ಭಕ್ತರ ಸಹಕಾರದೊಂದಿಗೆ ಜಾತ್ರೆಗೆ ಸಕಲ ಸಿದ್ಧತೆ : ಉಮೇಶ್ ರಾವ್ ಕೊಂಡೆಪ್ಪಾಡಿ
ಸವಣೂರು : ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ಪ್ರತಿಷ್ಠಾ ದಿನ, ವಾರ್ಷಿಕ ಜಾತ್ರೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮವೂ ಭಕ್ತರ ಒಗ್ಗೂಡುವಿಕೆಯೊಂದಿಗೆ ವ್ಯವಸ್ಥಿತ ರೀತಿಯಲ್ಲಿ ನಡೆಸಲು ಆದ್ಯತೆ ನೀಡೋಣ ಎಂದು ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ಆಡಳಿತ ಮೊಕ್ತೇಸರ ಉಮೇಶ್ ರಾವ್ ಕೊಂಡೆಪ್ಪಾಡಿ ಹೇಳಿದರು.
ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದಲ್ಲಿ ಜನವರಿಯಲ್ಲಿ ನಡೆಯಲಿರುವ ಪ್ರತಿಷ್ಠಾ ದಿನ, ವಾರ್ಷಿಕ ಜಾತ್ರೆಯ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ರವಿವಾರ ನಡೆದ ಭಕ್ತವೃಂದದ ಸಭೆಯಲ್ಲಿ ಅವರು ಮಾತನಾಡಿದರು.ಜ.13 ರಂದು ಪ್ರತಿಷ್ಠಾ ದಿನ, ಜ.30 ರಂದು ನಡೆಯುವ ವಾರ್ಷಿಕ ಜಾತ್ರೆಗೆ ಅಗತ್ಯವಿರುವ ಎಲ್ಲ ಸಿದ್ಧತೆಗಳ ಬಗ್ಗೆ ಭಕ್ತರ ಸಲಹೆ ಪಡೆದರು.
ದೇವಾಲಯಕ್ಕೆ ಪ್ರತಿ ಮನೆಯಿಂದ ಆಗಮಿಸಬೇಕು. ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದಲೂ ಸಹಕಾರ ನೀಡಬೇಕು. ಭಕ್ತರ ಸಹಕಾರ ಪಡೆದು ಹಂತ ಹಂತವಾಗಿ ಮೂಲ ಸೌಕರ್ಯ ಒದಗಿಸಲು ನಾವೆಲ್ಲರೂ ಪ್ರಯತ್ನ ಮಾಡೋಣ ಎಂದರು.
ಸುರಕ್ಷೆಯ ದೃಷ್ಟಿಯಿಂದ ದೇವಾಲಯದ ಒಳಭಾಗಕ್ಕೆ ಸಿಸಿ ಕೆಮಾರದ ಕಣ್ಗಾವಲು ಇರಿಸಲಾಗಿದೆ. ಮೊಬೈಲ್ ಮೂಲಕವೇ ಚಲನವಲನಗಳನ್ನು ಗಮನಿಸಲು ಸಾಧ್ಯವಾಗಿದೆ ಜಾತ್ರೆಗೆ ಬರುವ ಭಕ್ತರ ಅನುಕೂಲತೆಗಾಗಿ ಪಾರ್ಕಿಂಗ್ ವ್ಯವಸ್ಥೆಯ ಬೇಡಿಕೆ ಇದ್ದು ಆ ಬಗ್ಗೆ ಸ್ಥಳ ಪರಿಶೀಲಿಸಿ ನಿರ್ಧರಿಸಲಾಗುವುವುದು ಎಂದವರು ಹೇಳಿದರು.

ದೇವಾಲಯದದಿಂದಲೇ ಅಕ್ಕಿ
ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ಬಲಿವಾಡು ಸಲ್ಲಿಸುವ ಭಕ್ತರಿಗೆ ಅಕ್ಕಿ ಸಮರ್ಪಣೆಗೆ ದೇವಾಲಯದಿಂದಲೇ ಅವಕಾಶ ಕಲ್ಪಿಸಲಾಗುತ್ತದೆ. ಇದಕ್ಕೆ ನಿಗದಿತ ದರವನ್ನು ವಿಧಿಸಲಾಗುತ್ತದೆ. ಭಕ್ತರು ಹಣ ಪಾವತಿಸಿ ಅಕ್ಕಿ ಸಮರ್ಪಿಸಬಹುದು. ಒಂದೇ ಬ್ರಾಂಡ್ ನ ಅಕ್ಕಿ ಸಂಗ್ರಹಣೆಯ ದೃಷ್ಟಿಯಿಂದ ಈ ವ್ಯವಸ್ಥೆ ಮಾಡಲಾಗಿದ್ದು ಕ್ಷೇತ್ರದ ಪ್ರತಿ ಮನೆಯವರು ಇದಕ್ಕೆ ಸಹಕಾರ ನೀಡಬೇಕು ಎಂದು ಆಡಳಿತ ಮೊಕ್ತೇಸರ ಉಮೇಶ್ ರಾವ್ ಕೊಂಡೆಪ್ಪಾಯ ಮನವಿ ಮಾಡಿದರು.
ಮೂಲಸೌಕರ್ಯ ಒದಗಣನೆ
ಆಯ್ದ ಭಾಗಕ್ಕೆ ಇಂಟರ್ ಲಾಕ್ ಅಳವಡಿಕೆ, ಚಯರ್ ಖರೀದಿ, ದೇವಾಲಯದ ಗೋಡೆಗಳಿಗೆ ಬಣ್ಣ ಬಳಿಯಲು ಸಭೆಯಲ್ಲಿ ನಿರ್ಧರಿಸಲಾಯಿತು. ಇದೇ ಸಂದರ್ಭಗಳಲ್ಲಿ ಕ್ಷೇತ್ರದಲ್ಲಿ ನಡೆಯುವ ಸೇವೆಗಳ ದರ ಪರಿಷ್ಕರಣೆಯ ಅಭಿಪ್ರಾಯ ಸಂಗ್ರಹಿಸಿ ಅನುಷ್ಠಾನಿಸಲಾಯಿತು. ಸೇವಾದರ, ದೇಣಿಗೆ ಹಣ ಸಂಗ್ರಹಣೆಗೆ ಡಿಜಿಟಲ್ ಆಧಾರಿತ ವ್ಯವಸ್ಥೆ ಬಳಕೆಯ ಬಗ್ಗೆಯು ಸಭೆಯಿಂದ ಅಭಿಪ್ರಾಯ ವ್ಯಕ್ತವಾಯಿತು.
ಸಭೆಯಲ್ಲಿ ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ಮಾಜಿ ಆಡಳಿತ ಮೊಕ್ತೇಸರ ಬಾಲಚಂದ್ರ ರಾವ್ ಕೊಂಡೆಪ್ಪಾಡಿ, ಜಾತ್ರಾ ಸಮಿತಿ ಅಧ್ಯಕ್ಷ ದಯಾನಂದ ಗೌಡ ಜಾಲು, ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ, ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ಮೊಕ್ತೇಸರಾದ ಕುಂಬ್ರ ದಯಾಕರ ಆಳ್ವ,ಡಾ.ನರಸಿಂಹ ಶರ್ಮ ಕಾನಾವು, ನರಸಿಂಹ ತೇಜಸ್ವಿ ಕಾನಾವು, ವಸಂತ ಬೈಪಡಿತ್ತಾಯ, ಸುಜಾತ ವಿ ರಾಜ್ ಕಜೆ, ಅರ್ಚಕ ಸುರೇಶ್ ಉಪಾಧ್ಯಾಯ, ರಾಮಚಂದ್ರ ಕೋಡಿಬೈಲು, ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ನಾರಾಯಣ ಕೊಂಡೆಪ್ಪಾಡಿ, ಹೊನ್ನಪ್ಪ ಗೌಡ ಚಾಮುಂಡಿಮೂಲೆ, ಜ್ಯೋತಿ ಯುವಕ ಮಂಡಲದ ಅಧ್ಯಕ್ಷ ದಿನೇಶ್ ಕಂರ್ಬುತ್ತೋಡಿ, ರಘುನಾಥ ಶೆಟ್ಟಿ ಬರಮೇಲು, ಸಂತೋಷ್ ನೀರ್ಕಜೆ ಮೊದಲಾದವರು ಉಪಸ್ಥಿತರಿದ್ದರು. ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ಮೊಕ್ತೇಸರ ಕುಶಾಲಪ್ಪ ಗೌಡ ಪೆರುವಾಜೆ ವಂದಿಸಿದರು.