ಪುತ್ತೂರು: ಇಂಪ್ಯಾಕ್ಟ್ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕರಾಟೆ ಅಕಾಡೆಮಿ ವತಿಯಿಂದ ಸುಳ್ಯದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ಶಿಪ್ನಲ್ಲಿ ಪುತ್ತೂರಿನ ಬೆಥನಿ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿಗಳಾದ ತನ್ಹ ಫಾತಿಮಾ ಮತ್ತು ತಾನಿಷ್ ಮೊಹಮ್ಮದ್ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಇವರು ಕಟಾ ಮತ್ತು ಕುಮಿಟೆ ಎಂಬ ಎರಡೂ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರು ಮಂಗಳೂರು ಕೊಣಾಜೆ ಪಿ.ಎ ಇಂಜಿನಿಯರಿಂಗ್ ಕಾಲೇಜಿನ ಭೌತವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೊ.ಇಸ್ಮಾಯಿಲ್ ಶಾಫಿ ಕಾವು ಹಾಗೂ ತಹಸೀನ್ ಪುತ್ರರಾಗಿದ್ದಾರೆ. ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಕುಂಞ ಕಾವುರವರ ಮೊಮ್ಮಕ್ಕಳಾಗಿದ್ದಾರೆ. ಕರಾಟೆ ಶಿಕ್ಷಕ ಸೆನ್ಸಾಯಿ ನಾರಾಯಣ ಆಚಾರ್ಯ ಮಳಿ ಕಾವುರವರು ತರಬೇತಿ ನೀಡಿದ್ದರು.
