ಪುತ್ತೂರು: ಪುತ್ತೂರಿನ ಐ.ಸಿ.ಎ.ಆರ್-ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಸಂವಿಧಾನ ದಿನಾಚರಣೆ ಮಾಡಲಾಯಿತು.
ಬೆಳಿಗ್ಗೆ ಸಂವಿಧಾನದ ಮುನ್ನುಡಿ ಓದುವಿಕೆ ಎಂಬ ಪ್ರತಿಜ್ಞೆ ನಡೆಯಿತು. ಸಂಸ್ಥೆಯ ಹಣಕಾಸು ಮತ್ತು ಲೆಕ್ಕಪತ್ರ ಅಧಿಕಾರಿ ಅಶ್ವಿನ್ ಜಿ. ಸಾಂವಿಧಾನಿಕ ಮೌಲ್ಯ, ಸಂವಿಧಾನ ರಚನೆಯ ಇತಿಹಾಸ ಮತ್ತು ಮೂಲಭೂತ ಹಕ್ಕುಗಳ ಬಗ್ಗೆ ಮಾತನಾಡಿದರು. ಸಂಸ್ಥೆಯ ನಿರ್ದೇಶಕರಾದ ಡಾ. ಜೆ.ಡಿ. ಅಡಿಗ ಭಾರತೀಯ ಸಂವಿಧಾನದ ಮಹತ್ವ ತಿಳಿಸಿದರು. ಸಂವಿಧಾನ ದಿನದ ಚಲನಚಿತ್ರವನ್ನು ಸಹ ಪ್ರದರ್ಶಿಸಲಾಯಿತು.
