ಪುತ್ತೂರು ಲಯನ್ಸ್ ಕ್ಲಬ್‌ಗೆ ವಲಯಾಧ್ಯಕ್ಷ ಲ.ಆನಂದ ರೈಯವರ ಅಧಿಕೃತ ಭೇಟಿ

0

ಪುತ್ತೂರು: ಲಯನ್ಸ್ ಕ್ಲಬ್ ಪುತ್ತೂರು ಇದರ ವಲಯಾಧ್ಯಕ್ಷ ಲ.ಆನಂದ ರೈಯವರ ಅಧಿಕೃತ ಭೇಟಿ ಕಾರ್ಯಕ್ರಮ ಡಿ.1ರಂದು ಪುತ್ತೂರಿನ ಲಯನ್ಸ್ ಸೇವಾ ಸದನದಲ್ಲಿ ಪುತ್ತೂರು ಲಯನ್ಸ್ ಕ್ಲಬ್‌ನ ಅಧ್ಯಕ್ಷೆ ಲ. ಪ್ರೇಮಲತಾ ರಾವ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಪಿ.ಆರ್.ಡಿ. ಲ.ಸುದರ್ಶನ ಪಡಿಯಾರ್, ಝೋನ್ ಎಡ್ವೈಸರಿ ಲ. ಸದಾಶಿವ ನಾಯ್ಕ್, ಪ್ರಾಂತೀಯ ರಾಯಭಾರಿ ಲ. ಸದಾನಂದ ಶೆಟ್ಟಿ, ಲಯನ್ಸ್ ಕ್ಲಬ್ ಪುತ್ತೂರು ಇದರ ಕೋಶಾಧಿಕಾರಿ ಲ. ಸುಧಾಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲ. ಶಾರದಾ ಕೇಶವ್ ಪ್ರಾರ್ಥಿಸಿದರು. ಲ. ತ್ರಿವೇಣಿ ಪೆರೋಡಿ ಲಯನ್ಸ್ ನೀತಿ ಸಂಹಿತೆ ವಾಚಿಸಿದ ಬಳಿಕ ಅಧ್ಯಕ್ಷೆ ಲ. ಪ್ರೇಮಲತಾ ರಾವ್ ಸ್ವಾಗತಿಸಿದರು. ಕೋಶಾಧಿಕಾರಿ ಲ. ಸುಧಾಕರ್ ಕ್ಲಬ್‌ನ ವರದಿ ವಾಚಿಸಿದರು. ಲ. PMJF ಕೃಷ್ಣ ಪ್ರಶಾಂತ್ ವಲಯಾಧಿಕಾರಿ ಲ. ಆನಂದ ರೈಯವರನ್ನು ಮತ್ತು ಲ.ಆನಂದ ಆಚಾರ್ಯ, ಲ. ಸುದರ್ಶನ ಪಡಿಯಾರ್ ರನ್ನು ಪರಿಚಯಿಸಿದರು. ಈ ಸಂದರ್ಭದಲ್ಲಿ ಸೇವಾ ಚಟುವಟಿಕೆಯಾಗಿ ಸವಣೂರಿನ ಪ್ರೇರಣಾ ವಿಶೇಷ ಮಕ್ಕಳ ಶಾಲೆಗೆ ಧನಸಹಾಯವನ್ನು ನೀಡಲಾಯಿತು.


ವಲಯಾಧಿಕಾರಿ ಲ. ಆನಂದ ರೈ ಮತ್ತು PRD ಲ. ಸುದರ್ಶನ ಪಡಿಯಾರ್ ರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಉದ್ಯಮ ಸಿರಿ ಪ್ರಶಸ್ತಿ ಪುರಸ್ಕೃತ ಲ. MJF ಶಿವಪ್ರಸಾದ್ ಶೆಟ್ಟಿಯವರು ಗೌರವಿಸಲಾಯಿತು. ವಲಯದ ಎಲ್ಲಾ ಕ್ಲಬ್‌ಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರು, ಲಯನ್ಸ್ ಪುತ್ತೂರಿನ ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here