ಪುತ್ತೂರು: ಪುತ್ತೂರಿನ ಹೃದಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ ಹಾಗೂ ಶ್ರೀ ಪ್ರಗತಿ ವಿಸ್ತಾರ ಕಾಲೇಜ್ ಫಾರ್ ಏವಿಯೇಶನ್ ಆಂಡ್ ಮ್ಯಾನೇಜ್ಮೆಂಟ್ ಸಂಸ್ಥೆಯ ವಾರ್ಷಿಕ ಕ್ರೀಡಾಕೂಟ ನವೆಂಬರ್ 25 ರಂದು ಕೊಂಬೆಟ್ಟು ಸರಕಾರಿ ಜೂನಿಯರ್ ಕಾಲೇಜಿನ ಮೈದಾನದಲ್ಲಿ ನಡೆಯಿತು.

ಪುತ್ತೂರು ರಾಮಕೃಷ್ಣ ಪ್ರೌಡಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಕ್ರೀಡಾಕೂಟದ ದ್ವಜರೋಹಣವನ್ನು ನೆರವೇರಿಸಿ ,ಪುತ್ತೂರಿನಲ್ಲಿ ಪ್ರಗತಿ ಸಂಸ್ಥೆಯು ವಿಭಿನ್ನವಾದ ರೀತಿಯಲ್ಲಿ ಶಿಕ್ಷಣದಲ್ಲಿ ತನ್ನನ್ನು ತೊಡಗಿಸುವ ಸಂಸ್ಥೆ . ಈ ಸಂಸ್ಥೆಯು ಹಮ್ಮಿಕೊಂಡಿರುವ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಲಿ ಎಂದರು.
ಕ್ರೀಡಾಪಟು ಸುಜ್ಞಾನಂದ ಹಾಗೂ ತಂಡ ಕ್ರೀಡಾಂಗಣಕ್ಕೆ ತಂದ ಕ್ರೀಡಾಜ್ಯೋತಿಯ ನೇತೃತ್ವ ವಹಿಸಿದರು. ಮೂಡಬಿದಿರೆ ಶ್ರೀ ಪ್ರಗತಿ ಎಜುಕೇಶನ್ ಫೌಂಡೆಶನ್ ಇದರ ಖಜಾಂಜಿ ಸುದರ್ಶನ್ ಮೂಡಬಿದಿರೆ ಮಾತನಾಡಿ, ಕ್ರೀಡೆ ಎಂಬುವುದು ಕೇವಲ ಶಾರೀರಿಕವಾಗಿ ಮಾತ್ರವಲ್ಲ ಮಾನಸಿಕವಾಗಿ ನಮ್ಮನ್ನು ಸದೃಢಗೊಳಿಸುತ್ತದೆ. ಕ್ರೀಡೆಯಲ್ಲಿ ಗೆಲುವು ಸೋಲು ಮುಖ್ಯವಲ್ಲ ಭಾಗವಹಿಸುಕೆ ಮುಖ್ಯ ಎಂದರು.
ಪಥಸಂಚಲನದಲ್ಲಿ ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳ ಆಕರ್ಷಕ ಬ್ಯಾಂಡ್ ಸೆಟ್ ನೊಂದಿಗೆ 7 ತಂಡಗಳು ಪಥಸಂಚಲನದಲ್ಲಿ ಪಾಲ್ಗೊಂಡರು. ಪ್ರಗತಿ ಸ್ಟಡಿ ಸೆಂಟರ್ ನ ಮುಖ್ಯೋಪಾಧ್ಯಾಯಿನಿ ಪ್ರಮೀಳಾ .ಎನ್.ಡಿ ಪ್ರತಿಜ್ಞೆ ವಿಧಿಯನ್ನು ಬೋಧಿಸಿದರು.
ರಾಜ್ಯಪ್ರಶಸ್ತಿ ವಿಜೇತ, ದೈಹಿಕ ಶಿಕ್ಷಕ ದಯಾನಂದ್ ರೈ ಕೋರ್ಮಂಡ,ಪಾಣಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಸುಧಾಕರ್ ರೈ ,ಪುತ್ತೂರು ಅಂಬಿಕ ಸಿ.ಬಿ.ಎಸ್.ಪಿ ವಿದ್ಯಾಲಯದ ದೈಹಿಕ ಶಿಕ್ಷಕ ಸಂತೋಷ್ ಕುಮಾರ್ ,ಕುಂಬ್ರ ಕೆ.ಪಿ.ಎಸ್.ಸಿ ಶಾಲೆಯ ದೈಹಿಕ ಶಿಕ್ಷಕ ಸೀತಾರಾಮ ,ಕಬಡ್ಡಿ ತರಬೇತುದಾರ ಮನೋಹರ್ ಕುಮಾರ್ ಕ್ರೀಡಾಕೂಟದ ತೀರ್ಪುಗಾರರಾಗಿ ಭಾಗವಹಿಸಿದರು.
ವಿದ್ಯಾರ್ಥಿಗಳಿಗೆ 100ಮೀ , 200ಮೀ , 400ಮೀ , 800ಮೀ ಓಟ , ಉದ್ದಜಿಗಿತ , ಗುಂಡು ಎಸೆತ , ಚಕ್ರ ಎಸೆತ ರೀತಿ ತ್ರೋಬಾಲ್ , ವಾಲಿಬಾಲ್ ಹಾಗೂ ಹಗ್ಗಾಜಗ್ಗಾಟ ಮುಂತಾದ ಸ್ಪರ್ಧೆಗಳನ್ನು ನಡೆಸಿದರು. ಬಾಲಕರ ಕ್ರಿಕೆಟ್ ಪಂದ್ಯಾಟದಲ್ಲಿ ಪ್ರಗತಿ ಸ್ಟಡಿ ಸೆಂಟರ್ ಪ್ರಥಮ ಹಾಗೂ ಪ್ರಗತಿ ವಿಸ್ತಾರ ದ್ವೀತಿಯ , ವಾಲಿಬಾಲ್ ಪಂದ್ಯಾಟದಲ್ಲಿ ಪ್ರಗತಿ ವಿಸ್ತಾರ ಪ್ರಥಮ ಹಾಗೂ ಪ್ರಗತಿ ಸ್ಟಡಿ ಸೆಂಟರ್ ದ್ವೀತಿಯ , ಹಗ್ಗಾಜಗ್ಗಾಟ ಪಂದ್ಯಾಟದಲ್ಲಿ ಪ್ರಗತಿ ವಿಸ್ತಾರ ಪ್ರಥಮ ಹಾಗೂ ಪ್ರಗತಿ ಸ್ಟಡಿ ಸೆಂಟರ್ ದ್ವೀತಿಯ , ಕಬಡ್ಡಿ ಪಂದ್ಯಾಟದಲ್ಲಿ ಪ್ರಗತಿ ವಿಸ್ತಾರ ಪ್ರಥಮ ಹಾಗೂ ಪ್ರಗತಿ ಸ್ಟಡಿ ಸೆಂಟರ್ ದ್ವೀತಿಯ , ಬಾಲಕಿಯರ ಹಗ್ಗಾ ಜಗ್ಗಾಟ ಪಂದ್ಯಾಟದಲ್ಲಿ ಪ್ರಗತಿ ಸ್ಟಡಿ ಸೆಂಟರ್ ಪ್ರಥಮ ಹಾಗೂ ಪ್ರಗತಿ ವಿಸ್ತಾರ ದ್ವೀತಿಯ , ಬಾಲಕಿಯರ ತ್ರೋಬಾಲ್ ಪಂದ್ಯಾಟದಲ್ಲಿ ಪ್ರಗತಿ ಸ್ಟಡಿ ಸೆಂಟರ್ ಪ್ರಥಮ ಹಾಗೂ ದ್ವೀತಿಯ ಸ್ಥಾನವನ್ನು ಪಡೆದುಕೊಂಡರು.
ಪಂದ್ಯಾಟದಲ್ಲಿ ಸಮಗ್ರ ಪ್ರಶಸ್ತಿಯನ್ನು ಎರಡು ಸಂಸ್ಥೆಗಳು ಸಮಾನವಾಗಿ ಹಂಚಿಕೊಂಡಿತು. ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಪದಕಗಳನ್ನು ನೀಡಿ ಅಭಿನಂದಿಸಿದರು.
ಉಪನ್ಯಾಸಕಿ ಮಧುಶ್ರೀ ಹಾಗೂ ಹರ್ಷಿತಾ ಪ್ರಾರ್ಥಿಸಿದರು. ಶ್ರೀ ಪ್ರಗತಿ ವಿಸ್ತಾರ ಕಾಲೇಜಿನ ಆಡಳಿತಾಧಿಕಾರಿ ರಶ್ಮಿತಾ ಸ್ವಾಗತಿಸಿದರು.ಉಪನ್ಯಾಸಕರಾದ ನಾಸೀರ್ ಹಾಗೂ ಹರ್ಷಿತಾ ನಿರೂಪಿಸಿದರು.