ಮಕ್ಕಳು ಅಂತರಾಷ್ಟ್ರೀಯ ಸಂಸ್ಥೆಯ ಸದಸ್ಯರಾಗಿ ರಾಷ್ಟ್ರಕ್ಕೆ ಸಂಪತ್ತಾಗಬೇಕು – ರೇ ವಿಜಯ ಹಾರ್ವಿನ್
ಪುತ್ತೂರು: ಕೃಷ್ಣನಗರ ಬನ್ನೂರು ಸಮೀಪ ಇರುವ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನೂತನವಾಗಿ ಸ್ಕೌಟ್- ಗೈಡ್, ಕಬ್ -ಬುಲ್ ಬುಲ್, ಬನ್ನಿ ತಂಡಗಳ ಉದ್ಘಾಟನಾ ಸಮಾರಂಭವು ಡಿ.4ರಂದು ನಡೆಯಿತು.
ಮಕ್ಕಳು ಅಂತರಾಷ್ಟ್ರೀಯ ಸಂಸ್ಥೆಯ ಸದಸ್ಯರಾಗಿ ರಾಷ್ಟ್ರಕ್ಕೆ ಸಂಪತ್ತಾಗಬೇಕು:
ಅಂತರಾಷ್ಟ್ರೀಯ ಸಂಸ್ಥೆಯ ಸದಸ್ಯರಾದ ವಿದ್ಯಾರ್ಥಿಗಳಿಗೆ ಸ್ಕಾರ್ಫ್ ತೊಡಿಸಿ, ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಭಾರತ ಸ್ಕೌಟ್ ಗೈಡ್ ನ ಪುತ್ತೂರು ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಸುದಾನ ವಿದ್ಯಾ ಸಂಸ್ಥೆಯ ಸಂಚಾಲಕ ರೇ. ವಿಜಯ ಹಾರ್ವಿನ್ ಅವರು ಮಾತನಾಡಿ, ಇದೊಂದು ಅಂತರಾಷ್ಟ್ರೀಯ ಸಂಸ್ಥೆ. ಇದರಲ್ಲಿ ಸದಸ್ಯರಾಗುವುದು ಹೆಮ್ಮೆಯ ಸಂಗತಿ. ಕೇವಲ ಸದಸ್ಯರಾಗದೆ ಅದರ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು, ತಮ್ಮನ್ನು ತಾವು ವಿಕಸನಗೊಳಿಸುವ ಮೂಲಕ ಮನೆಗೆ ,ಶಾಲೆಗೆ, ಊರಿಗೆ ಹಾಗೂ ರಾಷ್ಟ್ರಕ್ಕೆ ಸಂಪತ್ತಾಗಬೇಕು ಎಂದರು.
ರಾಷ್ಟ್ರಮಟ್ಟದ ಪುರಸ್ಕಾರ ಪಡೆಯಲು ಸಕ್ರೀಯ ಪಾಲ್ಗೊಳ್ಳಿ:
ಭಾರತ ಸ್ಕೌಟ್ ಗೈಡ್ನ ಪುತ್ತೂರು ಸ್ಥಳೀಯ ಸಂಸ್ಥೆಯ ಜೊತೆ ಕಾರ್ಯದರ್ಶಿ ಸುನಿತಾ . ಎಂ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣದ ಬಗ್ಗೆ ಹಾಗೂ ರಾಜ್ಯ ಮತ್ತು ರಾಷ್ಟ್ರಮಟ್ಟದ ಪುರಸ್ಕಾರಗಳನ್ನು ಪಡೆಯಲು ಈ ಆಂದೋಲನದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕು ಎಂದರು.
ಸ್ಕೌಟ್ ಜೀವನದ ಯಶಸ್ಸಿಗೆ ಸಹಕಾರ:
ಸ್ಥಳೀಯ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಸಹ ಕಾರ್ಯದರ್ಶಿ ಮೆಬೆಲ್ ಡಿಸೋಜಾ ಮಾತನಾಡಿ, ಒಮ್ಮೆ ಸ್ಕೌಟ್ ಆದವನು ಜೀವನಪೂರ್ತಿ ಸ್ಕೌಟ್ ಆಗುತ್ತಾನೆ. ಆ ಮೂಲಕ ಜೀವನದ ಪ್ರತಿ ರಂಗದಲ್ಲಿಯೂ ಯಶಸ್ಸನ್ನು ಪಡೆಯಲು ಸಾಧ್ಯ ಎಂದರು.

ಮಕ್ಕಳ ಭವಿಷ್ಯ ಬೆಳಗಲಿ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾ ಮಂಡಳಿಯ ಅಧ್ಯಕ್ಷ ವೆಂಕಟರಮಣಗೌಡ ಕಳುವಾಜೆ ಮಾತನಾಡಿ, ಸ್ಕೌಟ್- ಗೈಡ್ ಪುತ್ತೂರು ಸ್ಥಳೀಯ ಸಂಸ್ಥೆ ಗೆ ಕೃತಜ್ಞತೆ ಸಲ್ಲಿಸಿ ಮಕ್ಕಳಿಗೂ ,ಪೋಷಕರಿಗೂ ಧನ್ಯವಾದ ಹೇಳಿ ಮಕ್ಕಳ ಭವಿಷ್ಯ ಬೆಳಗಲಿ ಎಂದು ಶುಭ ಹಾರೈಸಿದರು.
ಶಾಲೆಗೆ ಹಲವು ಹೊಸತುಗಳ ಸೇರ್ಪಡೆ:
ಶಾಲಾ ಸಂಚಾಲಕ ಎ.ವಿ ನಾರಾಯಣ ರವರು ಪ್ರಸ್ತಾವಿಕವಾಗಿ ಮಾತನಾಡಿ, ನಮ್ಮ ಶಾಲೆಯ ಅನೇಕ ಕಾರ್ಯ ಚಟುವಟಿಕೆಗಳಿಗೆ ಇದೊಂದು ಹೊಸ ಸೇರ್ಪಡೆಯಾಯಿತು ಎಂದು ಹೇಳಿ ಎಲ್ಲರ ಸಹಕಾರ ಕೋರಿದರು.
ವೇದಿಕೆಯಲ್ಲಿ ಆಡಳಿತ ಅಧಿಕಾರಿ ಗುಡ್ಡಪ್ಪ ಗೌಡ ಬಲ್ಯ, ಉಪಾಧ್ಯಕ್ಷ ಉಮೇಶ್ ಮಳುವೇಲು, ರಕ್ಷಕ- ಶಿಕ್ಷಕ ಸಂಘದ ಅಧ್ಯಕೆ ಸೌಮ್ಯಶ್ರೀ ಹೆಗಡೆ, ಶಾಲಾ ಮುಖ್ಯೋಪಾಧ್ಯಾಯ ಅಮರ್ನಾಥ್ ಪಟ್ಟೆ, ಹಾಗೂ ಸ್ಕೌಟ್ ಗೈಡ್ ,ಕಬ್, ಬುಲ್ ಬುಲ್ ,ಬನ್ನಿ ತರಬೇತಿ ಪಡೆದ ಶಿಕ್ಷಕಿಯರಾದ ಸುಚಿತ, ರೀಮಾ ಲೋಬೋ, ಯಶುಭ ರೈ ಹಾಗೂ ಹರ್ಷಿತ ಉಪಸ್ಥಿತರಿದ್ದರು.
ಸ್ಕೌಟ್- ಗೈಡ್,ಬುಲ್ ಬುಲ್, ಬನ್ನಿ ವಿದ್ಯಾರ್ಥಿಗಳಿಂದ ನೃತ್ಯ, ಸ್ಕಿಟ್ ಮತ್ತು ಸ್ಕೌಟ್ ನ ತತ್ವ ,ಕಾನೂನು ಪ್ರತಿಜ್ಞೆಯನ್ನು ನಡೆಸಲಾಯಿತು. ವಿದ್ಯಾರ್ಥಿಗಳು ಸ್ಕೌಟ್ ಪ್ರಾರ್ಥನೆಯೊಂದಿಗೆ ಆರಂಭಿಸಿದ ಕಾರ್ಯಕ್ರಮದಲ್ಲಿ ಸುಚಿತ ಸ್ವಾಗತಿಸಿ, ರೀಮಾ ಲೋಬೋ ವಂದಿಸಿದರು. ಯಶುಭ ರೈ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಸ್ಕೌಟ್ ಧ್ವಜವನ್ನು ಅರಳಿಸಲಾಯಿತು. ಪೋಷಕರು, ಆಡಳಿತ ಮಂಡಳಿ ನಿರ್ದೇಶಕರು ಬೋಧಕ- ಬೋಧಕೇತರ ವೃಂದ ,ವಿದ್ಯಾರ್ಥಿ -ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.