ಉಪ್ಪಿನಂಗಡಿ: ಇಲ್ಲಿನ ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಉತ್ಸವ ಹಾಗೂ ಬಲಿವಾಡು ಕೂಟ ನ.26ರಂದು ವಿಜೃಂಭಣೆಯಿಂದ ಜರಗಿತು.
ಬೆಳಗ್ಗೆ ಉಷಃ ಪೂಜೆಯಿಂದ ಆರಂಭಗೊಂಡು ಬೆಳಗ್ಗಿನ ಪೂಜೆ, ನಾಗತಂಬಿಲ, ಮಧ್ಯಾಹ್ನದ ಪೂಜೆ, ಪಲ್ಲ ಪೂಜೆ ಮತ್ತಿತರ ಸೇವೆಗಳು ನಡೆದು ಮಧ್ಯಾಹ್ನ ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ನಡೆಯಿತು. ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ಪೆರಿಯಡ್ಕ ಇವರಿಂದ ಭಜನಾ ಸೇವೆಗಳು ನಡೆದವು. ರಾತ್ರಿ 8.15ಕ್ಕೆ ಪೂಜೆ ನಡೆದು ಪ್ರಸಾದ ವಿತರಣೆ ನಡೆಸಲಾಯಿತು.
ಈ ಸಂದರ್ಭ ದೇವಾಲಯದ ಆಡಳಿತ ಸಮಿತಿಯ ಅಧ್ಯಕ್ಷ ನಡುಸಾರು ಉದಯಶಂಕರ ಭಟ್, ಉಪಾಧ್ಯಕ್ಷರಾದ ಶ್ರೀಮತಿ ಶಾಂಭವಿ ರೈ ಪುಳಿತ್ತಡಿ, ಸುರೇಶ್ ಅತ್ರಮಜಲು, ಕಾರ್ಯದರ್ಶಿ ಕೇಶವ ರಂಗಾಜೆ, ಕೋಶಾಧಿಕಾರಿ ರಾಮಚಂದ್ರ ಮಣಿಯಾಣಿ ನೆಡ್ಚಿಲು, ಸದಸ್ಯರಾದ ಹರೀಶ್ವರ ಮೊಗ್ರಾಲ್ ಕುವೆಚ್ಚಾರು, ಶಂಕರನಾರಾಯಣ ಭಟ್ ಬೊಳ್ಳಾವು, ಸದಾನಂದ ಶೆಟ್ಟಿ ಕಿಂಡೋವು, ಲೋಕೇಶ ಬೆತ್ತೋಡಿ, ವಿಜಯ ಶಿಲ್ಪಿ ಕುಕ್ಕುಜೆ, ಜತ್ತಪ್ಪ ನಾಯ್ಕ ಬೊಳ್ಳಾವು, ರಾಮಣ್ಣ ಶೆಟ್ಟಿ ಬೊಳ್ಳಾವು, ಲಕ್ಷ್ಮಣ ಗೌಡ ನೆಡ್ಚಿಲು, ನವೀನ್ ಕುಮಾರ್ ಕಲ್ಯಾಟೆ, ಅವನೀಶ್ ಪೆರಿಯಡ್ಕ ಮತ್ತಿತರರು ಉಪಸ್ಥಿತರಿದ್ದರು.
