ಬಡಗನ್ನೂರು : ದ. ಕ. ಜಿ. ಪಂ. ಹಿ. ಪ್ರಾ. ಶಾಲೆ ಪಡುಮಲೆ ಇದರ ವಾರ್ಷಿಕೋತ್ಸವ, ಚಿಣ್ಣರ ಸಂಭ್ರಮ ಕಾರ್ಯಕ್ರಮವು ಡಿ.13 ರಂದು ಶಾಲಾ ವೖೆಶಾಲಿ ಸಭಾಂಗಣದಲ್ಲಿ ನಡೆಯಿತು.
ಶಾಲಾ ಎಸ್. ಡಿ. ಎಂ. ಸಿ. ಅಧ್ಯಕ್ಷೆ ವೇದಾವತಿ ವಾರ್ಷಿಕೋತ್ಸವ ಧ್ವಜಾರೋಹಣ ನೆರವೇರಿಸಿ ಶುಭ ಹಾರೖೆಸಿದರು.
ಬಹುಮಾನ ವಿತರಣಾ ಸಮಾರಂಭ
ವಾರ್ಷಿಕೋತ್ಸವ ಅಂಗವಾಗಿ ಶಾಲಾ ಮಕ್ಕಳಿಗೆ, ಹಿರಿಯ ವಿದ್ಯಾರ್ಥಿಗಳಿಗೆ ಶಿಕ್ಷಕ ವೃಂದದವರಿಗೆ ಎಸ್. ಡಿ. ಯಂ. ಸಿ ಸದಸ್ಯರಿಗೆ ಕ್ರೀಡಾಕೂಟ ಅಯೋಜಿಸಲಾಗಿದ್ದು ಇದರ ಬಹುಮಾನ ವಿತರಣಾ ಸಮಾರಂಭ ನಡೆಯಿತು.
ಮುಖ್ಯ ಅತಿಯಾಗಿ ನೆಟ್ಟಣಿಗೆ ಮೂಡ್ನೂರು ಕ್ಷೇತ್ರದ ಜಿ. ಪಂ ಮಾಜಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ ಬಹುಮಾನ ವಿತರಿಸಿ ಮಾತನಾಡಿ,ಮಕ್ಕಳ ವರ್ಷದ ಸಾಧನೆ ಪ್ರೋತ್ಸಾಹಿಸುವ ವೇದಿಕೆ ಮಕ್ಕಳ ಶಿಕ್ಷಣಕ್ಕೆ ಶಿಕ್ಷಕರೊಂದಿಗೆ ಪೋಷಕರು ಪಾತ್ರ ಮಹತ್ವದ್ದಾಗಿದೆ. ಮುಖ್ಯ ಶಿಕ್ಷಕರಾಗಿದ್ದು ಶಾಲೆ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿ ಅನಾರೋಗ್ಯದಿಂದ ಅಗಲಿದ ದೇವಿಪ್ರಸಾದ್ ಕೆ. ಸಿ ಅವರು ಹಾಕಿ ಕೊಟ್ಟ ಹೆಜ್ಜೆಯಲ್ಲಿ ನಡೆಯೋಣ ಎಂದರು.
ಶಾಲೆಯ ಬಗ್ಗೆ ಅಭಿಮಾನ ಮತ್ತು ಮಕ್ಕಳ ಪ್ರೀತಿಯಿಂದ ಸ್ವಂತ ಹಣದಿಂದ ಶಾಲೆಗೆ ಸುಣ್ಣ ಬಣ್ಣ ಹಚ್ಚಿ, ಸುಂದರಗೊಳಿಸಿ, ಶಾಲಾ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಮತ್ತು ಅಡುಗೆ ಸಿಬ್ಬಂದಿರವರಿಗೆ ಸಮವಸ್ತ್ರ ನೀಡಿರುವ ಪ್ರಭಾರ ಮುಖ್ಯ ಶಿಕ್ಷಕಿ ಪರಮೇಶ್ವರಿ ರವರ ಉದಾರತೆಯ ಕುರಿತು ಮಾತನಾಡಿ, ಇತರ ಶಿಕ್ಷಕರರಿಗೆ ಮಾದರಿಯಾಗಲಿ ಎಂದರು.

ಶಾಲಾ ನಿವೃತ್ತ ಮುಖ್ಯ ಗುರು ನಾರಾಯಣ ಪಾಟಾಳಿ ಪಟ್ಟೆ ಮಾತನಾಡಿ, ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಸಂತೋಷವಾಗುತ್ತಿದೆ. ಪ್ರಾರಂಭದಲ್ಲಿ ಒಂದು ಕೊಠಡಿಯಲ್ಲಿ ಎಲ್ಲ ತರಗತಿಯನ್ನು ನಡೆಸಲಾಗುತ್ತಿತ್ತು. ಸರಕಾರಿ ಶಾಲೆಯಲ್ಲಿ ಬೇಕಾದಷ್ಟು ಸೌಲಭ್ಯಗಳು ಸಿಗುತ್ತಿದೆ ಪೋಷಕರು ಇದನ್ನು ತಿಳಿದುಕೊಂಡು ಮಕ್ಕಳನ್ನು ಹತ್ತಿರದ ಸರಕಾರಿ ಶಾಲೆಗೆ ಸೇರಿಸುವಂತೆ ಹೇಳಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ವೇದಾವತಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಶುಭ ಹಾರೖೆಸಿದರು.ಭಂಡಾರತ್ತಡ್ಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಉಪಾಧ್ಯಕ್ಷ ವಿಜಯ ಸೋಣಂಗೇರಿ, ಪಡುಮಲೆ ಅಂಗನವಾಡಿ ಕಾರ್ಯಕರ್ತೆ ವೀಣಾ, ಎಸ್. ಡಿ. ಎಂ. ಸಿ.ಉಪಾಧ್ಯಕ್ಷೆ ಸುಮಲತಾ ಪಿ.ಎ.ಮಾತನಾಡಿ ಶುಭ ಹಾರೖೆಸಿದರು.
ವೇದಿಕೆಯಲ್ಲಿ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಪರಮೇಶ್ವರಿ, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶುಭಶಂಕರ, ಹಿರಿಯ ವಿದ್ಯಾರ್ಥಿಗಳಾದ ರವಿರಾಜ ಗೌಡ ಸಾರಕೂಟೇಲು , ವಿನಯರಾಜ್ ಎಸ್. ಸಾರಕೂಟೇಲು, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಹೇಮಲತಾ ಪಿ. ಎ ಉಪಸ್ಥಿತರಿದ್ದರು. ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಪರಮೇಶ್ವರಿ ಎ ಸ್ವಾಗತಿಸಿ, ಕಲಿಕೆ ಬಹುಮಾನ ಪಟ್ಟಿ ವಾಚಿಸಿದರು. ಜಿಪಿಟಿ ಶಿಕ್ಷಕಿ ಅರುಣಾ ಕುಮಾರಿ ಪ್ರಾಸ್ತಾವಿಕ ಮಾತನಾಡಿದರು. ಗೌರವ ಶಿಕ್ಷಕಿ ವಿಲಾಸಿನಿ ವಂದಿಸಿದರು. ಅತಿಥಿ ಶಿಕ್ಷಕಿ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು. GPT ಶಿಕ್ಷಕಿ ಅರುಣಕುಮಾರಿ ವಿ, ಅತಿಥಿ ಶಿಕ್ಷಕಿ ಸೌಮ್ಯ ಕೆ, ಗೌರವ ಶಿಕ್ಷಕಿ ವಿಲಾಸಿನಿ ಎ ಆಟೋಟ ಸ್ಪರ್ಧೆಗಳ ಬಹುಮಾನ ಪಟ್ಟಿ ವಾಚಿಸಿದರು.
ಸಭಾ ಕಾರ್ಯಕ್ರಮ
ಸಭಾ ಕಾರ್ಯಕ್ರಮವನ್ನು ಮಂಗಳೂರು (HR) MRPLONGC ಗ್ರೂಪ್ ಜನರಲ್ ಮ್ಯಾನೇಜರ್ ಕೇಶವ ಪಾಟಾಳಿ ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದ ಸರಕಾರಿ ಶಾಲಾ ವಾರ್ಷಿಕೋತ್ಸವವನ್ನು ಊರಿನವರ ಸಹಕಾರದಲ್ಲಿ ಮತ್ತು ಶಿಕ್ಷಕರ ಮುತುವರ್ಜಿಯಲ್ಲಿ ವಿಜೃಂಭಣೆಯಿಂದ ನಡೆಯುತ್ತಿರುವುದು ಸಂತೋಷ ತಂದಿದೆ.ಇದರ ಉದ್ಘಾಟನೆ ನನಗೆ ಸಿಕ್ಕಿದು ನನ್ನ ಸೌಭಾಗ್ಯ. ಕಳೆದ 5 ವರ್ಷಗಳಿಂದ ಸುಮಾರು 300ಕ್ಕೂ ಹೆಚ್ಚು ಸರಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಇದರ ಜೊತೆ ಶಿಕ್ಷಣ ಆರೋಗ್ಯ ಸಾಂಸ್ಕೃತಿಕ, ಪ್ರಕೃತಿ ಸೌಂದರ್ಯ ಇತ್ಯಾದಿಗಳಿಗೆ ನೀಡಲು ಅವಕಾಶ ಇದೆ. ಗ್ರಾಮೀಣ ಪ್ರದೇಶ ಈ ಶಾಲೆಯಲ್ಲಿ ಮತ್ತು ಮಕ್ಕಳ ಆರೋಗ್ಯ ದೃಷ್ಟಿಯಲ್ಲಿ ನಿರ್ಮಾಣ ಗೊಂಡಿರುವುದು ಸಂತೋಷ ತಂದಿದೆ ಸಂಸ್ಥೆಯು ತನ್ನ ಆದಾಯದ ಒಂದಷ್ಟು ಪಾಲನ್ನು ಸಮಾಜದ ಅಭಿವೃದ್ಧಿ ಹಂಚಿಕೆ ಮಾಡುತ್ತದೆ ಇದರ ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡುವ ಜವಾಬ್ದಾರಿ ತಮ್ಮಲ್ಲಿದೆ ಎಂದು ಹೇಳಿ ಶುಭ ಹಾರೖೆಸಿದರು.
ಪುತ್ತೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ಮಾತನಾಡಿ, ಶಾಲಾ ವಾರ್ಷಿಕೋತ್ಸವ ಮಕ್ಕಳಲ್ಲಿರುವ ಬಹುಮುಖ ಪ್ರತಿಭೆ ಅನಾವರಣಗೊಳಿಸುವ ವೇದಿಕೆ ಇಂದಿನ ಮಕ್ಕಳೇ ಇಂದಿನ ಜನಾಂಗ. ಮಕ್ಕಳನ್ನು ಒಳೆಯ ರೀತಿ ಪೋಷಕರಿಗೆ ಅರ್ಪಣೆ ಮಾಡುವ ಕೆಲಸ ಸಂಸ್ಥೆಯಲ್ಲಿ ಆಗುತ್ತದೆ. ಸಂಸ್ಥೆಯ ಉಚ್ಚಾಯ ಸ್ಥಿತಿಗೆ ದೇವಿಪ್ರಸಾದ್ ಕೆ. ಸಿ ರವರ ಕೊಡುಗೆ ಅಪಾರ. ಇಂದು ಅವರನ್ನು ಸ್ಮರಣಿಸಲೇ ಬೇಕು. ಅವರ ನೆನಪು ಶಾಶ್ವತ. ಅವರು ಹಾಕಿಕೊಟ್ಟ ಅದರ್ಶ ಮತ್ತು ಮಾರ್ಗದರ್ಶನದಲ್ಲಿ ಮುಂದುವರಿಯೋಣ ಎಂದ ಅವರು ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಸವಾಲು ನಮ್ಮೆಲ್ಲರಲ್ಲಿದೆ ಗುಣಮಟ್ಟ ಮತ್ತು ಮೌಲ್ಯಾಯುತ ಶಿಕ್ಷಣ ಸರಕಾರಿ ಶಾಲೆಗಳಲ್ಲಿ ಸಿಗುತ್ತದೆ ಜೊತೆಗೆ ವಿವಿಧ ಸೌಲಭ್ಯಗಳು ದೊರೆಯುತ್ತದೆ ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳನ್ನು ಹತ್ತಿರದ ಸರಕಾರಿ ಶಾಲೆಗೆ ಸೇರಿಸುವ ಮೂಲಕ ನಮ್ಮೂರ ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸೋಣ ಎಂದು ಹೇಳಿ ಶುಭ ಹಾರೖೆಸಿ, ಸುಮಾರು 15ಲಕ್ಷ ರೂಪಾಯಿ ಸಿ ಎಸ್ ಆರ್ ಅನುದಾನದಲ್ಲಿ ಸುವ್ಯವಸ್ಥಿತವಾದ ಶೌಚಾಲಯ ನಿರ್ಮಿಸಿ ಕೊಟ್ಟ ಮಂಗಳೂರು ಎಂ ಆರ್. ಪಿ. ಎಲ್ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು.
ಕುಂಬ್ರ ಕ್ಲಸ್ಟರ್ ನಿಕಟಪೂರ್ವ ಸಿ. ಆರ್. ಪಿ ಶಶಿಕಲಾ ಬಿ ಮಾತನಾಡಿ, ಶಾಲಾ ವಾರ್ಷಿಕೋತ್ಸವ ನಮ್ಮೆಲ್ಲರ ಹಬ್ಬ.ಮಕ್ಕಳ ಪ್ರತಿಭೆ ಅನಾವರಣಗೊಳಿಸುವ ವೇದಿಕೆ ಎಂದು ಹೇಳಿ ಶುಭ ಹಾರೖೆಸಿದರು. ಸಭಾ ಕಾರ್ಯಕ್ರಮವು ಬಡಗನ್ನೂರು ಗ್ರಾ.ಪಂ. ಅಧ್ಯಕ್ಷೆ ಪುಷ್ಪಲತಾ ದೇವಕಜೆ ಅಧ್ಯಕ್ಷತೆಯಲ್ಲಿ ನಡೆಯಿತು.
ಬಡಗನ್ನೂರು ಗ್ರಾ. ಪಂ ಸದಸ್ಯೆ ಕಲಾವತಿ ಎಸ್. ಗೌಡ ಪಟ್ಲಡ್ಕ ಮಾತನಾಡಿ, ಕನಸಿನ ಕೂಸು ವಿದ್ಯಾನಿಧಿ ಮೂಲಕ ಶಾಲಾ ಮಕ್ಕಳ ಸಂಖ್ಯೆ ಹೆಚ್ಚಾಗಲು ದೇವಿಪ್ರಸಾದ್ ಕಾರಣಕರ್ತರು ಮಕ್ಕಳನ್ನು ತುಂಬಾ ಪ್ರೀತಿಯಿಂದ ಕಾಣುತ್ತಿದ್ದರು. ಸಂಸ್ಥೆಯಲ್ಲಿ ಶಿಕ್ಷಣ ಮತ್ತು ಶಿಕ್ಷಕರ ಮತ್ತು ಮಕ್ಕಳ ಭಾಂದವ್ಯ ಉತ್ತಮ ಎಂದು ಹೇಳಿ ಶಭ ಹಾರೖೆಸಿದರು.
ವೇದಿಕೆಯಲ್ಲಿ ಬಡಗನ್ನೂರು ಗ್ರಾ. ಪಂ ಸದಸ್ಯರಾದ ರವಿರಾಜ್ ರೈ ಸಜಂಕಾಡಿ, ಜ್ಯೋತಿ ಅಂಬಟೆಮೂಲೆ, ಪ್ರಗತಿಪರ ಕೃಷಿಕ ಹೊನ್ನಪ್ಪ ಗೌಡ ಸಾರಕೂಟೇಲು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ವೇದಾವತಿ, ಉಪಾಧ್ಯಕ್ಷೆ ಸುಮಲತಾ ಪಿ.ಎ. ಉಪಸ್ಥಿತರಿದ್ದರು.
ಶಾಲಾ ಗೌರವಾಧ್ಯಕ್ಷ ರವಿರಾಜ ರೖೆ ಸಜಂಕಾಡಿ ಸ್ವಾಗತಿಸಿದರು. ಜಿಪಿಟಿ ಶಿಕ್ಷಕಿ ಅರುಣಾಕುಮಾರಿ ವಂದಿಸಿದರು, ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಪರಮೇಶ್ವರಿ ಎ ವರದಿ ಮಂಡಿಸಿದರು.ಕೆಯ್ಯೂರು ಕೆ. ಪಿ. ಎಸ್ ಶಾಲಾ ಮುಖ್ಯ ಶಿಕ್ಷಕ ಬಾಬು ಹಾಗೂ ಶಾಲಾ ಅತಿಥಿ ಶಿಕ್ಷಕಿ ಸೌಮ್ಯ ಕೆ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ನಡೆಯಿತು.ಸಾಂಸ್ಕೃತಿಕ ಕಾರ್ಯಕ್ರಮ ಬಡಗನ್ನೂರು ಗ್ರಾ. ಪಂ ಸದಸ್ಯೆ ಕಲಾವತಿ ಎಸ್ ಗೌಡ ಉದ್ಘಾಟನೆ ನೆರವೇರಿಸಿದರು. ಕಾರ್ಯಕ್ರಮವನ್ನು ಅತಿಥಿ ಶಿಕ್ಷಕಿ ಸೌಮ್ಯ ಕೆ ನಿರೂಪಿಸಿದರು. ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸನ್ಮಾನ ಕಾರ್ಯಕ್ರಮ
ಸುಮಾರು 15 ಲಕ್ಷ ಸಿ. ಎಸ್. ಆರ್ .ಆನುದಾನದಲ್ಲಿ ಶೌಚಾಲಯ ಕೊಠಡಿ ನಿರ್ಮಾಣ ಮಾಡಿಕೊಟ್ಟ ಎಂ. ಆರ್. ಪಿ. ಎಲ್ ಸಂಸ್ಥೆಯ ಪ್ರತಿನಿಧಿ ಕೇಶವ ಪಾಟಾಳಿ,, ನೂತನ ಶೌಚಾಲಯ ಕೊಠಡಿ ನಿರ್ಮಾಣಕ್ಕೆ ಶ್ರಮಿಸಿದ ಕುಂಬ್ರ ಕ್ಲಸ್ಟರ್ ನಿಕಟಪೂರ್ವ ಸಿ. ಆರ್. ಪಿ ಶಶಿಕಲಾ ಬಿ ಹಾಗೂ 21 ವರ್ಷಗಳಿಂದ ಅಕ್ಷರದಾಸೋಹ ಸಿಬಂದಿಯಾಗಿ ಸೇವೆ ಸಲ್ಲಿಸುತ್ತಾ ಬರುತ್ತಿರುವ ಶಾರದ ಕಾಮತ್ ಮತ್ತು ನಿವೃತ್ತ ಮುಖ್ಯ ಗುರು ದೇವಿಪ್ರಸಾದ್ ರವರ ಸ್ಮರಣಾರ್ಥ ಅವರ ಪತ್ನಿ ಶರ್ಮಿಳಾ ಮತ್ತು ಪುತ್ರ ಕೌಸಿಕ್ ರವರನ್ನು ಸನ್ಮಾನಿಸಲಾಯಿತು.
ಬಾಂಡ್ ವಿತರಣೆ
ಒಂದನೇ ತರಗತಿಗೆ ದಾಖಲಾಗುವ ಪ್ರತಿ ಮಗುವಿನ ಹೆಸರಿನಲ್ಲಿ ರೂ 1000ದಂತೆ ನಿಶ್ಚಿತ ಠೇವಣಿ (ವಿದ್ಯಾ ನಿಧಿ) ಇಡುತ್ತಿದ್ದು ಅದರ ಬಾಂಡ್ ನ್ನು ಸಭಾ ಕಾರ್ಯಕ್ರಮದಲ್ಲಿ ಪೋಷಕರಿಗೆ ವಿತರಿಸಲಾಯಿತು.