ಪ್ರಾಮಾಣಿಕ ಸೇವೆಯಿಂದ ಸಂಸ್ಥೆ ಬೆಳೆದಿದೆ: ಡಾ. ಎಂ.ಆರ್. ಶೆಣೈ
ಉಪ್ಪಿನಂಗಡಿ: ಕಳೆದ ಮೂರು ವರ್ಷಗಳಿಂದ ಉಪ್ಪಿನಂಗಡಿಯಲ್ಲಿ ಡಿ.ಕೆ. ಜ್ಯುವೆಲ್ಲರ್ಸ್ ಜನರಿಗೆ ವಿಶ್ವಾಸಾರ್ಹ ಸೇವೆ ನೀಡಿದೆ. ಅವರ ಈ ವಿಶ್ವಾಸಾರ್ಹ ಹಾಗೂ ಪ್ರಾಮಾಣಿಕ ಸೇವೆಯಿಂದ ಸಂಸ್ಥೆಯು ದೊಡ್ಡ ಮಟ್ಟಕ್ಕೆ ಬೆಳೆಯಲು ಕಾರಣವಾಗಿದ್ದು, ವಿಶಾಲವಾದ ಮಳಿಗೆಯಲ್ಲಿ ಶುಭಾರಂಭಗೊಳ್ಳುವಂತಾಗಿದೆ ಎಂದು ಉಪ್ಪಿನಂಗಡಿಯ ಖ್ಯಾತ ವೈದ್ಯ ಡಾ. ಎಂ.ಆರ್. ಶೆಣೈ ಹೇಳಿದರು.
ಇಲ್ಲಿನ ಶೆಣೈ ಆಸ್ಪತ್ರೆಯ ಹತ್ತಿರದ ರೋಯಲ್ ಕಾಂಪ್ಲೆಕ್ಸ್ನ ನೂತನ ಮಳಿಗೆಯಲ್ಲಿ ನ.24ರಂದು ಆರಂಭಗೊಂಡ ‘ಡಿ.ಕೆ. ಜ್ಯುವೆಲ್ಲರ್ಸ್’ ಅನ್ನು ಉದ್ಘಾಟಿಸಿ ಶುಭ ಹಾರೈಸಿದ ಅವರು, ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡಿದಾಗ ಸಂಸ್ಥೆಯೊಂದು ಯಾವುದೇ ತೊಂದರೆಯಿಲ್ಲದೆ ಗ್ರಾಹಕರಿಗೆ ಪ್ರೀತಿ ಪಾತ್ರವಾಗಿ ಬೆಳೆಯುತ್ತದೆ ಎಂಬುದಕ್ಕೆ ಡಿ.ಕೆ. ಜ್ಯುವೆಲ್ಲರ್ಸ್ ಉದಾಹರಣೆ. ಈ ಸಂಸ್ಥೆಯು ಉತ್ತರೋತ್ತರ ಅಭಿವೃದ್ಧಿ ಹೊಂದಿ ಗ್ರಾಹಕರಿಗೆ ಉತ್ತಮ ಸೇವೆ ನೀಡುವಂತಾಗಲಿ ಎಂದರು.
ದುವಾಶೀರ್ವಚನ ನೆರವೇರಿಸಿ ಮಾತನಾಡಿದ ಬಹು ಸೈಯ್ಯದ್ ಅಹಮ್ಮದ್ ಪೂಕೋಯ ತಂಙಳ್, ಗುಣಮಟ್ಟ, ಪ್ರಾಮಾಣಿಕತೆ ವ್ಯಾಪಾರದಲ್ಲಿ ಅತೀ ಮುಖ್ಯ. ಕೇವಲ ವ್ಯಾಪಾರವಷ್ಟೇ ಮುಖ್ಯವಲ್ಲ. ಆ ನಂತರವು ಗ್ರಾಹಕರಿಗೆ ಸಂಸ್ಥೆಯ ಸೇವೆ ನಿರಂತರವಾಗಿರಬೇಕು. ಎಲ್ಲರೊಂದಿಗೆ ಉತ್ತಮ ಬಾಂಧವ್ಯವಿಟ್ಟುಕೊಳ್ಳಬೇಕು. ವಿಶ್ವಾಸಾರ್ಹತೆಯ ವ್ಯಾಪಾರ ನಡೆಸಬೇಕು. ಆಗ ಮಾತ್ರ ಭಗವಂತನ ಆಶೀರ್ವಾದ ದೊರೆಯಲು ಸಾಧ್ಯ. ಈ ಸಂಸ್ಥೆಯೂ ಇನ್ನಷ್ಟು ಬೆಳೆದು ಎತ್ತರಕ್ಕೇರಲಿ ಎಂದು ಶುಭ ಕೋರಿದರು.

ಶುಭಾಶೀರ್ವಚನ ನೀಡಿದ ಉಪ್ಪಿನಂಗಡಿ ಮುದರ್ರಿಸ್ ಬಹು ಅಬ್ದುಲ್ ಸಲಾಂ ಫೈಝಿ, ನೆಕ್ಕಿಲಾಡಿ ಖತೀಬರಾದ ಬಹು ಇಬ್ರಾಹೀಂ ಸಅದಿ, ಕೆಮ್ಮಾಯಿ ಮುದರ್ರಿಸ್ ಬಹು ಮೊಯ್ಯುದ್ದೀನ್ ಮದನಿ, ಬಹು ಇಸ್ಮಾಯೀಲ್ ಫೈಝಿ ಕರಾಯ ಅವರು ಮಾತನಾಡಿ, ಸಂಸ್ಥೆಯ ಉನ್ನತಿಗೆ ಹಾರೈಸಿದರು.
ಉಪ್ಪಿನಂಗಡಿ ಗ್ರಾ.ಪಂ. ಸದಸ್ಯ ಮುಹಮ್ಮದ್ ತೌಸೀಫ್ ಮಾತನಾಡಿ, ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿರುವ ಉಪ್ಪಿನಂಗಡಿಯ ಮುಕುಟಕ್ಕೆ ಮತ್ತೊಂದು ಗರಿ ಎಂಬಂತೆ ಡಿ.ಕೆ. ಜ್ಯುವೆಲ್ಲರ್ಸ್ ಇಂದು ಶುಭಾರಂಭಗೊಂಡಿದೆ. ಎಲ್ಲರ ಕಣ್ಮನ ಸೆಳೆಯುವ ನೂತನ ವಿನ್ಯಾಸದ ಆಭರಣಗಳ ಸಂಗ್ರಹ ಇಲ್ಲಿದ್ದು, ಎಲ್ಲರ ಸಹಕಾರದಿಂದ ಈ ಸಂಸ್ಥೆಯು ಇನ್ನಷ್ಟು ಬೆಳೆಯಬೇಕು ಎಂದರು.
ವಾಸ್ತು ಗಿಡದ ಸನ್ನಿಧಿಯ ಕೈಲಾರು ರಾಜಗೋಪಾಲ ಭಟ್ ಮಾತನಾಡಿ, ಎರಡು ನದಿಗಳ ಪವಿತ್ರ ಸಂಗಮವಾಗುವ ಉಪ್ಪಿನಂಗಡಿಯಲ್ಲಿ ದೇವಸ್ಥಾನ, ಚರ್ಚ್, ಮಸೀದಿಗಳು ಇದ್ದು, ಇದು ಸೌಹಾರ್ದತೆಗೆ ಹೆಸರಾದ ಊರಾಗಿದೆ. ಎಲ್ಲ ಧರ್ಮದವರ ಬೆಂಬಲ ನಿಮಗೆ ಸಿಕ್ಕಿ ಪ್ರತಿ ಮನೆಯಲ್ಲಿಯೂ ಡಿ.ಕೆ. ಜ್ಯುವೆಲ್ಲರ್ಸ್ನ ಹೆಸರು ಮನೆಮಾತಾಗಲಿ ಎಂದು ಹಾರೈಸಿದರು.
ಡಿಗ್ನಿಟಿ ಗೋಲ್ಡ್ನ ಮಾಲಕರಾದ ಭಾತಿಷ ಡಿಗ್ನಿಟಿ ಮಾತನಾಡಿ, ಇವರ ವ್ಯವಹಾರವನ್ನು ನಾನು ಮೊದಲಿನಿಂದಲೂ ಕಂಡಿದ್ದೇನೆ. ಪ್ರಾಮಾಣಿಕ ವ್ಯವಹಾರದಿಂದ ಯಶಸ್ಸು ಗಳಿಸಿದವರು ಇವರು. ಇವರ ಸಂಸ್ಥೆ ಇನ್ನಷ್ಟು ಬೆಳೆಯಲಿ ಎಂದರು.
ಉಪ್ಪಿನಂಗಡಿ ಗ್ರಾ.ಪಂ. ಸದಸ್ಯ ಅಬ್ದುರ್ರಶೀದ್ ಮಾತನಾಡಿ, ನಾನು ಕಂಡಾಗೆ ಡಿ.ಕೆ. ಜ್ಯುವೆಲ್ಲರ್ಸ್ನವರ ವ್ಯವಹಾರವೂ ಕೇವಲ ಲಾಭ ದೃಷ್ಟಿಯಿಂದಲ್ಲ. ಪ್ರಾಮಾಣಿಕ ಸೇವೆಯೂ ಇದರಲ್ಲಿ ಕೂಡಿದೆ. ಇದು ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದರು.
ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಝಕಾರಿಯಾ ಕೊಡಿಪ್ಪಾಡಿ ಮಾತನಾಡಿ, ಸ್ಪರ್ಧಾತ್ಮಕ ಈ ಯುಗದಲ್ಲಿ ಡಿ.ಕೆ. ಜ್ಯುವೆಲ್ಲರ್ಸ್ ಸಂಸ್ಥೆಯು ಗ್ರಾಹಕರಿಗೆ ಗುಣಮಟ್ಟದ ಸೇವೆಯನ್ನು ನೀಡುವ ಮೂಲಕ ಎಲ್ಲರ ಬಾಂಧವ್ಯವನ್ನು ಗಳಿಸಿಕೊಂಡು ನಿರಂತರ ಸೇವೆ ನೀಡಲಿ. ಇದರ ಉತ್ತರೋತ್ತರ ಅಭಿವೃದ್ಧಿಯಾಗಲಿ ಎಂದು ಶುಭ ಹಾರೈಸಿದರು.
ಪ್ರಥಮ ಖರೀದಿ:
ಹಂಝ ಹಾಜಿ ಡಿ.ಕೆ. ಹಾಗೂ ಅವರ ತಾಯಿ ಆಯಿಷಾ ಡಿ.ಕೆ. ಅವರು ಸಂಸ್ಥೆಯಲ್ಲಿ ಪ್ರಥಮ ಖರೀದಿ ನಡೆಸಿದರು.
ಮುಖ್ಯ ಅತಿಥಿಗಳಾಗಿ ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಲಲಿತಾ, ಉಪಾಧ್ಯಕ್ಷೆ ಶ್ರೀಮತಿ ವಿದ್ಯಾಲಕ್ಷ್ಮೀ ಪ್ರಭು, ಪ್ರಮುಖರಾದ ಕಾವು ಹೇಮನಾಥ ಶೆಟ್ಟಿ, ಅಶ್ರಫ್ ಬಾವು, ಶಬೀರ್ ಕೆಂಪಿ, ಫಾರೂಕ್ ಜಿಂದಗಿ, ಪ್ರಶಾಂತ್ ಡಿಕೋಸ್ತ, ಅಬ್ದುರ್ರಹ್ಮಾನ್ ಹಾಜಿ, ಅಬ್ದುರ್ರಶೀದ್ ರೋಯಲ್,ಹಾರೂನ್ ರಶೀದ್ ಅಗ್ನಾಡಿ, ಅಬ್ದುಲ್ ಸಮದ್ ಸಿಟಿ, ಅಶ್ರಫ್ ಹಾಜಿ ಎಸ್.ಎಚ್. ಸೂಪರ್ ಬಜಾರ್, ಹಮೀದ್ ಶಫಾ, ಸತ್ತಾರ್, ಅಶ್ರಫ್ ಹಾಜಿ ಡಿ.ಕೆ., ಇರ್ಫಾನ್ ಐ ಕನೆಕ್ಟ್, ಇಬ್ರಾಹೀಂ ಹಾಜಿ ಕೇಪು, ಡಿ.ಕೆ. ಬ್ರದರ್ಸ್, ಬಿ. ಅಬ್ದುಲ್ ಖಾದರ್ ಪಾಟ್ರಕೋಡಿ, ಅಬ್ದುಲ್ ಹಮೀದ್ ಪೆರುವಾಯಿ, ಅಬ್ದುಲ್ ಸತ್ತಾರ್ ಕನ್ಯಾನ ಮತ್ತಿತರರು ಉಪಸ್ಥಿತರಿದ್ದರು.
ಸಂಸ್ಥೆಯ ಮಾಲಕರಾದ ಇರ್ಷಾದ್ ಡಿ.ಕೆ. ಸ್ವಾಗತಿಸಿದರು. ರಫೀಕ್ ಸಿಟಿ, ಜಮಾಲುದ್ದೀನ್, ಅಸ್ಕರ್ ಬೊಳುಂಬುಡ, ಇಬ್ರಾಹೀಂ ಆದರ್ಶನಗರ, ಆಶೀಕ್ ಕುಟ್ಟಿ ಸಹಕರಿಸಿದರು. ಸಿದ್ದೀಕ್ ಬಿ.ಕೆ. ಕಾರ್ಯಕ್ರಮ ನಿರೂಪಿಸಿದರು.
ವಿಶೇಷ ಆಫರ್ಗಳು
100ಶೇ. 916 ಎಚ್ಯುಐಡಿ ಹಾಲ್ ಮಾರ್ಕ್ ಚಿನ್ನಾಭರಣ, ನವನವೀನ ಬೆಳ್ಳಿಯ ಆಭರಣ, ವಜ್ರಾಭರಣ, ವಾಚ್ಗಳ ಬೃಹತ್ ಸಂಗ್ರಹ ಇಲ್ಲಿದ್ದು, ಶುಭಾರಂಭದ ಪ್ರಯುಕ್ತ ವಿಶೇಷ ಆಫರ್ಗಳು ಲಭ್ಯವಿದೆ. ಪ್ರತಿ ಗ್ರಾಂನಲ್ಲಿ 500 ರೂ. ಕಡಿತ, ವೆಡ್ಡಿಂಗ್ ಗ್ರಾಹಕರಿಗೆ ವಿಶೇಷ ರಿಯಾಯಿತಿ ದರ, ಪ್ರತಿ ಖರೀದಿಯ ಮೇಲೆ ಬಂಪರ್ ಡ್ರಾ ಕೂಪನ್ಗಳನ್ನು ನೀಡಲಾಗುತ್ತದೆ ಎಂದು ಸಂಸ್ಥೆಯ ಮಾಲಕರಾದ ಇರ್ಷಾದ್ ಡಿ.ಕೆ. ತಿಳಿಸಿದರು.