ಪುತ್ತೂರು: ಸ್ನೇಹ ಸಂಗಮ ಆಟೋ ಚಾಲಕ ಮಾಲಕರ ಸಂಘ ಪುತ್ತೂರು ಇದರ ಗೌರವಾಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ನೇತೃತ್ವದಲ್ಲಿ ಅನಾರೋಗ್ಯದಿಂದಿರುವ ಸಂಘದ ಹಿರಿಯ ಸದಸ್ಯ ಅಣ್ಣು ಕಬಕ ಅವರಿಗೆ ಸಂಘದ ಸದಸ್ಯರಿಂದ ಹಣ ಸಂಗ್ರಹಿಸಿ ಸಹಾಯಧನ ನೀಡಲಾಯಿತು.
ಪದಾಧಿಕಾರಿಗಳ ತಂಡವು ಅಣ್ಣು ಅವರ ಮನೆಗೆ ತೆರಳಿ, ಆರೋಗ್ಯ ವಿಚಾರಿಸಿ ಬಳಿಕ ಸಹಾಯಧನ ವಿತರಿಸಿದರು. ಸ್ನೇಹ ಸಂಗಮದ ಅಧ್ಯಕ್ಷ ತಾರಾನಾಥ ಗೌಡ ಬನ್ನೂರು, ಪ್ರಧಾನ ಕಾರ್ಯದರ್ಶಿ ಹರೀಶ್ ಕುಮಾರ್ ತೆಂಕಿಲ, ಕೋಶಾಧಿಕಾರಿ ಸಿಲ್ವೇಸ್ಟರ್ ಡಿಸೋಜ ಮೊಟ್ಟೆತಡ್ಕ, ನೂತನ ಉಪಾಧ್ಯಕ್ಷ ಮಹಮ್ಮದ್ ಸಿದ್ದಿಕ್ ಬನ್ನೂರು, ಮಾಜಿ ಅಧ್ಯಕ್ಷ ರೋಹಿತ್ ಕುಮಾರ್ ಬನ್ನೂರು ಉಪಸ್ಥಿತರಿದ್ದರು.
