ಕುಂಬ್ರ ಮರ್ಕಝುಲ್ ಹುದಾ ಪದವಿಪೂರ್ವ ಕಾಲೇಜಿನಲ್ಲಿ ಸಿ.ಎ ಬೇಸಿಕ್ ತರಗತಿ

0

ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಪದವಿಪೂರ್ವ ಕಾಲೇಜಿನಲ್ಲಿ ಸಿ.ಎ ಪ್ರಿಪೆರೇಷನ್ ಬೇಸಿಕ್ ಮಾಹಿತಿ ಕಾರ್ಯಕ್ರಮ ‘ಏಮ್ ಫಾರ್ ಸಿ.ಎ’ ಮರ್ಕಝ್ ಕ್ಯಾಂಪಸ್ ಆಡಿಟೋರಿಯಂನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ರೈಹಾನ ಸಿ.ಎ ಪುಂಜಾಲಕಟ್ಟೆಯವರು ನಡೆಸಿಕೊಟ್ಟು ಸಿ.ಎ ಕೋರ್ಸ್‌ಗೆ ತಯಾರಾಗುವುದು, ಪರೀಕ್ಷೆಯಲ್ಲಿ ಸಾಧನೆಯನ್ನು ತೋರುವುದು, ಸಿ.ಎ ಆಗುವುದಕ್ಕೆ ಬೇಕಾದ ಉಪಯುಕ್ತ ಅಂಶಗಳನ್ನು ವಿವರಿಸಿಕೊಟ್ಟರು. ಪದವಿಪೂರ್ವ ವಿಭಾಗದ ಪ್ರಾಂಶುಪಾಲರಾದ ಸಂದ್ಯಾ ಪಿ, ಆಡಳಿತ ಸಹಾಯಕಿ ಶಬ್ನಾ ಪುತ್ತೂರು, ವಾಣಿಜ್ಯ ವಿಭಾಗದ ಉಪನ್ಯಾಸಕಿ ದೇವಿಕ ಶೆಣೈ ಉಪಸ್ಥಿತರಿದ್ದರು. ಸಿ.ಎ ಆಗಿ ಸಾಧನೆಗೈದ ರೈಹಾನ ಅವರಿಗೆ ಶಾಲು ಹೊದಿಸಿ, ಫಲಕ ನೀಡಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here