ಪುತ್ತೂರು: ತುಳು ರಂಗಭೂಮಿಯಲ್ಲಿ ಕಳೆದ 21 ವರ್ಷಗಳಿಂದ ಸಂದೇಶ ಭರಿತ ವಿಭಿನ್ನ ರೀತಿಯ ನಾಟಕಗಳನ್ನು ನೀಡಿದ ʼಬದ್ಕೆರೆ ಕಲ್ಪಿʼ ಖ್ಯಾತಿಯ ಸಂಸಾರ ಕಲಾವಿದೆರ್ ಪುತ್ತೂರು ಇವರ ಈ ವರ್ಷದ ನೂತನ ಕಲ ಕಾಣಿಕೆ ಧರ್ಮ ಜಾಗೃತಿಯ ಜೊತೆಗೆ ಹಾಸ್ಯ ನಾಟಕ ʼಧರ್ಮೋ ರಕ್ಷತಿ ರಕ್ಷಿತಃʼ ಇದರ ಶುಭ ಮುಹೂರ್ತ ಬಲ್ನಾಡು ಶ್ರೀ ಭಟ್ಟಿ ವಿನಾಯಕ ಕ್ಷೇತ್ರದಲ್ಲಿ ದೇವತಾ ಪ್ರಾರ್ಥನೆ ಹಾಗೂ ಪೂಜಾ ವಿಧಿ ವಿಧಾನದಲ್ಲಿ ಕ್ಷೇತ್ರದ ಅರ್ಚಕರ ಆಶೀರ್ವಾದದೊಂದಿಗೆ ನಡೆದು, ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿಯ ಸನ್ನಿಧಿಯಲ್ಲಿ ಪ್ರಾರ್ಥನೆಯೊಂದಿಗೆ ನೆರವೇರಿತು.

ಮಧು ಬಂಗೇರ ಕಲ್ಲಡ್ಕ ಇವರ ರಚನೆಯ ಈ ನಾಟಕದ ಶುಭ ಮುಹೂರ್ತದ ಸಸಂದರ್ಭದಲ್ಲಿ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಲಾವಿದ ಕೇಶವ ಮಚ್ಚಿಮಲೆ, ನಾಗೇಶ್ ಬಲ್ನಾಡು, ಬಾಲಕೃಷ್ಣ ಪೋಳ್ಯ, ರಂಗಯ್ಯ ಬಳ್ಳಾಲ್ ಕೆದಂಬಾಡಿ ಬೀಡು, ಕೆ.ಟಿ ಆನಂದ ವಿಟ್ಲ, ಶ್ರೀಧರ ಪೂಜಾರಿ ಕಲ್ಲೇಗ, ಕೃಷ್ಣ ಪ್ರಸಾದ್ ಬೆಟ್ಟಂಪಾಡಿ, ಹರೀಶ ಶೆಟ್ಟಿ ನೆಲ್ಯಾಡಿ, ಗಂಗಾಧರ ಕಾವು, ಪ್ರಜ್ವಲ್, ಗಣರಾಜ್ಯ ಭಂಡಾರಿ, ಸುನೀತಾ ವಿಟ್ಲ, ಕಾವ್ಯ ಬನ್ನೂರು, ಮೋಹಿನಿ ಈಶ್ವರಮಂಗಳ, ಅಭಿಷೇಕ್ ಪುತೂರು, ಕೃತಿಕ ಪೂಜಾರಿ ಕಲ್ಲಡ್ಕ ಉಪಸ್ಥಿತರಿದ್ದರು.
ತಂಡದ ಸಾರಥ್ಯವನ್ನು ವಹಿಸಿಕೊಂಡಿರುವ ಕೆ.ಟಿ ಆನಂದ್ ವಿಟ್ಲ ಇವರು ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿದರು.
ಧರ್ಮ ಜಾಗೃತಿಯ ಸಂದೇಶದ ಕುತೂಹಲಕಾರಿ ಸನ್ನಿವೇಶದ ಈ ನಾಟಕವು ಅತಿ ಶೀಘ್ರದಲ್ಲಿ ಪ್ರದರ್ಶನಕ್ಕೆ ಸಿದ್ಧವಾಗುತ್ತಿದ್ದು ಕಲಾಭಿಮಾನಿಗಳು, ಕಲಾಪೋಷಕರ ಕಲಾಸಂಘಟಕರು ಸಹಕಾರವನ್ನು ನೀಡಿ ಈ ನಾಟಕದ ಯಶಸ್ವಿಗೆ ತಾವೆಲ್ಲರೂ ಕೈಜೋಡಿಸಬೇಕೆಂದು ತಂಡದ ಸಮಗ್ರ ನಿರ್ವಹಣೆಯ ಬಿ ರಂಗಯ್ಯ ಬಳ್ಳಾಲ್ ಕೆದಂಬಾಡಿ ಬೀಡು ಇವರು ತಿಳಿಸಿದ್ದಾರೆ.