ದ.20-26: ಕೆದಂಬಾಡಿ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆ ಶ್ರೀರಾಮ ಮಂದಿರದ 34ನೇ ವಾರ್ಷಿಕ ಪ್ರತಿಷ್ಠಾ ಮಂಗಳೋತ್ಸವ-ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ಭಗವಾನ್ ಶ್ರೀರಾಮಚಂದ್ರ ಸಪರಿವಾರ ಸಹಿತ ಪ್ರತಿಷ್ಠಾಪನೆಗೊಂಡು ಭಕ್ತರಿಗೆ ದರ್ಶನ ನೀಡುತ್ತಿರುವ ಅತ್ಯಂತ ಕಾರಣಿಕತೆಯ ಕ್ಷೇತ್ರವಾಗಿರುವ ಕೆದಂಬಾಡಿ ಗ್ರಾಮದ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆಯ ಶ್ರೀರಾಮ ಮಂದಿರದ 35ನೇ ವಾರ್ಷಿಕ ಪ್ರತಿಷ್ಠಾ ಮಂಗಳೋತ್ಸವ ಹಾಗೂ ನೂತನ ಪಾಕಶಾಲೆಯ ಪ್ರಾರಂಭೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ ನ.22ರಂದು ಮಂದಿರದಲ್ಲಿ ನಡೆಯಿತು. ಆರಂಭದಲ್ಲಿ ಭಗವಾನ್ ಶ್ರೀರಾಮಚಂದ್ರ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.


ಶ್ರೀ ಕ್ಷೇತ್ರದ 34ನೇ ವಾರ್ಷಿಕ ಪ್ರತಿಷ್ಠಾ ಮಂಗಳೋತ್ಸವವು ದ.20ರಿಂದ ಆರಂಭಗೊಂಡು 26 ರ ತನಕ ವಿವಿಧ ವೈಧಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಅದೇ ರೀತಿ ಶ್ರೀ ಕ್ಷೇತ್ರದಲ್ಲಿ ನಿರ್ಮಾಣಗೊಳ್ಳುತ್ತಿರುವ ಭವ್ಯವಾದ ಪಾಕಶಾಲೆಯ ಪ್ರಾರಂಭೋತ್ಸವ ಕಾರ್ಯಕ್ರಮ ದ.14ರಂದು ನಡೆಯಲಿದೆ. ದ.13 ರಂದು ಸಂಜೆ ವಾಸ್ತು ಪೂಜೆ ನಡೆದು ದ.14 ರಂದು ಬೆಳಿಗ್ಗೆ ಗಣಪತಿ ಹೋಮ, ಅನ್ನಪೂರ್ಣೇಶ್ವರಿ ಆರಾಧನೆ ನಡೆದು ನೂತನ ಪಾಕಶಾಲೆಯಲ್ಲಿ ಹಾಲು ಉಕ್ಕಿಸುವ ಕಾರ್ಯಕ್ರಮ, ದೀಪ ಪ್ರಜ್ವಲನೆ, ದಿನಸಿ ಸಾಮಾಗ್ರಿ ಕೊಠಡಿ ಉದ್ಘಾಟನೆ, ಪಾತ್ರೆ ಸಾಮಾಗ್ರಿ ಕೊಠಡಿ ಉದ್ಘಾಟನೆ ನಡೆಯಲಿದೆ. ಇನ್ನು ಮಂಗಳೋತ್ಸವದಲ್ಲಿ ಪ್ರತಿ ದಿನ ರಾತ್ರಿ ಭಜನಾ ಕಾರ್ಯಕ್ರಮ ದ.21 ರಂದು ಅರ್ಧ ಏಕಾಹ ಭಜನೆ, ಕಟೀಲು ಮೇಳದವರಿಂದ ಯಕ್ಷಗಾನ ಬಯಲಾಟ ಸೇರಿದಂತೆ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು ಪ್ರತಿ ದಿನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಆಮಂತ್ರಣ ಪತ್ರಿಕೆ ಬಿಡುಗಡೆ ಸಂದರ್ಭದಲ್ಲಿ ಶ್ರೀರಾಮ ಮಂದಿರದ ಆಡಳಿತ ಸಮಿತಿ ಮತ್ತು ಭಜನಾ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಸದಸ್ಯರುಗಳು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.



ದ.14 ನೂತನ ಪಾಕ ಶಾಲೆಯ ಪ್ರಾರಂಭೋತ್ಸವ
ಶ್ರೀ ಕ್ಷೇತ್ರದಲ್ಲಿ ನಿರ್ಮಾಣಗೊಳ್ಳುತ್ತಿರುವ ಸುಮಾರು 42 ಲಕ್ಷ ರೂಪಾಯಿ ವೆಚ್ಚದ ಭವ್ಯವಾದ ಪಾಕಶಾಲೆಯ ನಿರ್ಮಾಣ ಕಾರ್ಯ ಬಹುತೇಕ ಮುಗಿದಿದ್ದು ಇದರ ಪ್ರಾರಂಭೋತ್ಸವ ದ.14ರಂದು ನಡೆಯಲಿದೆ. ದ.13ರಂದು ಸಂಜೆ ವಾಸ್ತು ಪೂಜೆ ನಡೆದು ದ.14ರಂದು ಬೆಳಿಗ್ಗೆ ಗಣಪತಿ ಹೋಮ, ಅನ್ನಪೂರ್ಣೇಶ್ವರಿ ಆರಾಧನೆಯೊಂದಿಗೆ ಪಾಕಶಾಲೆಯಲ್ಲಿ ಹಾಲು ಉಕ್ಕಿಸುವ ಕಾರ್ಯಕ್ರಮ, ದೀಪ ಪ್ರಜ್ವಲನೆ, ದಿನಸಿ ಸಾಮಾಗ್ರಿ ಕೊಠಡಿ ಉದ್ಘಾಟನೆ, ಪಾತ್ರೆ ಸಾಮಾಗ್ರಿ ಕೊಠಡಿ ಉದ್ಘಾಟನೆ ನಡೆಯಲಿದೆ.

LEAVE A REPLY

Please enter your comment!
Please enter your name here