ಕಡಬ: ಕಡಬ ತಾಲೂಕಿನ ಬಂಟ್ರ ಗ್ರಾಮದ ನಿವಾಸಿ ಸುಪ್ರೀತ್ ಕುಮಾರ್ ಜಿ (34) ಅವರ ಪತ್ನಿ ಕವಿತಾ (27) ನಾಪತ್ತೆಯಾಗಿರುವ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕವಿತಾ ಅವರು ಇತ್ತೀಚೆಗೆ ತಾಯಿ ಮನೆಯಾದ ಬೆಳ್ತಂಗಡಿ ತಾಲೂಕು ನ್ಯಾಯ ತರ್ಪು ಗ್ರಾಮದ ಗೋವಿಂದೂರು ಮನೆಗೆ ಹೋಗಿ ಶುಕ್ರವಾರ ಮರಳುವುದಾಗಿ ಪತಿಗೆ ತಿಳಿಸಿದ್ದರು. ಆದರೆ ಡಿ.03ರಂದು ಬೆಳಿಗ್ಗೆ ಪತಿ ಕೆಲಸಕ್ಕೆ ತೆರಳಿದ ಬಳಿಕ ಮನೆಯಲ್ಲಿ ಯಾರಿಗೂ ತಿಳಿಯದಂತೆ ಹೊರಗೆ ಹೋಗಿದ್ದು, ಸಂಜೆವರೆಗೂ ಮರಳಿ ಬರಲಿಲ್ಲ.
ಪತ್ನಿ ತಾಯಿ ಮನೆಗೆ ಹೋಗಿರಬಹುದು ಎಂಬ ಭಾವನೆಯಿಂದ ಪತಿ ಸಂಬಂಧಿಕರಿಗೆ ವಿಚಾರಿಸಿದರೂ, ಅಲ್ಲಿ ಕವಿತಾ ಹೋಗಿಲ್ಲವೆಂದು ತಿಳಿದುಬಂದಿದೆ. ನೆರೆಹೊರೆಯವರು ಹಾಗೂ ಬಂಧುಮಿತ್ರರಲ್ಲಿ ಹುಡುಕಾಟ ನಡೆಸಿದರೂ ಪತ್ತೆಯಾಗದೆ ಇರುವುದರಿಂದ ಸುಪ್ರೀತ್ ಕುಮಾರ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ. 85/2025ರಂತೆ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
