ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ: ಸುದಾನ ಶಾಲೆ ದ್ವಿತೀಯ

0

ಪುತ್ತೂರು: ಶಾಲಾ ಶಿಕ್ಷಣ ಇಲಾಖೆ ಮತ್ತು ಪುತ್ತೂರಿನ ಕೊಂಬೆಟ್ಟು ಪದವಿ ಪೂರ್ವ ಕಾಲೇಜು ಜಂಟಿಯಾಗಿ ಆಯೋಜಿಸಿದ್ದ ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪುತ್ತೂರಿನ ಸುದಾನ ವಸತಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ, ಗುಂಪು ವಿಭಾಗದಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಾದ ಅದ್ವಿಜ್ ಸಜೇಶ್ ಮತ್ತು ಮಿಥುನ್ ಪಿ ಪಿ ಪ್ರದರ್ಶಿಸಿದ ದಿ ಫ್ಯೂಚರ್ ಆಫ್ ಹೋಂ ರೆಹಬಿಲಶನ್; ದ ಅಟೊ ಫಿಸಿಯೋ ಡಿವೈಸ್ ಎಂಬ ವಿಜ್ಞಾನ ಮಾದರಿಯು ದ್ವಿತೀಯ ಬಹುಮಾನವನ್ನು ಪಡೆದಿದೆ. ವೈಯಕ್ತಿಕ ವಿಭಾಗದಲ್ಲಿ ಸೃಷ್ಟಿ ಎನ್ ವಿ (8ನೇ ) ಭಾಗವಹಿಸಿದ್ದರು.

 ಇವರಿಗೆ ಶಾಲಾ ಸಹ ಶಿಕ್ಷಕರಾದ ರೇಖಾಮಣಿ ಮತ್ತು ಶಾರದಾ ಅವರು ಮಾರ್ಗದರ್ಶನ ನೀಡಿರುತ್ತಾರೆ. ಶಾಲಾ ಸಂಚಾಲಕ ರೆ. ವಿಜಯ ಹಾರ್ವಿನ್, ಆಡಳಿತಾಧಿಕಾರಿ ಸುಶಾಂತ್ ಹಾರ್ವಿನ್ ಮತ್ತು ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ವಿದ್ಯಾರ್ಥಿಗಳನ್ನು ಅಭಿನಂದಿಸಿ ಶುಭಹಾರೈಸಿದ್ದಾರೆ

            

LEAVE A REPLY

Please enter your comment!
Please enter your name here