ಪುತ್ತೂರು: ಪುತ್ತೂರಿನ ಐಸಿಎಆರ್-ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಡಿ.5ರಂದು ವಿಶ್ವ ಮಣ್ಣುದಿನ ಆಚರಿಸಲಾಯಿತು. ಈ ವರ್ಷದ ಧ್ಯೇಯವಾಕ್ಯ “ಆರೋಗ್ಯಕರ ಮಣ್ಣಿನಿಂದ ಆರೋಗ್ಯಕರ ನಗರಗಳು” ಎಂಬುದಾಗಿತ್ತು ಸುಸ್ಥಿರ, ವಾಸಯೋಗ್ಯ ಮತ್ತು ಸ್ಥಿತಿಸ್ಥಾಪಕ ನಗರದ ಅಡಿಪಾಯವು ವಾಸ್ತವವಾಗಿ ನೆಲದ ಕೆಳಗೆ ಪ್ರಾರಂಭವಾಗುತ್ತದೆ ಅಂದರೆ ಮಣ್ಣಿನ ಗುಣಮಟ್ಟದೊಂದಿಗೆ ಇದು ಸಾಧ್ಯ ಎಂಬುದನ್ನು ಎತ್ತಿ ತೋರಿಸುತ್ತದೆ.

ಮುಖ್ಯ ಅತಿಥಿ, ಬೆಂಗಳೂರಿನ ಜಿಕೆವಿಕೆ, ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ (ಮಣ್ಣು ವಿಜ್ಞಾನ) ಮತ್ತು ಕೇಂದ್ರ ಕೃಷಿ ವಿಶ್ವವಿದ್ಯಾಲಯ (ಇಂಫಾಲ್)ನ ಮಾಜಿ ಸಂಶೋಧನಾ ನಿರ್ದೇಶಕ ಡಾ. ಸಿಎ ಶ್ರೀನಿವಾಸ ಮೂರ್ತಿ ಮಾತನಾಡಿ ಯಶಸ್ವಿ ತೋಟಗಾರಿಕಾ ಉದ್ಯಮಗಳಿಗೆ ಮಣ್ಣಿನ ಪ್ರಾಮುಖ್ಯತೆ ಮತ್ತು ನಿರ್ವಹಣೆ ಕುರಿತು ಉಪನ್ಯಾಸ ನೀಡಿ ತೋಟಗಾರಿಕಾ ಬೆಳೆಗಳ ಉತ್ಪಾದಕತೆಯನ್ನು ಹೆಚ್ಚಿಸಲು ಮಣ್ಣಿನ ಆರೋಗ್ಯವನ್ನು ಸುಧಾರಿಸುವ ವಿಭಿನ್ನ ವಿಧಾನಗಳನ್ನು ಹೇಳಿದರು. ಪುತ್ತೂರಿನ ಐಸಿಎಆರ್-ಗೇರು ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕ ಡಾ. ಜೆ. ದಿನಕರ ಅಡಿಗ ಅಧ್ಯಕ್ಷತೆ ವಹಿಸಿ ಮಾತನಾಡಿ ಹೆಚ್ಚಿನ ಬೆಳೆ ಉತ್ಪಾದಕತೆಯನ್ನು ಸಾಧಿಸಲು ಆರೋಗ್ಯಕರ ಮಣ್ಣಿನ ಅಗತ್ಯತೆ ಮತ್ತು ಸಾವಯವ ಗೊಬ್ಬರದ ವಿಧಾನಗಳ ಮೂಲಕ ಮಣ್ಣಿನ ಗುಣಮಟ್ಟವನ್ನು ಉತ್ಕೃಷ್ಟಗೊಳಿಸುವ ವಿಧಾನಗಳ ಬಗ್ಗೆ ತಿಳಿಸಿದರು.
ಸುಳ್ಯ ಮತ್ತು ಪುತ್ತೂರು ತಾಲ್ಲೂಕಿನ ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್ಗಳನ್ನು ವಿತರಿಸಲಾಯಿತು. ವಿಸ್ತರಣಾ ಲಘು ಪತ್ರಿಕೆಗಳನ್ನು ಬಿಡುಗಡೆ ಮಾಡಲಾಯಿತು. ರೈತರು ಹಾಗೂ ವಿಜ್ಞಾನಿಗಳ ನಡುವೆ ನಡೆದ ವಿಚಾರ ಸಂಕಿರಣದಲ್ಲಿ ರೈತರು ಕೃಷಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು. ದಕ್ಷಿಣ ಕನ್ನಡದ ಸುಳ್ಯ ತಾಲ್ಲೂಕಿನ ಸಂಪಾಜೆ ಗ್ರಾಮದ ರೈತರು ಮತ್ತು ಸ್ವಸಹಾಯ ಗುಂಪು ಸದಸ್ಯರಿಗೆ ಮಣ್ಣಿನ ಮಾದರಿ ತಂತ್ರಗಳ ಕುರಿತು ಜಾಗೃತಿ ಮೂಡಿಸಲು ಮಣ್ಣು ಪರೀಕ್ಷೆಗೆ ಮಾದರಿ ತೆಗೆಯುವ ಕುರಿತು ಪ್ರಾತ್ಯಕ್ಷಿಕೆಯನ್ನು ಎಚ್. ಪಿ. ವಿಜ್ಞಾನಿ (ತೋಟಗಾರಿಕೆ) ಡಾ.ಭಾಗ್ಯ ನೆಡೆಸಿಕೊಟ್ಟರು. ರೈತರು, ಸ್ವಸಹಾಯ ಗುಂಪು ಸದಸ್ಯರು ಮತ್ತು ಪುತ್ತೂರಿನ ಐಸಿಎಆರ್-ಗೇರು ಸಂಶೋಧನಾ ನಿರ್ದೇಶನಾಲಯದ ಸಿಬ್ಬಂದಿ ಸೇರಿದಂತೆ ಒಟ್ಟು 85 ಜನರು ಭಾಗವಹಿಸಿದ್ದರು. ಪ್ರಧಾನ ವಿಜ್ಞಾನಿ (ಮಣ್ಣು ಶಾಸ್ತ್ರ) ಡಾ.ವೆಂಕಟೇಶ್ ಎಂ.ಎಸ್ ಸ್ವಾಗತಿಸಿದರು. ಹಿರಿಯ ವಿಜ್ಞಾನಿ(ತೋಟಗಾರಿಕೆ) ಡಾ. ವೀಣಾ ಜಿ.ಎಲ್. ವಂದಿಸಿ ಪ್ರಕಾಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.