ಬೆಟ್ಟಂಪಾಡಿ;ಉದ್ಯೋಗ ಖಾತರಿ ಯೋಜನೆಯ ಕ್ರಿಯಾ ಯೋಜನೆ ತಯಾರಿ ವಿಶೇಷ ಗ್ರಾಮಸಭೆ

0

ನಿಡ್ಪಳ್ಳಿ; ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು ಹಾಗೂ ಗ್ರಾಮ ಪಂಚಾಯತ್ ಬೆಟ್ಟಂಪಾಡಿ ಇದರ ಸಹಯೋಗದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಗ್ರಾಮಾಭಿವೃದ್ದಿಯ ಹೊಸ ಹಾದಿ” ಯುಕ್ತಧಾರ” ತಂತ್ರಾಂಶದ ಮೂಲಕ 2026-27ನೇ ಸಾಲಿನ ಕಾರ್ಮಿಕರ ಆಯವ್ಯಯ ಮತ್ತು ಕ್ರಿಯಾ ಯೋಜನೆ ತಯಾರಿ ವಿಶೇಷ ಗ್ರಾಮ ಸಭೆ ಪಂಚಾಯತ್ ಅಧ್ಯಕ್ಷೆ ವಿದ್ಯಾಶ್ರೀಯವರ ಅಧ್ಯಕ್ಷತೆಯಲ್ಲಿ ನ.25 ರಂದು ಪಂಚಾಯತ್ ಸಮುದಾಯ ಭವನದಲ್ಲಿ ನಡೆಯಿತು.

ಪಿಡಿಒ ಸೌಮ್ಯ ಎಂ.ಎಸ್ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಮುಂದಿನ 2026-27ನೇ ಸಾಲಿನಲ್ಲಿ ಕೆಲಸ ಮಾಡಲು ಅರ್ಹತೆ ಪಡೆಯಬೇಕಾದರೆ ಈ ತಿಂಗಳ ಒಳಗೆ ತಮ್ಮ ಜಮೀನಿನಲ್ಲಿ ಕಾಮಗಾರಿ ಮಾಡುವ ಬಗ್ಗೆ ಅರ್ಜಿ ಸಲ್ಲಿಸಿ ಆ ಕೆಲಸಕ್ಕೆ ಅನುಮೋದನೆ ಪಡೆದುಕೊಳ್ಳಬೇಕು. ನಿಗದಿತ ಸಮಯದೊಳಗೆ ಅರ್ಜಿ ಸಲ್ಲಿಸದಿದ್ದರೆ ನಂತರ ಅರ್ಜಿ ನೀಡಲು ಅಥವಾ ಸೇರಿಸಲು ಅವಕಾಶ ಇರುವುದಿಲ್ಲ. ಉದ್ಯೋಗ ಖಾತರಿ ಯೋಜನೆ ಗ್ರಾಮಾಭಿವೃದ್ದಿಯ ಹೊಸ ಹಾದಿ” ಯುಕ್ತಧಾರ” ತಂತ್ರಾಂಶದ ಮೂಲಕ 2026-27ನೇ ಸಾಲಿನ ಕಾರ್ಮಿಕರ ಆಯವ್ಯಯ ಮತ್ತು ಕ್ರಿಯಾ ಯೋಜನೆ ತಯಾರಿ ನಡೆಸಲು ಈ ವಿಶೇಷ ಗ್ರಾಮ ಸಭೆ ಕರೆಯಲಾಗಿದೆ. ಆದುದರಿಂದ ಸಾರ್ವಜನಿಕರು ಆದಷ್ಟು ಶೀಘ್ರವಾಗಿ ತಮ್ಮ ಅರ್ಜಿಗಳನ್ನು ನೀಡಿ ಹೆಸರು ನೊಂದಾಯಿಸುವಂತೆ ತಿಳಿಸಿದರು. ಅಲ್ಲದೆ ಇ.ಕೆ.ವೈ.ಸಿ ಮಾಡಲು ಬಾಕಿ ಇದ್ದವರು ತಕ್ಷಣ ಮಾಡಿಸಿ ಕೊಳ್ಳುವಂತೆ ತಿಳಿಸಿದರು. ಉದ್ಯೋಗ ಖಾತರಿ ಯೋಜನೆಯಲ್ಲಿ ಕೈಗೊಳ್ಳಬಹುದಾದ ವಿವಿಧ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿ ಇದರ ಸದುಪಯೋಗ ಪಡೆದು ಕೊಳ್ಳುವಂತೆ ಹೇಳಿದರು.

ಪಂಚಾಯತ್ ಉಪಾಧ್ಯಕ್ಷ ಮಹೇಶ್ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಂಚಾಯತ್ ಪ್ರಭಾರ ಕಾರ್ಯದರ್ಶಿ ಶಿವರಾಮ ಮೂಲ್ಯ ವಂದಿಸಿದರು. ಸಿಬ್ಬಂದಿಗಳಾದ ಸಂದೀಪ್, ಸವಿತಾ, ಚಂದ್ರಾವತಿ ಸಹಕರಿಸಿದರು. ಪಂಚಾಯತ್ ಸದಸ್ಯರಾದ ಪ್ರಕಾಶ್ ರೈ, ಚಂದ್ರಶೇಖರ ರೈ, ಉಮಾವತಿ, ಬೇಬಿ, ಲಲಿತ ಚಿದಾನಂದ, ಲಲಿತ, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಎನ್ ಅರ್.ಎಲ್.ಎಮ್ ಘಟಕದ ಸದಸ್ಯರು, ಸ್ವಚ್ಚತಾ ಘಟಕದ ಸದಸ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡರು.

ಸರಕಾರದ ಯೋಜನೆಯ ಸವಲತ್ತುಗಳನ್ನು ಪಡೆಯಲು ಸಾರ್ವಜನಿಕರಿಗೆ ಉಪಯೋಗವಾಗಲು ಇಂತಹ ವಿಶೇಷ ಗ್ರಾಮ ಸಭೆಯನ್ನು ನಡೆಸಲಾಗುತ್ತದೆ. ಎಷ್ಟು ಪ್ರಚಾರ ಮಾಡಿ ತಿಳಿಸಿದರೂ ಜನರು ಸೇರುವುದು ಬಹಳ ವಿರಳ. ಮುಂದೆಯಾದರೂ ಜನರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಇಂತಹ ಕಾರ್ಯಕ್ರಮದಲ್ಲಿ ಭಾಗಿಯಾಗಿ ಇದರ ಸದುಪಯೋಗ ಪಡೆದುಕೊಳ್ಳಬೇಕು.
ವಿದ್ಯಾಶ್ರೀ ಸರಳೀಕಾನ
ಅಧ್ಯಕ್ಷರು ಬೆಟ್ಟಂಪಾಡಿ ಗ್ರಾ.ಪಂ.

LEAVE A REPLY

Please enter your comment!
Please enter your name here