ಪುತ್ತೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ ಇವರು ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆ ಇಲ್ಲಿ ನಡೆಸಿದ ಜ್ಞಾನ ಪುಸ್ತಕ ಆಧಾರಿತ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಸುದಾನ ಪ್ರೌಢಶಾಲೆಯ ವಿದ್ಯಾರ್ಥಿ ಆಶ್ರಿತ್ ಕೃಷ್ಣ ರಾವ್ ಡಿ (8 ನೇತರಗತಿ) ಶ್ಲೋಕ ಕಂಠಪಾಠ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇವರಿಗೆ ಸಹ ಶಿಕ್ಷಕಿ ಚೇತನಾ ಪಿ ಕೆ ಮಾರ್ಗದರ್ಶನ ಮಾಡಿದ್ದು, ಶಾಲಾ ಸಂಚಾಲಕರಾದ ರೆ ವಿಜಯ ಹಾರ್ವಿನ್, ಶಾಲಾ ಆಡಳಿತಾಧಿಕಾರಿಗಳಾದ ಸುಶಾಂತ್ ಹಾರ್ವಿನ್, ಮತ್ತು ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶೋಭಾ ನಾಗರಾಜ್ ಅಭಿನಂದಿಸಿ ಶುಭಹಾರೈಸಿದ್ದಾರೆ.
