ಆಲಂಕಾರು: ಆಧುನಿಕ ಹೈನುಗಾರಿಕೆ ಜಾನುವಾರು ನಿರ್ವಹಣೆ ಹಾಗೂ ಬ್ಯಾಂಕಿಂಗ್ ಸವಲತ್ತುಗಳ ಬಗ್ಗೆ ಮಾಹಿತಿ ಕಾರ್ಯಗಾರ ಕೊೖಲ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಆಧುನಿಕ ಹೈನುಗಾರಿಕೆ, ಜಾನುವಾರುಗಳನ್ನು ನಿರ್ವಹಣೆ ಮತ್ತು ಜಾನುವಾರುಗಳಲ್ಲಿ ಸಂತಾನ ಉತ್ಪತ್ತಿ, ಸಮಸ್ಯೆಗಳ ಬಗ್ಗೆ ಡಾ.ಚಂದ್ರಶೇಖರ ಭಟ್ ಉಪವ್ಯವಸ್ಥಾಪಕರು, ದ.ಕ. ಜಿಲ್ಲಾ ಹಾಲು ಒಕ್ಕೂಟ ನಿಯಮಿತ ಇದರ ಉಪವ್ಯವಸ್ಥಾಪಕ ಡಾ. ಚಂದ್ರಶೇಖರ ಭಟ್ ರವರು ಮಾಹಿತಿ ನೀಡಿದರು.
ದ.ಕ. ಹಾಲು ಒಕ್ಕೂಟದಿಂದ ಸಿಗುವಂತಹ ಸವಲತ್ತುಗಳ ಬಗ್ಗೆ ದ.ಕ.ಹಾಲು ಒಕ್ಕೂಟದ ಕ್ಷೇತ್ರ ವಿಸ್ತರಣಾಧಿಕಾರಿ ಆದಿತ್ಯ ಸಿ ಮಾಹಿತಿ ನೀಡಿದರು. ಕೃಷಿ, ಹೈನುಗಾರಿಕೆ ಮತ್ತು ಬ್ಯಾಂಕಿಂಗ್ ಬಗ್ಗೆ ಬೆಳ್ತಂಗಡಿಯ ಆರ್ಥಿಕ ಸಮಾಲೋಚಕರು ಉಷಾ ನಾಯಕ್ ಮಾಹಿತಿ ನೀಡಿದರು.
ಕಾರ್ಯಕ್ರಮವನ್ನು ಸಂಕೇಶ ಹಾಲು ಉತ್ಪಾದಕರ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷ ಸುಧೀಶ್ ಪಟ್ಟೆ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ರಾಮಕುಂಜ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಮುರಳೀಕೃಷ್ಣ ಕೆ ಬಡಿಲ ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶ್ ಕೆ ಆರ್ ಕಾರ್ಯಕ್ರಮ ನಿರೂಪಿಸಿದರು. ಇಂಡಿಯನ್ ಓವರ್ ಸೀಸ್ ಬ್ಯಾಂಕ್ ರಾಮಕುಂಜ ಶಾಖೆಯ ಮ್ಯಾನೇಜರ್ ರಾಜಶೇಖರ್ ಉಪಸ್ಥಿತರಿದ್ದರು.
ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಇಂಡಿಯನ್ ಓವರ್ ಸೀಸ್ ಬ್ಯಾಂಕ್ ರಾಮಕುಂಜ ಇದರ ಸಹಕಾರದೊಂದಿಗೆ ರಾಮಕುಂಜ ಹಾಲು ಉತ್ಪಾದಕರ ಸಹಕಾರ ಸಂಘ ನಿ. ಗೋಕುಲ ನಗರ ಇದರ ಆಶ್ರಯದಲ್ಲಿ ಗೋಳಿತ್ತಡಿ ಹಾಲು ಉತ್ಪಾದಕರ ಸಹಕಾರ ಸಂಘ, ಸಂಕೇಶ ಹಾಲು ಉತ್ಪಾದಕರ ಸಹಕಾರ ಸಂಘ ಇದರ ಸಹಯೋಗದೊಂದಿಗೆ ಮಾಹಿತಿ ಕಾರ್ಯಗಾರ ನಡೆಯಿತು. ಒಟ್ಟು 100ಕ್ಕಿಂತಲೂ ಅಧಿಕ ಮಂದಿ ಮಾಹಿತಿ ಕಾರ್ಯಾಗಾರದಲ್ಲಿ ಪಾಲ್ಗೊಂಡರು. ಸಂಘದ ಉಪಾಧ್ಯಕ್ಷ ಪ್ರವೀಣ್ ರಾಮಕುಂಜ, ನಿರ್ದೇಶಕರುಗಳು, ಸಿಬ್ಬಂದಿ ವರ್ಗದವರು ಸಹಕರಿಸಿದರು.