ಪುತ್ತೂರು: ಸುಳ್ಯದ ಅಮರಶ್ರೀಭಾಗ್, ಕುರುಂಜಿ ಜಾನಕಿ ವೆಂಕಟರಮಣ ಗೌಡ ಸಭಾಭವನದಲ್ಲಿ ನಡೆದ ರಾಷ್ಟ್ರಮಟ್ಟದ ಮುಕ್ತ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಇ.ಎಸ್.ಆರ್. ಸ್ಕೂಲ್ ಮರೀಲ್ನ ಹಲವು ವಿದ್ಯಾರ್ಥಿಗಳು ಶ್ರೇಷ್ಠ ಪ್ರದರ್ಶನ ನೀಡಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಎಂಟನೇ ತರಗತಿಯ ಮೊಹಮ್ಮದ್ ರಾಫೀದ್-ಕಟಾ ವಿಭಾಗ ಪ್ರಥಮ, ಕುಮಿಟೆ ವಿಭಾಗ ಪ್ರಥಮ, ಅಫ್ರಜ್-ಕಟಾ ವಿಭಾಗ ತೃತೀಯ, ಐದನೇ ತರಗತಿಯ ಮೊಹಮ್ಮದ್ ಅಮೀನ್ ಎಸ್-ಕಟಾ ವಿಭಾಗ ಪ್ರಥಮ, ಕುಮಿಟೆ ವಿಭಾಗ ದ್ವಿತೀಯ, ಅಸ್ಬಾ ಫಾತಿಮಾ-ಕಟಾ ವಿಭಾಗ ದ್ವಿತೀಯ, ಕುಮಿಟೆ ವಿಭಾಗ ಪ್ರಥಮ, ಮೊಹಮ್ಮದ್ ಶಯಾನ್-ಕಟಾ ವಿಭಾಗ ತೃತೀಯ, ಕುಮಿಟೆ ವಿಭಾಗ ಪ್ರಥಮ, ಮಹಮ್ಮದ್ ಶಹಾನ್-ಕಟಾ ವಿಭಾಗ ತೃತೀಯ, ಕುಮಿಟೆ ವಿಭಾಗ ದ್ವಿತೀಯ, ಮಹಮ್ಮದ್ ತಾಝ್-ಕಟಾ ವಿಭಾಗ ತೃತೀಯ, ಕುಮಿಟೆ ವಿಭಾಗ ದ್ವಿತೀಯ, ಮೆಹ್ವೀಶ್ ಮಾಝ್ ಅಬೂಬಕ್ಕರ್-ಕಟಾ ವಿಭಾಗ ದ್ವಿತೀಯ, ಕುಮಿಟೆ ವಿಭಾಗ ತೃತೀಯ, ಮೊಹಮ್ಮದ್ ಫರ್ ಹಾನ್-ಕಟಾ ವಿಭಾಗ ತೃತೀಯ, ಅಬ್ದುನ್ನಾಸಿರ್-ಕಟಾ ವಿಭಾಗ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಯನ್ನು ಶಾಲೆಯ ಸಂಚಾಲಕ ಝಾಕೀರ್ ಹುಸೇನ್ ವಿದ್ಯಾರ್ಥಿಗಳನ್ನು ಪ್ರಶಂಶಿಸಿ, ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಶಿಕ್ಷಕ-ಶಿಕ್ಷಕೇತರ ವೃಂದ, ಪೋಷಕರು ಹಾಗೂ ಕರಾಟೆ ಕೋಚ್ ರೋಹಿತ್ ಎಸ್. ಎನ್. ಅಭಿನಂದಿಸಿದ್ದಾರೆ.
