ರಾಮಕುಂಜ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಮತ್ತು ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸಹಯೋಗದೊಂದಿಗೆ ನ.24ರಂದು ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆದ ಕಡಬ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಪ್ರಥಮ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.
ಶಾಲೆಯ ವಿದ್ಯಾರ್ಥಿಗಳಾದ ಜನನಿ ಪಿ.(9ನೇ)- ಕನ್ನಡ ಭಾಷಣ ಪ್ರಥಮ, ಪ್ರಬಂಧ ತೃತೀಯ, ಶರಣ್ಯ ಶೆಟ್ಟಿ (10ನೇ)- ಇಂಗ್ಲಿಷ್ ಹಾಗೂ ಹಿಂದಿ ಭಾಷಣ ಪ್ರಥಮ, ರಕ್ಷಾ ಡಿ. (10ನೇ)- ತುಳು ಭಾಷಣ ಪ್ರಥಮ, ಭೌತಿಕ್ ಎಸ್.(10ನೇ)- ಜನಪದ ಗೀತೆ ಪ್ರಥಮ, ದುಶ್ಯಂತ್ ಕುಮಾರ್ (10ನೇ)-ಚರ್ಚಾ ಸ್ಪರ್ಧೆ ಪ್ರಥಮ, ವೈಷ್ಣವಿ ಎ.ಮತ್ತು ತಂಡ-ಜಾನಪದ ನೃತ್ಯ ಪ್ರಥಮ, ಭೌತಿಕ್ ಎಸ್ ಮತ್ತು ತಂಡ-ಕವ್ವಾಲಿ ಪ್ರಥಮ, ನಮೃತಾ ಎ.(10ನೇ)-ಆಶು ಭಾಷಣ ತೃತೀಯ, ಪ್ರಣಾದ್ ರೈ ಎಂ.(೯ನೇ)- ಗಜಲ್ ತೃತೀಯ, ಪೂರ್ವಿ (10ನೇ)-ಭರತನಾಟ್ಯ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಇವರಿಗೆ ಸಂಸ್ಥೆಯ ಕಾರ್ಯದರ್ಶಿ ಕೆ. ಸೇಸಪ್ಪ ರೈಯವರ ಮಾರ್ಗದರ್ಶನದಲ್ಲಿ ಆಡಳಿತಾಧಿಕಾರಿ ಆನಂದ ಎಸ್.ಟಿ., ವ್ಯವಸ್ಥಾಪಕ ರಮೇಶ್ ರೈ, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಯು.ಎನ್., ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಲೋಹಿತಾ ಎ., ಹಾಗೂ ಶಿಕ್ಷಕರು ತರಬೇತಿ ನೀಡಿದ್ದರು.
