ಪುತ್ತೂರು:ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಡಿಸೆಂಬರ್ 7ರಂದು ಪುತ್ತೂರು ಪುರಭವನದಲ್ಲಿ ಹಮ್ಮಿಕೊಂಡಿರುವ ‘ಬ್ಯಾರಿ ಅಕಾಡೆಮಿ ಚಮ್ಮನ’ (ಗೌರವ ಪುರಸ್ಕಾರ) ಮತ್ತು ‘ವಿದ್ಯಾರ್ಥಿ ಸಂಗಮ’ ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಗೆ ಸಾಂಪ್ರದಾಯಿಕ ಬ್ಯಾರಿ ಆಹಾರ ಮತ್ತು ಮೆಹಂದಿ ವಿನ್ಯಾಸ ಹಾಗೂ ಮಕ್ಕಳಿಗೆ ಬ್ಯಾರಿ ಹಾಡು ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
ಸಾಂಪ್ರದಾಯಿಕ ಆಹಾರ ಸ್ಪರ್ಧೆಯ ವಿಜೇತರಿಗೆ ರೂ. 4000, ರೂ. 3000 ಮತ್ತು ರೂ. 2000, ಮೆಹಂದಿ ವಿನ್ಯಾಸಕ್ಕೆ ರೂ. 3000, ರೂ. 2000 ಮತ್ತು ರೂ. 1000 ಹಾಗೂ ಮಕ್ಕಳ ಬ್ಯಾರಿ ಹಾಡು ಸ್ಪರ್ಧೆಗೆ ರೂ. 1000, ರೂ. 750 ಮತ್ತು ರೂ. 500 ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ನಗದು ಬಹುಮಾನ ನಿಗದಿಪಡಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲರಿಗೂ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಪ್ರಮಾಣ ಪತ್ರ ನೀಡಲಾಗುವುದು.
ಆಸಕ್ತರು ಹೆಚ್ಚಿನ ಮಾಹಿತಿ ಮತ್ತು ಹೆಸರು ನೋಂದಾವಣೆಗೆ ಡಿ. 4ರ ಒಳಗಾಗಿ ಡಾ. ಹಾಜಿ ಯಸ್. ಅಬೂಬಕರ್ ಆರ್ಲಪದವು (ಮೊ. ಸಂ. 9901726144) ಅಥವಾ ಸಾರಾ ಅಲಿ ಪರ್ಲಡ್ಕ (ಮೊ.ಸಂ. 9353306183)ಇವರನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮರ್ ಯು. ಹೆಚ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
