ಪುತ್ತೂರು: ವಿವಿಧ ಕ್ರೀಡೆಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ ಕ್ರೀಡಾ ಸಾಧಕರಿಗೆ ರಾಜ್ಯ ಸರಕಾರದಿಂದ ಕೊಡಲ್ಪಡುವ ಏಕಲವ್ಯ ಪ್ರಶಸ್ತಿಯನ್ನು ಕೊಡಿಪಾಡಿ ಮೂಲದ ಸೌಂದರ್ಯ ಪಿ. ಮಂಜಪ್ಪರವರು ಆಡಳಿತ ನಿರ್ದೇಶಕರಾಗಿರುವ ಬೆಂಗಳೂರಿನ ಸಿಡೆದಹಳ್ಳಿ ಸೌಂದರ್ಯ ನಗರದಲ್ಲಿರುವ ಸೌಂದರ್ಯ ಇನ್ಸಿಟ್ಯೂಟ್ ಆಪ್ ಮ್ಯಾನೇಜ್ ಮೆಂಟ್ ಸೈನ್ಸ್ ನ ಬಿಕಾಂ ವಿದ್ಯಾರ್ಥಿ ಪ್ರಿಯಾಂಕಾ ಹಾಗೂ ಬಿ.ಎ. ವಿದ್ಯಾರ್ಥಿ ನೈದಿಲೆರವರು ಪಡೆದುಕೊಂಡಿದ್ದಾರೆ.
ಇವರಿಗೆ ಬೆಂಗಳೂರಿನ ಯವನಿಕಾ ಸಭಾಂಗಣದಲ್ಲಿ ನಡೆದ 2022 ಮತ್ತು 2023ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಪ್ರಶಸ್ತಿ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಸಚಿವ ರಾಮಲಿಂಗಾರೆಡ್ಡಿ, ಕರ್ನಾಟಕ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷ ಕೆ.ಗೋವಿಂದ ರಾಜು ಶಾಸಕ ರಿಜ್ವಾನ್ ಹರ್ಷದ್ ಹಾಗೂ ಕ್ರೀಡಾ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಏಕಲವ್ಯ ಪ್ರಶಸ್ತಿಯು 4 ಲಕ್ಷ ರೂ. ನಗದು ಮತ್ತು ಏಕಲವ್ಯ ಪ್ರತಿಮೆಯನ್ನು ಒಳಗೊಂಡಿದೆ.
ನೈದಿಲೆ ಬಿ. ಫೆನ್ಸಿಂಗ್ ನಲ್ಲಿ ಹಾಗೂ ಪ್ರಿಯಾಂಕ ಎಸ್. ರವರು ವಾಲಿಬಾಲ್ ನಲ್ಲಿ ಮಾಡಿದ ಸಾಧನೆಗಾಗಿ ಪ್ರಶಸ್ತಿ ಲಭಿಸಿದೆ.