಾರವರು ವಂದಿಸಿದರು. ಶಿಕ್ಷಕ ಜನಾರ್ದನ ಹೇಮಳ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಹಿರಿಯ ವಿದ್ಯಾರ್ಥಿಗಳಿಗೆ, ಪೋಷಕರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.