ಕೆದಂಬಾಡಿ ಗ್ರಾಪಂ ಮಾಜಿ ಸದಸ್ಯ ಇಳಂತಾಜೆ ಪದ್ಮನಾಭ ರೈ ನಿಧನ

0

ಪುತ್ತೂರು: ಕೆಯ್ಯೂರು ಗ್ರಾಮದ ಮೇಗಿನ ಇಳಂತಾಜೆ ನಿವಾಸಿ ಪ್ರಗತಿ ಪರ ಕೃಷಿಕ, ಕೆದಂಬಾಡಿ ಗ್ರಾಪಂ ಮಾಜಿ ಸದಸ್ಯ ಇಳಂತಾಜೆ ಪದ್ಮನಾಭ ರೈ (76ವ)ರವರು ಅಲ್ಪಕಾಲದ ಅಸೌಖ್ಯದಿಂದ ನ.23ರಂದು ನಿಧನರಾದರು. 

ಇವರು ಕೆದಂಬಾಡಿ ಗ್ರಾಮ ಪಂಚಾಯತ್ ನ ಆರಂಭದ ಆಡಳಿತ ಮಂಡಳಿಯ ಸದಸ್ಯರಾಗಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿ ಚಿರಪರಿಚಿತರಾಗಿದ್ದರು. ಕೆಯ್ಯೂರು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಹಾಗೂ ವ್ಯವಸ್ಥಾಪನಾ ಸಮಿತಿಯಲ್ಲಿ ಸೇವೆ ಸಲ್ಲಿಸಿದ್ದರು. ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಯ ವಿಷಯದಲ್ಲಿ ಹೋರಾಟಗಾರರಾಗಿ ಚಿರಪರಿಚಿತಗಿದ್ದರು. ಇವರು ಪತ್ನಿ ವೇದಾವತಿ, ಪುತ್ರ ಸುಕುಮಾರ ರೈ, ಪುತ್ರಿಯರಾದ ಆಶಾ ರೈ ಮತ್ತು ಉಷಾ ರೈ, ಸೊಸೆ ದೀಪಾ ರೈ, ಹಾಗೂ ಅಳಿಯಂದಿರು, ಮೊಮ್ಮಕ್ಕಳು, ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ಅನೇಕ ಗಣ್ಯರು ಆಗಮಿಸಿ ಸಂತಾಪ ಸೂಚಿಸಿದರು.

LEAVE A REPLY

Please enter your comment!
Please enter your name here