ಪುತ್ತೂರು : ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕೊಲಾಜಿ (MIO) ಮತ್ತು ಸಂಜೀವಿನಿ ಟ್ರಸ್ಟ್ನಿಂದ ಲಯನ್ಸ್ ಕ್ಲಬ್, ಪುತ್ತೂರು ಸಹಯೋಗದೊಂದಿಗೆ ಕ್ಯಾನ್ಸರ್ ಜಾಗೃತಿ ಅಭಿಯಾನ ಲಯನ್ಸ್ ಸೇವಾ ಮಂದಿರದಲ್ಲಿ ಡಿ.13 ರಂದು ನಡೆಯಿತು.
ಪುತ್ತೂರಿನ ಕ್ಯಾನ್ಸರ್ ಮಾಹಿತಿ ಕೇಂದ್ರದಿಂದ ಪ್ರಾರಂಭವಾಗಿ ಲಯನ್ ಸೇವಾ ಮಂದಿರದವರೆಗೆ ಕ್ಯಾನ್ಸರ್ ಜಾಗೃತಿ ಜಾಥಾ ನಡೆಯಿತು.ಸಮುದಾಯ ಶಿಕ್ಷಣದ ಮೂಲಕ ಹೆಚ್ಚುತ್ತಿರುವ ಕ್ಯಾನ್ಸರ್ ಪ್ರಕರಣಗಳನ್ನು ನಿಭಾಯಿಸುವ ಗುರಿಯನ್ನು ಹೊಂದಿದ್ದ ಜಾಗೃತಿ ಜಾಥಾವನ್ನು ಪುತ್ತೂರು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಉಮೇಶ್ ನಾಯಕ್ ಪುತ್ತೂರು ಉದ್ಘಾಟಿಸಿದರು.

MIO ಮತ್ತು ಸಂಜೀವಿನಿ ಟ್ರಸ್ಟ್ನ ಸಿಬ್ಬಂದಿ ಮೆರವಣಿಗೆಯ ನೇತೃತ್ವ ವಹಿಸಿದರು. ಲಯನ್ಸ್ ಸೇವಾ ಮಂದಿರದಲ್ಲಿ ಕ್ಯಾನ್ಸರ್ ಸಮೀಕ್ಷೆ ಮತ್ತು ಸಂವಾದ ಕಾರ್ಯಕ್ರಮ ನಡೆಯಿತು. ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕೊಲಾಜಿಯ ಮನಶಾಸ್ತ್ರಜ್ಞೆ ಮತ್ತು ಕ್ಯಾನ್ಸರ್ ಕಾರ್ಯಕ್ರಮದ ಸಂಯೋಜಕಿ ಜೇಷ್ಠ ಲಕ್ಷ್ಮಿ ಬೋಳೂರ್ ವಿವಿಧ ಕ್ಯಾನ್ಸರ್ಗಳ ಬಗ್ಗೆ ಸಮಗ್ರ ಮಾಹಿತಿ, ಆರೋಗ್ಯ ರಕ್ಷಣೆಯ ಬಗ್ಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.
ಕ್ಯಾನ್ಸರ್ನ ತಿಳುವಳಿಕೆಯನ್ನು ಹೆಚ್ಚಿಸಲು MIO ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡವರ ನಡುವೆ ಕ್ಯಾನ್ಸರ್ ಸಮೀಕ್ಷೆಯನ್ನು ನಡೆಸಿದರು. ಆರಂಭಿಕ ರೋಗನಿರ್ಣಯಕ್ಕೆ ಅಗತ್ಯವಾದ ಜೀವನಶೈಲಿ-ಹೊಂದಾಣಿಕೆಗಳು ಮತ್ತು ಸ್ತ್ರೀನಿಂಗ್ ಪ್ರೋಟೋಕಾಲ್ಗಳ ಬಗ್ಗೆ ಪ್ರಾಯೋಗಿಕ ಸಲಹೆಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಪ್ರೇಮಲತಾ ರಾವ್, ಕವಿತಾ ಸನಿಲ್, ನರ್ಸಿಂಗ್ ಸೂಪರಿಂಡೆಂಟ್ ಸಂಧ್ಯಾ ದಿನೇಶ್ ಲಯನ್ಸ್, ಆಯುರ್ವೇದ ವೈದ್ಯ ಡಾ. ರಾಘವೇಂದ್ರ ಪ್ರಸಾದ್, ಸಮಾಜ ಸೇವಕ ದಿನೇಶ್ ಹೆಗ್ಡೆ, ನಜೀರ್ ಬೋಳಾಡು, ಉದ್ಯಮಿಗಳಾದ ಬಾಲಕೃಷ್ಣ ನಾಯಕ್, ಶೈಲೇಶ್ ನಾಯಕ್ ಸೇರಿದಂತೆ ಹಲವು ಗಣ್ಯರು,ಸಂಜೀವಿನಿ ಟ್ರಸ್ಟ್ ಸದಸ್ಯರು ಉಪಸ್ಥಿತರಿದ್ದರು.