ಬಂಟ್ವಾಳ: ಬಂಟ್ವಾಳ ತಾಲೂಕಿನ ಮಾಣಿ ಸಮೀಪದ, ಕಡೇಶಿವಾಲಯ ಗ್ರಾಮದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿರುವ ವಿಸ್ಡಮ್ ಆಂಗ್ಲ ಮಾಧ್ಯಮ ಶಾಲೆ ಬುಡೋಳಿ-ಗಡಿಯಾರ ಇದರ ಕ್ಯಾಂಪಸ್ ನಲ್ಲಿ ಇತ್ತೀಚೆಗೆ, ಕಡೇಶಿವಾಲಯ ಹಾಗೂ ಕೆದಿಲ ಕ್ಲಸ್ಟರ್ ಗಳಲ್ಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಸೇರಿದಂತೆ ಇರುವ ಒಟ್ಟು ಹದಿನೈದು ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಬಹಳ ಸಡಗರದಿಂದ ಜರುಗಿತು.

ಕರ್ನಾಟಕದ ಸರಕಾರದ ಆದೇಶದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಸುತ್ತೋಲೆಯ ಪ್ರಕಾರ ಜರುಗುವ ಈ ಕಾರ್ಯಕ್ರಮವನ್ನು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ, ಸಮೂಹ ಸಂಪನ್ಮೂಲ ಕೇಂದ್ರ ಕಡೇಶಿವಾಲಯ ಹಾಗೂ ಕೆದಿಲ ಕ್ಲಸ್ಟರ್ ಗಳ ಸಹಭಾಗಿತ್ವದಲ್ಲಿ ಇಲ್ಲಿನ, ವಿಸ್ಡಮ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ವತಿಯಿಂದ ಶಾಲಾ ಸಂಚಾಲಕ ಅಬ್ದುಲ್ ಖಾದರ್ ಕುಕ್ಕಾಜೆ ಇವರ ಅಧ್ಯಕ್ಷತೆಯಲ್ಲಿ, ಕಡೇಶಿವಾಲಯ ಗ್ರಾ.ಪಂ.ಅಧ್ಯಕ್ಷೆ ಭಾರತಿ ಚಾಲನೆ ನೀಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಬಂಟ್ವಾಳ ಕ್ಲಸ್ಟರ್ ನ ಸಂಪನ್ಮೂಲ ವ್ಯಕ್ತಿಯಾದ ಸುಧಾಕರ್ ಭಟ್ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಆರಂಭದಲ್ಲಿ ಶಾಲಾ ಮುಖ್ಯಶಿಕ್ಷಕಿ ಆಮಿನಾ ಬಾನು ಅವರು ಅತಿಥಿ ಗಣ್ಯರು ಹಾಗೂ ಸಭಿಕರನ್ನು ಸ್ವಾಗತಿಸಿದರು. ಸಹ ಶಿಕ್ಷಕಿಯವರಾದ ಕು.ನಿಖಿತಾರವರು ಧನ್ಯವಾದಗೈದರು. ಸಹ ಶಿಕ್ಷಕ ಹಿಂದಿ ಪ್ರಾಧ್ಯಾಪಕ ಹೈದರ್ ಕಾರ್ಯಕ್ರಮವನ್ನು ನಿರ್ವಹಿಸಿದರು.
ಕಡೇಶಿವಾಲಯ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುರೇಶ್ ಪೂಜಾರಿ ಕನ್ನೋಟ್, ನಗರ ಕ್ಲಸ್ಟರ್ ಮಾಜಿ ವಲಯ ಸಂಪನ್ಮೂಲ ವ್ಯಕ್ತಿ ಸತೀಶ್ ರಾವ್, ಬಂಟ್ವಾಳ ತಾಲೂಕು ಶಿಕ್ಷಕ ಸಂಘದ ಅಧ್ಯಕ್ಷರು ಗುರುರಾಜ್ ಪಾಟ್ರಕೋಡಿ, ಜನಾಬ್ ಝಕರಿಯಾ ದಾರಿಮಿ ಪ್ರಧಾನ ಕಾರ್ಯದರ್ಶಿಗಳು ಶಿಕ್ಷಕ ರಕ್ಷಕ ಸಂಘ ವಿಸ್ಡಮ್ ಆಂಗ್ಲ ಮಾಧ್ಯಮ ಶಾಲೆ ಬುಡೋಳಿ ಗಡಿಯಾರ ಇದರ ಅಧ್ಯಕ್ಷರು ರಾಜೇಶ್ವರಿ, ಸ್ಥಳೀಯ ಮುಹಿಯುದ್ದೀನ್ ಜುಮಾ ಮಸೀದಿ ಗಡಿಯಾರ ಇದರ ಅಧ್ಯಕ್ಷರಾದ ಜನಾಬ್ ರಿಯಾಝ್ ಕಲ್ಲಾಜೆ, ಶಾಲಾ ಶಿಕ್ಷಕ ರಕ್ಷಕ ಸಂಘದ ಮಾಜಿ ಅಧ್ಯಕ್ಷ ಹಾಜಿ ಇಸ್ಮಾಯಿಲ್ ಕಲ್ಲಾಜೆ, ಜನಾಬ್ ಅಲ್ತಾಫ್ ದಾರಿಮಿ ಖತೀಬರು ಹಯಾತುಲ್ ಇಸ್ಲಾಮ್ ಜುಮಾ ಮಸೀದಿ ಪೆರ್ಲಾಪು ಮತ್ತು ಅಧ್ಯಾಪಕರು ಮುಹಿಯುದ್ದೀನ್ ಜುಮಾ ಮಸೀದಿ ಗಡಿಯಾರ ಇವರುಗಳು ಉಪಸ್ಥಿತರಿದ್ದರು.