ವಿವೇಕಾನಂದ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ರೇಷ್ಮಾ ಪೈ KSET-2025 ಪರೀಕ್ಷೆಯಲ್ಲಿ ಸಾಧನೆ

0

ಪುತ್ತೂರು:ರೇಷ್ಮಾ ಪೈ ಎ. ಅವರು ಮೊದಲ ಪ್ರಯತ್ನದಲ್ಲೇ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (KSET) 2025 – ಮ್ಯಾನೇಜ್ಮೆಂಟ್ ವಿಷಯದಲ್ಲಿ ಉತ್ತೀರ್ಣರಾಗಿದ್ದು, ಒಟ್ಟು 300ರಲ್ಲಿ 210 ಅಂಕಗಳನ್ನು ಪಡೆದು ಶ್ರೇಷ್ಠ ಸಾಧನೆ ಮಾಡಿದ್ದಾರೆ. ಅವರು ಕಳೆದ 15 ವರ್ಷಗಳಿಂದ ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ (VCET) ಎಂ.ಬಿ.ಎ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಅವರು ಕೊಂಬೆಟ್ಟು ಮೂಲದ ಎ. ವರದಾರಯ್ಯ ಪೈ ಮತ್ತು ಎ. ಪದ್ಮಾವತಿ ಪೈ ದಂಪತಿಯ ಪುತ್ರಿ ಹಾಗೂ ಬನ್ನೂರು ಗ್ರಾಮದ ವಿವೇಕಾನಂದ ಪೈ ಅವರ ಪತ್ನಿ. ರೇಷ್ಮಾ ಪೈ ಅವರು ತಮ್ಮ ಬಿಬಿಎಮ್ ಪದವಿಯನ್ನು ವಿವೇಕಾನಂದ ಪದವಿ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದು, ಎಂ.ಬಿ.ಎ ಪದವಿಯನ್ನು ವಿವೇಕಾನಂದ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು, ಪುತ್ತೂರಿನಲ್ಲಿ ಪಡೆದಿದ್ದಾರೆ. ಇದಲ್ಲದೇ ಅವರಿಗೆ ಮೈಸೂರಿನ ಕೆಎಸ್‌ಒಯು ವಿಶ್ವವಿದ್ಯಾಲಯದಿಂದ ಎಂ.ಕಾಂ ಪದವಿಯನ್ನೂ ಪಡೆದಿದ್ದಾರೆ.

LEAVE A REPLY

Please enter your comment!
Please enter your name here