
ಪುತ್ತೂರು: ಪುತ್ತೂರಿನ ಹೃದಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ ಹಾಗೂ ಎ. ಪಿ. ಎಂ. ಸಿ ಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಪ್ರಗತಿ ವಿಸ್ತಾರ ಕಾಲೇಜ್ ಫಾರ್ ಏವಿಯೇಶನ್ ಆಂಡ್ ಮ್ಯಾನೇಜ್ಮೆಂಟಿನ ಸಹಯೋಗದಲ್ಲಿ ನವೆಂಬರ್ 30 ರಂದು ಮಹಾವೀರ ವೆಂಚರ್ಸ್ ಎ ಸಿ ಹಾಲ್ ನಲ್ಲಿ ಕಾಲೇಜು ವಾರ್ಷಿಕೋತ್ಸವ ‘ಪ್ರಗತಿ ವಿಸ್ತಾರ ವೈಭವ’ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಶಿಕ್ಷಕ, ಪುತ್ತೂರು ಸುದ್ದಿಬಿಡುಗಡೆಯ ಅಂಕಣಕಾರ, ಮಧುಪ್ರಂಪಚ ಪ್ರಧಾನ ಸಂಪಾದಕ ನಾರಾಯಣ ರೈ ಕುಕ್ಕುವಳ್ಳಿ ಮಾತನಾಡಿ, ಪ್ರಗತಿಗೆ ಪ್ರಗತಿಯೇ ಸಾಟಿ. ಯುವಕರು ದೇಶದ ಸಂಪತ್ತು, ದುರುಪಯೋಗವಾದರೆ ಅದೇ ದೊಡ್ಡ ಆಪತ್ತು. ಈ ಪ್ರಗತಿ ಸಂಸ್ಥೆಯಲ್ಲಿ ವಿದ್ಯಾರ್ಜನೆ ಮಾಡಿದ ವಿದ್ಯಾರ್ಥಿಗಳು ಬೇರೆಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಮನುಷ್ಯನಿಗೆ ಜೀವನದಲ್ಲಿ ಒಳ್ಳೆ ಓದು, ಬರಹ, ಆಹಾರ, ಆರೋಗ್ಯ ಮತ್ತು ತಂದೆ-ತಾಯಿಯರ ಆಶೀರ್ವಾದ ಬಹಳ ಮುಖ್ಯ ಎಂದು ಶುಭಹಾರೈಸಿದರು.
ಮುಖ್ಯ ಅತಿಥಿ CEO Aerospace and Aviation sector skill council, Bengalore ಸಂಘರಕ್ಷಕ ವಿ. ಪಿ ಮಾತನಾಡಿ, ತನ್ನ ಜೀವನದಲ್ಲಿ ಈ ಹಂತಕ್ಕೆ ಬರಲು ಪಟ್ಟ ಶ್ರಮದ ಕುರಿತು ತಿಳಿಸಿದರು. ಹೆಲಿಕಾಫ್ಟ್ರ್ ಹೇಗೆ ಕಾರ್ಯನಿರ್ವಹಿಸುತ್ತದೆ ಹಾಗೂ ಯುದ್ಧವಿಮಾನಗಳನ್ನು ಹೇಗೆ ತಯಾರಿಸುತ್ತಾರೆ, ಇವತ್ತಿನ ದಿನ ಏವಿಯೇಷನ್ ವಿಭಾಗದಲ್ಲಿ ಲಭ್ಯವಿರುವ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಿದರು.
ಶ್ರೀ ಪ್ರಗತಿ ವಿಸ್ತಾರ ಕಾಲೇಜ್ ಫಾರ್ ಏವಿಯೇಶನ್ ಆಂಡ್ ಮ್ಯಾನೇಜ್ಮೆಂಟಿನ ಖಜಾಂಜಿ ಸುದರ್ಶನ ಮೂಡಬಿದಿರೆ ಇವರು ಮಾತನಾಡಿ, ಭಾರತವು ಎಲ್ಲಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರಬೇಕೆಂದರೆ ಅದಕ್ಕೆ ಕಾರಣ ಯುವಕರು. ಇಂದಿನ ದಿನ ಅತ್ಯಂತ ವೇಗವಾಗಿ ಬೆಳೆಯುವ ಕ್ಷೇತ್ರವೆಂದರೆ ಶಿಕ್ಷಣ ಕ್ಷೇತ್ರ. ಕೇವಲ ಪದವಿ ಪಡೆದುಕೊಂಡರೆ ಸಾಲದು, ಪ್ರತಿಭೆಯು ಬಹಳ ಮುಖ್ಯ ಎಂದು ಹೇಳಿದರು.
ಪ್ರಗತಿ ಸಂಸ್ಥೆಯ ಪ್ರಾಂಶುಪಾಲೆ ಹೇಮಲತಾ ಗೋಕುಲ್ನಾಥ್ ಮತನಾಡಿ, ಮಕ್ಕಳಿಗೆ LKG UKG ಯಿಂದ ಅತ್ಯುತ್ತಮ ಶಿಕ್ಷಣವನ್ನು ನೀಡಬೇಕು. ಅಂತಹ ಶಿಕ್ಷಣವನ್ನು ನೀಡುವ ಸಂಸ್ಥೆಯನ್ನು ಮುಂದಿನ ದಿನಗಳಲ್ಲಿ ಆರಂಭಿಸಬೇಕೆಂಬುದು ನನ್ನ ಕನಸು ಎಂದು ತಿಳಿಸಿದರು. ಪ್ರಗತಿ ಸ್ಟಡಿ ಸೆಂಟರ್ನ ಸಂಚಾಲಕ ಗೋಕುಲ್ನಾಥ್ ಪಿ.ವಿ. ಮಾತನಾಡಿ, ಪ್ರಗತಿ ಸ್ಟಡಿ ಸೆಂಟರ್ ನಡೆದು ಬಂದ ದಾರಿಯನ್ನು ಪ್ರಾಸ್ತವಿಕ ನುಡಿಗಳ ಜೊತೆಗೆ AASSE ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀ ಪ್ರಗತಿ ವಿಸ್ತಾರ ಕಾಲೇಜ್ ಫಾರ್ ಏವಿಯೇಶನ್ ಆಂಡ್ ಮ್ಯಾನೇಜ್ಮೆಂಟಿನ ಅಧ್ಯಕ್ಷೆ ಹೇಮಾವತಿ ಸುದರ್ಶನ ಮೂಡಬಿದಿರೆ ಇವರು ಉಪಸ್ಥಿತರಿದ್ದರು.
ಪ್ರಗತಿ ಸ್ಟಡಿ ಸೆಂಟರ್ನ ಮುಖ್ಯೋಪಾಧ್ಯಾಯರಾದ ಪ್ರಮೀಳಾ ಎನ್.ಡಿ. ಹಾಗೂ ಶ್ರೀ ಪ್ರಗತಿ ವಿಸ್ತಾರ ಕಾಲೇಜ್ ಫಾರ್ ಏವಿಯೇಶನ್ ಆಂಡ್ ಮ್ಯಾನೇಜ್ಮೆಂಟಿನ ವಾರ್ಷಿಕ ಪ್ರಾಂಶುಪಾಲರಾದ ಮಾಧವಿ ಎನ್. ಸಿ ಇವರು ವಾರ್ಷಿಕ ವರದಿ ಮಂಡಿಸಿದರು.
2024-25ನೇ ಶೈಕ್ಷಣಿಕ ವರ್ಷದಲ್ಲಿ ಅತೀ ಹೆಚ್ಚು ಸಾಧನೆಗೈದ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾದ ಮೊಹಮ್ಮದ್ ಅರ್ಷಕ್ ಇವರನ್ನು ನಾರಾಯಣ ರೈ ಕುಕ್ಕುವಳ್ಳಿ ಇವರ ವತಿಯಿಂದ ಅಭಿನಂಧಿಸಲಾಯಿತು. ಎರಡೂ ಸಂಸ್ಥೆಯ ವತಿಯಿಂದ ಅತ್ಯುತ್ತಮ ಪೋಷಕ ಪ್ರಶಸ್ತಿಯನ್ನು ದ್ವಿತೀಯ ಪಿಯುಸಿ ವಿದ್ಯಾರ್ಥಿಯಾದ ಕುಶಾಲ್ ಕಾರ್ಯಪ್ಪ ಹಾಗೂ 1st Year Diploma in aviation ವಿದ್ಯಾರ್ಥಿಯಾದ ಅಕ್ಷಮ್ ಇವರ ಪೋಷಕರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇಲ್ಲಿನ 55 ವಿದ್ಯಾರ್ಥಿಗಳಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿದರು. ಪ್ರಗತಿ ಸ್ಟಡಿ ಸೆಂಟರ್ ಹಾಗೂ ಶ್ರೀ ಪ್ರಗತಿ ವಿಸ್ತಾರ ಕಾಲೇಜ್ ಫಾರ್ ಏವಿಯೇಶನ್ ಆಂಡ್ ಮ್ಯಾನೇಜ್ಮೆಂಟಿನ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.
ವಿದ್ಯಾರ್ಥಿಗಳಾದ ಲಶ್ವಿತ್, ಹರ್ಷಿತಾ ಹಾಗೂ ದೇವಿಕಾ ಪ್ರಾರ್ಥಿಸಿದರು. ವಿದ್ಯಾರ್ಥಿನಿಯಾದ ಸಾನಿಧ್ಯ ಮಾರನಹಳ್ಳಿ ಸ್ವಾಗತಿಸಿದರು. ವಿದ್ಯಾರ್ಥಿ ನಾಯಕ ಆಲ್ವಿನ್ ನೊರೋನಾ ವಂದಿಸಿದರು. ಉಪನ್ಯಾಸಕಿ ಹರ್ಷಿತಾ ವಿವಿಧ ಪಂದ್ಯಾಟಗಳಲ್ಲಿ ಪ್ರಶಸ್ತಿ ವಿಜೇತರ ಹೆಸರನ್ನು ವಾಚಿಸಿದರು. ಉಪನ್ಯಾಸಕರಾದ ನಾಸಿರ್ ಹಾಗೂ ರಾನಿಹ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಎರಡೂ ಸಂಸ್ಥೆಯ ಉಪನ್ಯಾಸಕರು, ಪೋಷಕರೂ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.