ಪುತ್ತೂರು; ಜಾಗೃತಿ ಟ್ರಸ್ಟ್ ಬೆಂಗಳೂರು ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸರಸ್ವತಿ ಸದನದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸರಕಾರಿ ಪ್ರೌಢಶಾಲೆ ಕಬಕದ ಶಿಕ್ಷಕಿ, ಬೊಳುವಾರು ನಿವಾಸಿ, ಡಾ॥ ಶಾಂತಾ ಪುತ್ತೂರು ರವರಿಗೆ ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರದ ಸಾಧನೆಗೆ ಕನ್ನಡ ಸೇವಾ ರತ್ನ 2025 ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಡಾ॥ ಶಾಂತಾ ಪುತ್ತೂರುರವರಿಗೆ ಶಿಕ್ಷಣ ಸಾಹಿತ್ಯ ಸಂಘಟನೆಗೆ ಗೌರವ ಡಾಕ್ಟರೇಟ್ ಲಭಿಸಿದ್ದು ಮೂವತ್ತೊಂದು ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಪ್ರಸ್ತುತ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಪುತ್ತೂರು ಘಟಕದ ಅಧ್ಯಕ್ಷೆ,ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಕಾಸರಗೋಡು, ಕರ್ನಾಟಕ ರಾಜ್ಯ ಸಂಚಾಲಕಿ,ಯೋಗ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿದ್ದು , ರಾಜ್ಯ ಮಟ್ಟದ ಯೋಗಾಸನ ತೀರ್ಪುಗಾರರು, ಗೈಡ್ಸ್ ಶಿಕ್ಷಕಿಯಾಗಿದ್ದು ಗೈಡ್ಸ್ ಲಾಂಗ್ ಸರ್ವಿಸ್ ಅವಾರ್ಡ್ ಪಡೆದಿರುತ್ತಾರೆ.ಧರ್ಮಸ್ಥಳ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ ಧರ್ಮಸ್ಥಳ ದ ತಾಲೂಕು ಯೋಗ ಸಂಘಟಕಿಯಾಗಿ ಎಂಟು ವರ್ಷ ಸೇವೆ ಸಲ್ಲಿಸಿರುತ್ತಾರೆ .ಶಿಕ್ಷಣ, ಸಾಹಿತ್ಯ,ಸಂಘಟನೆಗೆ ಇವರಿಗೆ ಹಲವು ರಾಜ್ಯ ಪ್ರಶಸ್ತಿ ಲಭಿಸಿದೆ.
ವೇದಿಕೆಯಲ್ಲಿ ಜಾಗೃತಿ ಟ್ರಸ್ಟ್ ಅಧ್ಯಕ್ಷ ರಾದ ನಾಗೇಶ್ ಬಿ,,ಸಮಾಜಸೇವಕರಾದ ವೆಂಕಟೇಶ್, ಚಲನಚಿತ್ರ ನಟಿ ಭಾಗೀರಥಿ ರೆಡ್ಡಿ, ಗುರುರಾಜ್ ಕಾಸರಗೋಡು ಅಧ್ಯಕ್ಷರು ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ (ರಿ), ಸಾಹಿತಿ ಪಾಪೇಗೌಡರು ಮೊದಲಾದ ಗಣ್ಯರು ಉಪಸ್ಥಿತರಿದ್ದರು.
