ನೆಲ್ಯಾಡಿ: ಎಕ್ಸೆಲ್ ಪ.ಪೂ.ಕಾಲೇಜು ಗುರುವಾಯನಕೆರೆ ಬೆಳ್ತಂಗಡಿ ಇವರ ’ಎಕ್ಸೆಲ್ ಅಕ್ಷರೋತ್ಸವ’ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಹಾಗೂ ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆಯ ದಶಮಾನೋತ್ಸವ ಕಾರ್ಯಕ್ರಮಕ್ಕೆ ಬಜತ್ತೂರು ವಳಾಲು ಸರಕಾರಿ ಹಿ.ಪ್ರಾ.ಶಾಲೆಯ ಶಿಕ್ಷಕಿ ಪವಿತ್ರಾದಿನೇಶ್ ಅವರ ’ಗೋಮಾತೆ ’ ಕವನ ಆಯ್ಕೆಗೊಂಡಿದ್ದು, ನ.27ರಂದು ನಡೆದ ಎಕ್ಸೆಲ್ ಪರ್ಬದ ’ಅಕ್ಷರೋತ್ಸವ’ ಕವಿಗೋಷ್ಠಿಯಲ್ಲಿ ಅವರು ಭಾಗವಹಿಸಿ ಕವನವಾಚನ ಮಾಡಿದರು.
ಎಕ್ಸೆಲ್ ಅಕ್ಷರೋತ್ಸವಕ್ಕೆ ಸಾವಿರಕ್ಕಿಂತಲೂ ಹೆಚ್ಚು ಕವನ ಬಂದಿದ್ದು ಅದರಲ್ಲಿ ಪವಿತ್ರಾದಿನೇಶ್ರವರ ಗೋಮಾತೆ ಸಹಿತ 35 ಕವನಗಳು ಆಯ್ಕೆಗೊಂಡಿತ್ತು. ಪವಿತ್ರಾ ದಿನೇಶ್ ಅವರಿಗೆ ಎಕ್ಸೆಲ್ ವತಿಯಿಂದ ಅಭಿನಂದನಾ ಪತ್ರ ನೀಡಲಾಗಿದೆ. ಇವರು ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಹಳ್ಳಿಂಗೇರಿ ನಿವಾಸಿ ದಿನೇಶ್ ಅವರ ಪತ್ನಿ.
