35 ವರುಷಗಳಿಂದ ಜವುಳಿ ಉದ್ಯಮವನ್ನು ಯಶಸ್ವಿಯಾಗಿ ಮುನ್ನಡೆಸಿರುವ ಶ್ರೀಧರ್ ಪೈ ಬನ್ನೂರು ಮಾಲೀಕತ್ವದ ಉದ್ಯಮ…
ಪುತ್ತೂರು: ಬಡ ವರ್ಗದ ಜನತೆಯ ಅಚ್ಚು ಮೆಚ್ಚಿನ ಜವುಳಿ ಮಳಿಗೆಯಾಗಿ ಗುರುತಿಸಿಕೊಂಡಿರುವ, ಉದ್ಯಮಿ ಶ್ರೀಧರ್ ಪೈ ಬನ್ನೂರು ಇವರ ಮಾಲಿಕತ್ವದ
ಜವುಳಿ ಹಾಗೂ ಸಿದ್ಧ ಉಡುಪುಗಳ ಮಳಿಗೆ ಗಜಾನನ ಟೆಕ್ಸ್ ಟೈಲ್ ಮತ್ತೆ ಬೊಳುವಾರು ಆಂಜನೇಯ ನಗರದ ಜೆ.ಕೆ ಸಂಕೀರ್ಣದಲ್ಲಿ ಡಿ.8ರಂದು ಶುಭಾರಂಭಗೊಂಡಿತು.
ಬೊಳುವಾರು ಗೋಪಿ ಭಟ್ ಅಂಗಡಿ ಮಾಲೀಕ ವರದರಾಜ ಪ್ರಭು ಇವರು ದೀಪ ಪ್ರಜ್ವಲನೆ ನೆರವೇರಿಸೋ ಮೂಲಕ ನೂತನ ಮಳಿಗೆಯನ್ನು ಉದ್ಘಾಟಿಸಿ, ಮಳಿಗೆಯ ಶ್ರೆಯೋಭಿವೃದ್ಧಿಗೆ ಶುಭಹಾರೈಸಿ ಅಭಿನಂದಿಸಿದರು.

ಮಾರುತಿ ಗಾರ್ಮೆಂಟ್ಸ್ ಮಾಲೀಕ ರಾಮಚಂದ್ರ ಪ್ರಭು, ವಾಣಿ ಪ್ರಿಂಟರ್ಸ್ ಮಾಲೀಕ ನೀಲಂತ ಕುಮಾರ್, ದುರ್ಗಾ ಎಂಟರ್ಪ್ರೈಸಸ್ ಮಾಲೀಕ ಸುಂದರ ಶೆಟ್ಟಿ, ಭಾರತೀಯ ಜನತಾ ಪಾರ್ಟಿಯ ಮಾಜಿ ದಿಶಾ ನಾಮ ನಿರ್ದೇಶಿತರಾದ ರಾಮದಾಸ್ ಹಾರಾಡಿ, ರೋಯಲ್ ಕುಷನ್ ವರ್ಕ್ಸ್ ಮಾಲೀಕ ರಿಚಾರ್ಡ್ ಡಯಾಸ್, ನಿವೃತ್ತ ಸಾರಿಗೆ ಇಲಾಖೆ ಉದ್ಯೋಗಿ ಸುರೇಶ್ ಆನೆಮಜಲು, ರವಿ ಶರ್ಮಾ ಕುಕ್ಕರಬೆಟ್ಟು, ಗಣೇಶ್ ಬ್ಯಾಟರಿ ವರ್ಕ್ಸ್ ಮಾಲೀಕ ಮೋಹನ್, ನಮ್ಮ ಟಿ.ವಿಯ ಪ್ರವೀಣ್ ಕುಮಾರ್ ಬೊಳುವಾರು, ದಯಾನಂದ ಸೇಡಿಯಾಪು, ಲಕ್ಷ್ಮೀ ವುಡ್ ವರ್ಕ್ಸ್ ನ ಗಣೇಶ್ ನಾಯ್ಕ್ ಸೇಡಿಯಾಪು, ತುಕ್ರಪ್ಪ ಬೊಳುವಾರು, ಮತ್ತು ನವೀನ್ ಡಿಸೋಜ ಸಹಿತ ಹಲವಾರು ಅತಿಥಿಗಳು ಆಗಮಿಸಿ ಹಾರೈಸಿದರು.
ಶ್ರೀಧರ್ ಪೈ ದಂಪತಿ ಮತ್ತು ಮಕ್ಕಳಾದ ಗಜಾನನ ಪೈ ಹಾಗೂ ನವೀನ್ ಪೈ ಅತಿಥಿಗಳನ್ನು ಸ್ವಾಗತಿಸಿ, ವಂದಿಸಿದರು.