ಪುತ್ತೂರು: ರಾಜ್ಯ ಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲದ ವತಿಯಿಂದ ದ.ಕ ಜಿಲ್ಲಾ ಪಂಚಾಯತ್ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಸುಮಾರು 215 ಮಕ್ಕಳಿಗೆ ಸವಣೂರು ಯುವಕ ಮಂಡಲ ಸದಸ್ಯ, ರಾಜ್ಯ ಬಿಜೆಪಿ ಮಾಧ್ಯಮ ಪ್ರಮುಖ ಪ್ರಶಾಂತ್ ಕೆಡೆಂಜಿಯವರು ಕೊಡಮಾಡಿದ ಚಳಿಗೆ ಹಾಕುವ ಸ್ವೆಟರ್ ವಿತರಣೆ ನಡೆಯಿತು.
ಈ ಸಂದರ್ಭದಲ್ಲಿ ಸವಣೂರು ಗ್ರಾಮ ಪಂಚಾಯತ್ ಸದಸ್ಯರಾದ ತೀರ್ಥರಾಮ ಕೆಡೆಂಜಿ, ಸವಣೂರು ಸಿ. ಎ. ಬ್ಯಾಂಕ್ ಅಧ್ಯಕ್ಷರಾದ ತಾರಾನಾಥ ಕಾಯರ್ಗ, ಉಪಾಧ್ಯಕ್ಷರು ಸವಣೂರು ಯುವಕ ಮಂಡಲದ ಅಧ್ಯಕ್ಷರಾದ ಚೇತನ್ ಕುಮಾರ್ ಕೋಡಿಬೈಲು, ಡಾಕ್ಟರ್ ನವೀನ್, ಇಂಜಿನಿಯರ್ ಪ್ರಸಾದ್, ಎಸ್. ಡಿ. ಎಂ. ಸಿ ಅಧ್ಯಕ್ಷ ಆಶ್ರಫ್ ಜನತಾ, ಹಿರಿಯರಾದ ಶಿವರಾಮ ಗೌಡ, ಮೆದು ಜನತಾ ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಸತೀಶ್ ಬಲ್ಯಾಯ, ಯುವಕ ಮಂಡಲದ ಮಾಜಿ ಕಾರ್ಯದರ್ಶಿ ಕೀರ್ತನ್ ಕೋಡಿಬೈಲು, ಶಿಕ್ಷಕ ಗಣೇಶ್, ಶಿಕ್ಷಕಿಯರಾದ ತುಳಸಿ ನಾಗವೇಣಿ, ಪ್ರಮೀಳಾ ನಳಿನಾಕ್ಷಿ, ಅಶ್ವಿನಿ ಮಧುಶ್ರೀ ಉಪಸ್ಥಿತರಿದ್ದು, ಶಾಲಾ ಮುಖ್ಯಗುರು ನಿಂಗರಾಜು ಕೆ. ಪಿ. ಸ್ವಾಗತಿಸಿ, ಶಿಕ್ಷಕ ಓಬಳೇಸ್ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಶಶಿಕಲಾ ವಂದಿಸಿದರು.
