ಪುತ್ತೂರು: ಅಕ್ಷಯ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ಹಾಗೂ ಅಕ್ಷಯ ಕೆರಿಯರ್ ಅಕಾಡೆಮಿ ಮಂಗಳೂರು ಇವುಗಳ ಸಹಯೋಗದಲ್ಲಿ ಪುತ್ತೂರು ಹಾಗೂ ಆಸುಪಾಸಿನಲ್ಲಿ ಪ್ರಪ್ರಥಮ ಬಾರಿಗೆ ಏವಿಯೇಷನ್ ಕೋರ್ಸ್ ಪರಿಚಯಿಸಿದ್ದು ಡಿ.13ರಂದು ಸಂಪ್ಯ ಅಕ್ಷಯ ಕಾಲೇಜಿನ ಅಕ್ಷಯ ಆಡಿಟೋರಿಯಂನಲ್ಲಿ ನಡೆಯಲಿದೆ.
ಏರ್ ಪೋರ್ಟ್ ಹಾಗೂ ವಿಮಾನಯಾನದ ವಿವಿಧ ಸಂಸ್ಥೆಯಲ್ಲಿ ಕನಸಿನ ಉದ್ಯೋಗ ಪಡೆಯಲು ಉತ್ತಮ ಅವಕಾಶವನ್ನು ಅಕ್ಷಯ ಕೆರಿಯರ್ ಅಕಾಡೆಮಿ ಕಾರ್ಯಾಗಾರವನ್ನು ಆಯೋಜಿಸಿದೆ.
ಪಿಯುಸಿ, ಐಟಿಐ, ಮತ್ತು ಡಿಪ್ಲೊಮಾ, ಪದವಿ ವಿದ್ಯಾರ್ಥಿಗಳು ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಸುಸಂದರ್ಭವಾಗಿದೆ. ಭಾರತ ಮತ್ತು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಯೋಗಾವಕಾಶಗಳು(ಬಹು ವಿಮಾನ ನಿಲ್ದಾಣಗಳು ಮತ್ತು ವಿಮಾನಯಾನ ಸಂಸ್ಥೆಗಳು), ಲೈವ್ ಗ್ರೂಮಿಂಗ್ ಮತ್ತು ಸಂವಹನ ಸಲಹೆಗಳು, ವಿಮಾನಯಾನ ಸಂಸ್ಥೆಗಳು ನಿಜವಾಗಿಯೂ ಏನು ನಿರೀಕ್ಷಿಸುತ್ತವೆ ಎಂದು ಉದ್ಯಮ ತಜ್ಞರಿಂದ ಸಂದರ್ಶನ ಮತ್ತು ಗುಂಪು ಚರ್ಚೆ ಸಲಹೆಗಳು ಕಾರ್ಯಾಗಾರದಲ್ಲಿ ಹೊಂದಲಿದೆ.
ಕಾರ್ಯಾಗಾರವನ್ನು ಏರ್ ಇಂಡಿಯಾದಲ್ಲಿ ಫ್ಲೈಟ್ ಅಟೆಂಡೆಂಟ್ ಆಗಿ 21 ವರ್ಷಗಳ ಅನುಭವ (40 ಕ್ಕೂ ಹೆಚ್ಚು ದೇಶಗಳು) ಹೊಂದಿರುವ ದೀಪಶ್ರೀ, ಅಕ್ಷಯ ಕೆರಿಯರ್ ಅಕಾಡೆಮಿಯ ವಿದ್ಯಾರ್ಥಿ, ಪ್ರಸ್ತುತ ಆಕಾಶ ಏರ್ ಲೈನ್ ನಲ್ಲಿ ಕ್ಯಾಬಿನ್ ಕ್ರ್ಯೂಆಗಿರುವ ವೈಶಾಲಿರವರು ತಮ್ಮ ಯಶಸ್ಸಿನ ಕಥೆಗಳೊಂದಿಗೆ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.ಅಕ್ಷಯ ಕೆರಿಯರ್ ಅಕಾಡೆಮಿಯಲ್ಲಿ ಈಗಾಗಲೇ ಡಿಪ್ಲೋಮ ಇನ್ ಏವಿಯೇಷನ್ ಅಂಡ್ ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್(1 Year), ಸರ್ಟಿಫಿಕೇಷನ್ ಇನ್ ಏರ್ಪೋರ್ಟ್ ಮ್ಯಾನೇಜ್ಮೆಂಟ್ ಅಂಡ್ ಹಾಸ್ಪಿಟಾಲಿಟಿ(6 Month), ಸರ್ಟಿಫಿಕೇಷನ್ ಇನ್ ಕ್ಯಾಬಿನ್ ಅಂಡ್ ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್(6 Month)ಕೋರ್ಸ್ ಗಳು ಲಭ್ಯವಿದ್ದು, ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಳ್ಳಬಹುದು.
ಪುತ್ತೂರಿನ ಸುಮಾರು 42 ವಿದ್ಯಾರ್ಥಿಗಳಿಗೆ ವಿವಿಧ ಏರ್ ಪೋರ್ಟ್ ಹಾಗೂ ಏರ್ ಲೈನ್ಸ್ ಗಳಲ್ಲಿ ಉದ್ಯೋಗ ದೊರಕಿಸಿಕೊಟ್ಟ ಹೆಮ್ಮೆಯ ಸಂಸ್ಥೆ ಅಕ್ಷಯ ಕೆರಿಯರ್ ಅಕಾಡೆಮಿ ಆಗಿದ್ದು ಹೆಚ್ಚಿನ ಮಾಹಿತಿಗಾಗಿ+918105727611 +917338676611+918088381678 ಸಂಪರ್ಕಿಸಬೇಕಾಗಿ ಸಂಸ್ಥೆಯು ತಿಳಿಸಿದೆ.