ಪುತ್ತೂರು: ದ.ಕ.ಜಿ.ಪಂ.ಸ.ಹಿ.ಪ್ರಾ.ಶಾಲೆ ಸೂರಂಬೈಲು ಪಾಣಾಜೆ ಇಲ್ಲಿಗೆ ಲಕ್ಷ್ಮಿ ನಾರಾಯಣ ರೈ ಕೆದಂಬಾಡಿ ಇವರ ಸಹಕಾರದೊಂದಿಗೆ ರಾಮ್ ಪ್ರಸಾದ್ ರೈ ಪಟ್ಟೆ ಬಾಳೆಮೂಲೆ ಇವರು ನೀಡಿದ ಶಾಲಾ ಬ್ಯಾಗ್ ವಿತರಣೆ, ವಿದ್ಯುತ್ ಇನ್ವರ್ಟರ್ ಮತ್ತು ಸ್ಕಂದ ಶ್ರೀ ಯುವಕ ಮಂಡಲ ತೂಂಬಡ್ಕ ಇವರು ಕೊಡುಗೆ ನೀಡಿದ ಬಾವಿ ನೀರಿನ ಪಂಪ್ ಸೆಟ್ ಉದ್ಘಾಟನಾ ಕಾರ್ಯಕ್ರಮ ಡಿ.14 ರಂದು ಜರುಗಿತು.

ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಶ್ರೀನಿವಾಸ ಪ್ರಸಾದ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದಾನಿ ಬೆಂಗಳೂರಿನ ಸುರಕ್ಷಾ ವೆಲ್ಫೇರ್ ಟ್ರಸ್ಟ್ ನ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀರಾಮ್ ಪ್ರಸಾದ್ ರೈ ಪಟ್ಟೆ ಬಾಳೆಮೂಲೆ ವಿದ್ಯುತ್ ಇನ್ವರ್ಟರ್ ಅನ್ನು ಉದ್ಘಾಟಿಸಿ, ಮಕ್ಕಳಿಗೆ ಶಾಲಾ ಬ್ಯಾಗ್ ವಿತರಿಸಿ ಮಕ್ಕಳಿಗೆ ತಮ್ಮ ನಡೆ-ನುಡಿ ಉತ್ತಮಗೊಳಿಸಿಕೊಳ್ಳಲು ಶಿಕ್ಷಕರ ಮತ್ತು ಪೋಷಕರ ಮಾತು ಪಾಲಿಸಿ ಎಂದು ಕಿವಿಮಾತು ಹೇಳಿದರು.
ಕೊಡುಗೆಗೆ ಸಹಕರಿಸಿದ ಲಕ್ಷ್ಮೀ ನಾರಾಯಣ ರೈ ಕೆದಂಬಾಡಿ ಹಾಗೂ ಪಂಪ್ ಸೆಟ್ ನೀಡಿದ ಸ್ಕಂದ ಶ್ರೀ ಯುವಕ ಮಂಡಲ ಪರವಾಗಿ ಅಧ್ಯಕ್ಷ ಮೋಹನ ನಾಯ್ಕ ತೂಂಬಡ್ಕ ಮಕ್ಕಳಿಗೆ ಶುಭ ಹಾರೈಸಿದರು. ಮುಖ್ಯ ಅತಿಥಿ ನಿವೃತ್ತ ಸೈನಿಕ ಪುಷ್ಪರಾಜ ಶೆಟ್ಟಿ ಮಕ್ಕಳಿಗೆ ಪ್ರೇರಣದಾಯಕ ಮಾತುಗಳನ್ನಾಡಿದರು. ಉಪಸ್ಥಿತರಿದ್ದ ಪುತ್ತೂರು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ನಾಗೇಶ ಪಾಟಾಳಿ ಕೊಡುಗೆಗೆ ಸಂತಸ ವ್ಯಕ್ತಪಡಿಸಿದರು. ಅಂಗನವಾಡಿ ಕಾರ್ಯಕರ್ತೆ ನೀಲು, ಚೇತನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀಧರ ನಾಯ್ಕ, ಹಿರಿಯರಾದ ಸದಾಶಿವ ರೈ ಸೂರಂಬೈಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಓಂ ಫ್ರೆಂಡ್ಸ್ ಭರಣ್ಯ ಇದರ ಅಧ್ಯಕ್ಷ ವಸಂತ ಕುರೂಪ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅತಿಥಿ ಶಿಕ್ಷಕಿ ವಿದ್ಯಾಲಕ್ಷ್ಮಿ ಸ್ವಾಗತಿಸಿದರು. ಮುಖ್ಯಗುರು ಊರ್ಮಿಳಾ.ಕೆ ವಂದಿಸಿದರು. ಗೌರವ ಶಿಕ್ಷಕಿ ಸುಪ್ರೀತ.ಕೆ ಕಾರ್ಯಕ್ರಮ ನಿರೂಪಿಸಿದರು.
ಸಹ ಶಿಕ್ಷಕಿ ಪವಿತ್ರ ಎಂ.ಆರ್ ಗೌರವ ಶಿಕ್ಷಕಿ ಯಶಸ್ವಿನಿ, ಹಿರಿಯ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಪಾಣಾಜೆ ಸಹಕರಿಸಿದರು. ಸ್ಕಂದ ಶ್ರೀ ಯುವಕ ಮಂಡಲದ ಸದಸ್ಯರು, ತುಳುನಾಡ್ ಫ್ರೆಂಡ್ಸ್ ತೂಂಬಡ್ಕ ಇದರ ಸದಸ್ಯರು, ಓಂ ಫ್ರೆಂಡ್ಸ್ ಭರಣ್ಯ ಇದರ ಸದಸ್ಯರು ಮತ್ತು ಶಾಲಾ ಎಸ್ ಡಿ.ಯಂ ಸಿ ಸದಸ್ಯರು, ಪೋಷಕರು ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು ಉಪಸ್ಥಿತರಿದ್ದರು. ಮಕ್ಕಳ ಶಿಕ್ಷಣದ ಸಹಕಾರಕ್ಕೆ ಕೊಡುಗೆ ನೀಡಿದ ಮಹನೀಯರ ಕಾರ್ಯವನ್ನು ಶಿಕ್ಷಕರು, ಪೋಷಕರು ಹಾಗೂ ಗ್ರಾಮಸ್ಥರು ಶ್ಲಾಘಿಸಿದರು.